ಯಾವುದೇ ಸಿನಿಮಾ ರಿಲೀಸ್ ಆದರೂ ಕೆಲವೇ ಗಂಟೆಗಳಲ್ಲಿ ಅದು ಆನ್ಲೈನ್ನಲ್ಲಿ ಲಭ್ಯವಾಗುತ್ತದೆ. ಈ ಮೊದಲು ಬಿಗ್ ಬಜೆಟ್ ಸಿನಿಮಾಗಳಿಗೆ ಮಾತ್ರ ಈ ಕಾಟ ಇತ್ತು. ಈಗ ರಿಲೀಸ್ ಆಗುವ ಪ್ರತಿ ಸಿನಿಮಾಗೂ ಇದೇ ಸಮಸ್ಯೆ ಉಂಟಾಗುತ್ತಿದೆ. ಇದನ್ನು ತಡೆಯುವ ಪ್ರಯತ್ನ ನಡೆಯುತ್ತಿದೆಯಾದರೂ ಸಾಧ್ಯವಾಗಿಲ್ಲ. ಈ ಮಧ್ಯೆ ಕೇರಳ ಸೈಬರ್ ಕ್ರೈಮ್ ಪೊಲೀಸರು ಪೈರಸಿ ವೆಬ್ಸೈಟ್ನಲ್ಲಿ ಸಾಕಷ್ಟು ಕುಖ್ಯಾತಿ ಗಳಿಸಿರುವ Tamil Rockers ಏಜೆಂಟ್ನ ಬಂಧಿಸಿದ್ದಾರೆ. ಈತ ಮಧುರೈನಲ್ಲಿ ಧನುಷ್ ನಟನೆಯ ‘ರಾಯನ್’ ಸಿನಿಮಾ ರೆಕಾರ್ಡ್ ಮಾಡುತ್ತಿದ್ದ. ಈತನ ವಿಚಾರಣೆ ವೇಳೆ Tamil Rockers ಸೈಟ್ನ ಕಿಂಗ್ಪಿನ್ ಹೆಸರು ಹೊರ ಬೀಳಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
Tamil Rockers ಮೊದಲಿನಿಂದಲೂ ಸಿನಿಮಾನ ಪೈರಸಿ ಮಾಡುತ್ತಾ ಬರುತ್ತಿದೆ. ಸಿನಿಮಾ ರಿಲೀಸ್ ಆದ ದಿನವೇ ಈ ವೆಬ್ಸೈಟ್ನಲ್ಲಿ ಅಪ್ಲೋಡ್ ಆದ ಉದಾಹರಣೆ ಇದೆ. ಇತ್ತೀಚೆಗೆ ಮಲಯಾಳಂನಲ್ಲಿ ಪೃಥ್ವಿರಾಜ್ ನಟನೆಯ ‘ಗುರವಾಯುರಪ್ಪನ್ ಅಂಬಲನಾದೈ’ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದ ಪೈರಸಿ ಕಾಪಿ ತಮಿಳ್ ರಾಕರ್ಸ್ ಸೈಟ್ನಲ್ಲಿ ಲಭ್ಯವಾಗಿತ್ತು. ಇದು ನಿರ್ಮಾಪಕಿ ಹಾಗೂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ಅವರ ಪತ್ನಿ ಸುಪ್ರಿಯಾ ಮೆನನ್ ಕೋಪಕ್ಕೆ ಕಾರಣ ಆಗಿತ್ತು. ಈ ಬಗ್ಗೆ ಅವರು ದೂರು ನೀಡಿ ವಿಚಾರಣೆ ನಡೆಸಲು ಕೋರಿದ್ದರು.
ಪೊಲೀಸರು ತನಿಖೆ ನಡೆಸಿ ಸ್ಟೀಫನ್ ರಾಜ್ನ ಬಂಧಿಸಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾಗಳ ಪೈರೇಟೆಡ್ ಕಾಪಿಗಳು ಈತನ ಬಳಿ ಇದ್ದವು. ಸ್ಟೀಫನ್ ರಾಜ್ ಸಿನಿಮಾನ ಶೂಟ್ ಮಾಡಲು ಸಾಕಷ್ಟು ಮೆಥಡ್ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದ. ಥಿಯೇಟರ್ ಸೀಟ್ ಮೇಲೆ ಇರುವ ಕಪ್ ಹೋಲ್ಡರ್ ಮೇಲೆ ಮೊಬೈಲ್ ಇಟ್ಟು ಸಿನಿಮಾ ರೆಕಾರ್ಡ್ ಮಾಡುತ್ತಿದ್ದ. ಈತನಿಗೆ ತಮಿಳ್ ರಾಕರ್ಸ್ ಕಡೆಯಿಂದ ಪ್ರತಿ ಸಿನಿಮಾಗೆ 5 ಸಾವಿರ ರೂಪಾಯಿ ಸಿಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ: ‘ಬಡೇ ಮಿಯಾ ಚೋಟೆ ಮಿಯಾ’ ಟ್ವಿಟರ್ ವಿಮರ್ಶೆ; ಅಕ್ಷಯ್, ಟೈಗರ್ಗಿಂತ ಪೃಥ್ವಿರಾಜ್ಗೆ ಹೆಚ್ಚು ಅಂಕ
ಸ್ಟೀಫನ್ ರಾಜ್ ತಿರುವನಂತಪುರದ ಗೆಸ್ಟ್ಹೌಸ್ನಲ್ಲಿ ವರ್ಷದಿಂದ ಈಚೆಗೆ ವಾಸವಾಗಿದ್ದಾನೆ. ತಮಿಳ್ ರಾಕರ್ಸ್ ಗ್ರೂಪ್ ಜೊತೆ ಈತನಿಗೆ ನಂಟಿದೆ ಎನ್ನಲಾಗಿದೆ. ಈತನ ಮೊಬೈಲ್ ಬೆಲೆ ಲಕ್ಷದ ಮೇಲಿದೆ. ಈತನಿಂದ ತಮಿಳ್ ರಾಕರ್ಸ್ ಕಿಂಗ್ಪಿನ್ ಅರೆಸ್ಟ್ ಆಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Tue, 30 July 24