ಹೇಗಿದೆ ಪೂಜಾ ಹೆಗ್ಡೆ ಆರೋಗ್ಯ? ಫೋಟೋ ಮೂಲಕ ಮಾಹಿತಿ ಹಂಚಿಕೊಂಡ ನಟಿ
ತೆಲುಗು ಹಾಗೂ ಹಿಂದಿಯಲ್ಲಿ ಪೂಜಾ ಹೆಗ್ಡೆ ಬ್ಯುಸಿ ಇದ್ದಾರೆ. ಅವರ ಕಾಲಿಗೆ ಪೆಟ್ಟಾಗಿರುವುದರಿಂದ ಅವರು ಸಿನಿಮಾ ಕೆಲಸಗಳಿಂದ ದೂರ ಉಳಿಯೋದು ಅನಿವಾರ್ಯ ಆಗಿದೆ.

ನಟಿ ಪೂಜಾ ಹೆಗ್ಡೆ (Pooja Hegde) ಅವರಿಗೆ ಅಕ್ಟೋಬರ್ ತಿಂಗಳಲ್ಲಿ ಕಾಲಿಗೆ ಪೆಟ್ಟಾಗಿತ್ತು. ಸಲ್ಮಾನ್ ಖಾನ್ (Salman Khan) ನಟನೆಯ ‘ಕಿಸಿ ಕಾ ಭಾಯ್, ಕಿಸಿ ಕಿ ಜಾನ್’ ಚಿತ್ರದ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿತ್ತು. ಪೂಜಾ ಹೆಗ್ಡೆ ಕಳೆದ ಎರಡು ವಾರಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗ ಅವರ ಆರೋಗ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ಬಗ್ಗೆ ಪೂಜಾ ಹೆಗ್ಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ನಲ್ಲಿ ಬೇಡಿಕೆ ಹೊಂದಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅಲ್ಲು ಅರ್ಜುನ್ ಜತೆಗಿನ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟ. ಈಗ ತೆಲುಗು ಹಾಗೂ ಹಿಂದಿಯಲ್ಲಿ ಪೂಜಾ ಹೆಗ್ಡೆ ಬ್ಯುಸಿ ಇದ್ದಾರೆ. ಅವರ ಕಾಲಿಗೆ ಪೆಟ್ಟಾಗಿರುವುದರಿಂದ ಅವರು ಸಿನಿಮಾ ಕೆಲಸಗಳಿಂದ ದೂರ ಉಳಿಯೋದು ಅನಿವಾರ್ಯ ಆಗಿದೆ.
ಪೂಜಾ ಹೆಗ್ಡೆ ಅವರು ಬಕೆಟ್ ಒಳಗೆ ಕಾಲಿಟ್ಟುಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಪ್ರತಿ ಮುಂಜಾನೆ ಹೀಗೆಯೇ ಇರುತ್ತದೆ. ರಿಕವರಿ ಹಂತದಲ್ಲಿ ಇದ್ದೇನೆ. ನಾನು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋ ಅವರ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ನಟಿ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
ಪೂಜಾ ಹೆಗ್ಡೆ ಅವರಿಗೆ ಸಖತ್ ಬೇಡಿಕೆ ಇದೆ. ‘ಕಿಸಿ ಕಾ ಭಾಯ್, ಕಿಸಿ ಕಿ ಜಾನ್’ ಚಿತ್ರದಲ್ಲಿ ಅವರು ಸಲ್ಮಾನ್ ಖಾನ್ಗೆ ಜತೆಯಾಗಿದ್ದಾರೆ. ಬಾಲಿವುಡ್ ಸ್ಟಾರ್ ನಟ ಸಲ್ಲುಗೆ ಜತೆಯಾಗುತ್ತಿರುವುದು ಅವರು ಇದೇ ಮೊದಲು. ಇದಲ್ಲದೆ, ಮಹೇಶ್ ಬಾಬು ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಸೆಟ್ಟೇರುವುದು ವಿಳಂಬ ಆಗುತ್ತಿದೆ.
ಇದನ್ನೂ ಓದಿ: Pooja Hegde: ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿರುವ ಪೂಜಾ ಹೆಗ್ಡೆ; ಫೋಟೋ ನೋಡಿ
ಈ ಎರಡು ಚಿತ್ರಗಳನ್ನು ಬಿಟ್ಟು ಪೂಜಾ ಹೆಗ್ಡೆ ಅವರು ಬೇರೆ ಯಾವುದೇ ಚಿತ್ರಗಳನ್ನು ಒಪ್ಪಿಕೊಂಡಿಲ್ಲ. ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಆದರೆ, ಈಗಿರುವ ಕಮಿಟ್ಮೆಂಟ್ಗಳನ್ನು ಪೂರ್ಣಗೊಳಿಸಿ ನಂತರ ಅವರು ಬೇರೆ ಸಿನಿಮಾ ಒಪ್ಪಿಕೊಳ್ಳುವ ಸಾಧ್ಯತೆ ಇದೆ.