Rocketry: ರಾಕೆಟ್ರಿ ಸಿನಿಮಾ, ನಂಬಿ ನಾರಾಯಣನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ

| Updated By: ganapathi bhat

Updated on: Apr 05, 2022 | 12:45 PM

ನಟ ಆರ್. ಮಾಧವನ್, ವಿಜ್ಞಾನಿ ನಂಬಿ ನಾರಾಯಣನ್ ಭೇಟಿಯ ವೇಳೆ, ನಂಬಿ ನಾರಾಯಣನ್ ಎದುರಿಸಿದ್ದ ಸಂಕಷ್ಟಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಗ್ಗೆ ಪ್ರಶಂಸೆ ಸೂಚಿಸಿದ್ದಾರೆ.

Rocketry: ರಾಕೆಟ್ರಿ ಸಿನಿಮಾ, ನಂಬಿ ನಾರಾಯಣನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ
ನಂಬಿ ನಾರಾಯಣನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್. ಮಾಧವನ್
Follow us on

ದೆಹಲಿ: ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಹಾಗೂ ನಟ ಮಾಧವನ್​ರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಭಾರತದ ಮಾಜಿ ವಿಜ್ಞಾನಿ, ಇಸ್ರೋದ ಏರೋಸ್ಪೇಸ್ ಇಂಜಿನಿಯರ್ ನಂಬಿ ನಾರಾಯಣನ್ ಬದುಕಿನ ಕುರಿತಾದ ಚಿತ್ರ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾದ ತುಣುಕುಗಳನ್ನು ಮೋದಿ ವೀಕ್ಷಿಸಿದ್ದಾರೆ. ಬಳಿಕ, ಆರ್. ಮಾಧವನ್ ಮತ್ತು ನಂಬಿ ನಾರಾಯಣನ್ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಭೇಟಿಯ ವೇಳೆ, ವಿಜ್ಞಾನಿ ನಂಬಿ ನಾರಾಯಣನ್ ಎದುರಿಸಿದ್ದ ಸಂಕಷ್ಟಗಳ ಬಗ್ಗೆ ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಗ್ಗೆ ಪ್ರಶಂಸೆ ಸೂಚಿಸಿದ್ದಾರೆ. ಪ್ರಧಾನಿ ಭೇಟಿಯ ಚಿತ್ರಗಳನ್ನು ಮಾಧವನ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ನಂಬಿ ನಾರಾಯಣನ್ ಹಾಗೂ ನನಗೆ ಮೋದಿ ಭೇಟಿ ಆಗುವ ಅವಕಾಶ ಸಿಕ್ಕಿತು. ನಾವು ರಾಕೆಟ್ರಿ ಚಿತ್ರದ ಬಗ್ಗೆ ಮಾತನಾಡಿದೆವು. ಪ್ರಧಾನಿ ಮೋದಿ ಮಾತು ಮತ್ತು ಪ್ರಶಂಸೆಯಿಂದ ಸಂತೋಷವಾಯಿತು. ಈ ಅವಕಾಶಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಬಹುಭಾಷಾ ನಟ ಆರ್​. ಮಾಧವನ್​ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಇಷ್ಟು ವರ್ಷಗಳ ಅನುಭವವನ್ನು ಇಟ್ಟುಕೊಂಡು ಈಗ ಅವರು ‘ರಾಕೆಟ್ರಿ: ದಿ ನಂಬಿ ಎಫೆಕ್ಟ್​’ ಸಿನಿಮಾ ನಿರ್ದೇಶಿಸಿದ್ದಾರೆ. ಈಗ ಈ ಚಿತ್ರದ ಟ್ರೇಲರ್​ ಬಿಡುಗಡೆ ಆಗಿದೆ. ಮಾಧವನ್​ ಅವರ ಕೆಲಸ ಕಂಡು ಎಲ್ಲರೂ ಶಹಭಾಷ್​ ಎನ್ನುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೇಲರ್ ನೋಡಿರುವ ಅಮಿತಾಬ್​ ಬಚ್ಚನ್​, ಪ್ರಿಯಾಂಕಾ ಚೋಪ್ರಾ, ಹೃತಿಕ್​ ರೋಷನ್​, ಅಭಿಷೇಕ್​ ಬಚ್ಚನ್​ ಮುಂತಾದವರು ಫಿದಾ ಆಗಿದ್ದಾರೆ.

ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಗೆ ಮಾಧವನ್​ ಯಾವುದೋ ಕಾಲ್ಪನಿಕ ಕಥೆಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ, ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಒಂದು ನೈಜ ಘಟನೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಇಸ್ರೋದ ಮಾಜಿ ರಾಕೆಟ್​ ಸೈನ್ಸ್​ ವಿಜ್ಞಾನಿ ನಂಬಿ ನಾರಾಯಣ್​ ಅವರ ಬಯೋಪಿಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಕಮರ್ಷಿಯಲ್​ ಸ್ಯಾಟಲೈಟ್​ ಮಾರುಕಟ್ಟೆಯಲ್ಲಿ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಲು ಪ್ರಯತ್ನಿಸಿದ ವ್ಯಕ್ತಿಯೇ ನಂಬಿ ನಾರಾಯಣ್​. ಆದರೆ ಅಂಥ ವಿಜ್ಞಾನಿ ಜೈಲು ಸೇರಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ!

ಇದನ್ನೂ ಓದಿ: Rocketry Trailer: ದೇಶದ್ರೋಹ ಆರೋಪ ಹೊತ್ತಿದ್ದ ನಂಬಿ ನಾರಾಯಣ್​ ಬಗ್ಗೆ ಮಾಧವನ್​ ಸಿನಿಮಾ! ‘ರಾಕೆಟ್ರಿ’ ಚಿತ್ರದ ರಿಯಲ್​ ಕಥೆ ಏನು?

ಇದನ್ನೂ ಓದಿ: Narendra Modi: ಎಲ್ಲಾ ಚುನಾವಣೆಗಳಲ್ಲೂ ಗೆಲ್ಲುತ್ತಾ ಹೋಗಲು ಬಿಜೆಪಿ ಯಂತ್ರವಲ್ಲ – ಪ್ರಧಾನಿ ನರೇಂದ್ರ ಮೋದಿ

Published On - 6:40 pm, Tue, 6 April 21