ರಜನೀಕಾಂತ್ ಸೂಪರ್ ಸ್ಟಾರ್ ಅಲ್ಲ, ಚಿರಂಜೀವಿ ನಮ್ಮ ಸೂಪರ್ ಸ್ಟಾರ್: ಪೋಸಾನಿ

Posani Krishna Murali: ಚಂದ್ರಬಾಬು ನಾಯ್ಡು ಅವರನ್ನು ಕೊಂಡಾಡಿದ ರಜನೀಕಾಂತ್ ವಿರುದ್ಧ ಆಂಧ್ರದಲ್ಲಿ ಕೆಲವರು ಟೀಕೆ ಮಾಡಿದ್ದು, ರಜನೀಕಾಂತ್ ನಮ್ಮ ಸೂಪರ್ ಸ್ಟಾರ್ ಅಲ್ಲ, ಚಿರಂಜೀವಿ ಸೂಪರ್ ಸ್ಟಾರ್ ಎಂದಿದ್ದಾರೆ ನಟ ಪೋಸಾನಿ ಕೃಷ್ಣ ಮುರಳಿ.

ರಜನೀಕಾಂತ್ ಸೂಪರ್ ಸ್ಟಾರ್ ಅಲ್ಲ, ಚಿರಂಜೀವಿ ನಮ್ಮ ಸೂಪರ್ ಸ್ಟಾರ್: ಪೋಸಾನಿ
ರಜನೀಕಾಂತ್-ಚಿರಂಜೀವಿ
Follow us
ಮಂಜುನಾಥ ಸಿ.
|

Updated on: May 02, 2023 | 9:32 PM

ಅವಿಭಜಿತ ಆಂಧ್ರ ಪ್ರದೇಶದ ಮಾಜಿ ಸಿಎಂ, ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ (Sr NTR) ಅವರ ನೂರನೇ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಎನ್​ಟಿಆರ್ 100 (NTR 100) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನೀಕಾಂತ್ (Rajinikanth), ವೇದಿಕೆ ಮೇಲೆ ನಿಂತು ಚಂದ್ರಬಾಬು ನಾಯ್ಡು ಪರವಾಗಿ ಆಡಿದ್ದ ಮಾತುಗಳು ಆಂಧ್ರದಲ್ಲಿ ಚರ್ಚೆಗೆ ಕಾರಣವಾಗಿವೆ. ಚಂದ್ರಬಾಬು ನಾಯ್ಡು ಅವರನ್ನು ಹೊಗಳಿದ ರಜನೀಕಾಂತ್ ಅವರನ್ನು ಹಲವರು ಟೀಕಿಸುತ್ತಿದ್ದಾರೆ. ಹೊರರಾಜ್ಯದಿಂದ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದೆಲ್ಲ ಟೀಕಿಸುತ್ತಿದ್ದಾರೆ. ಇದೀಗ ರಜನೀ ನಮ್ಮ ಸೂಪರ್ ಸ್ಟಾರ್ ಅಲ್ಲ ಚಿರಂಜೀವಿ (Chiranjeevi) ನಮ್ಮ ಸೂಪರ್ ಸ್ಟಾರ್ ಎಂದಿದ್ದಾರೆ ಜನಪ್ರಿಯ ನಟ, ವೈಎಸ್​ಆರ್ ಕಾಂಗ್ರೆಸ್ ಸದಸ್ಯ ಪೊಸಾನಿ ಕೃಷ್ಣ ಮುರಳಿ (Posani Krishna Murali).

ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪೋಸಾನಿ ಕೃಷ್ಣ ಮುರಳಿ, ”ರಜನೀಕಾಂತ್ ಪ್ರತಿದಿನವೂ ಆಂಧ್ರಕ್ಕೆ ಬರಲಿ, ಅವರ ಗೆಳೆಯರಾದ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಲಿ, ಅವರನ್ನು ಹೊಗಳಲಿ ಆದರೆ ನಮ್ಮನ್ನು, ಆಂಧ್ರದ ಜನರನ್ನು ವಿಮರ್ಶೆ ಮಾಡುವುದು ಬೇಕಾಗಿಲ್ಲ. ನಮಗೆ ನಮ್ಮದೇ ಆದ ಸೂಪರ್ ಸ್ಟಾರ್ ಇದ್ದಾರೆ ಅದುವೇ ಚಿರಂಜೀವಿ, ಭಾರತದಲ್ಲಿಯೇ ಅದ್ಭುತ ನಟ ಅವರು, ರಜನೀಕಾಂತ್ ತಮಿಳುನಾಡಿನ ಸೂಪರ್ ಸ್ಟಾರ್ ಅವರು ತೆಲುಗು ರಾಜ್ಯಗಳ ಸೂಪರ್ ಸ್ಟಾರ್ ಅಲ್ಲ” ಎಂದಿದ್ದಾರೆ.

”ಒಂದೊಮ್ಮೆ ಚಿರಂಜೀವಿವರು ಏನಾದರೂ ಮಾತನಾಡಿದ್ದರೆ ನಾವು ಯೋಚಿಸುತ್ತಿದ್ದೆವು. ಅವರ ಮಾತಿಗೆ ನಾವು ಗೌರವ ಕೊಡುತ್ತೇವೆ, ಮೌಲ್ಯ ಕೊಡುತ್ತೇವೆ ಆದರೆ ರಜನೀಕಾಂತ್ ಇಲ್ಲಿ ಬಂದು ಏನೋ ಮಾತನಾಡಿದರೆ ನಾವೇಕೆ ಅದಕ್ಕೆ ಮೌಲ್ಯ ಕೊಡಬೇಕು, ನಕ್ಕು ಸುಮ್ಮನಾಗುತ್ತೇವಷ್ಟೆ. ಚಿರಂಜೀವಿ ಅವರು ಮಾತನಾಡಿದರೆ ಚಂದ್ರಬಾಬು ನಾಯ್ಡು ಕೇಳುತ್ತಾರೆ. ಸಿಎಂ ಜಗನ್ ಸಹ ಅಣ್ಣ ಏನೋ ಮಾತನಾಡಿದ್ದಾರೆ ಎಂದು ಗಮನವಹಿಸುತ್ತಾರೆ. ಆದರೆ ರಜನೀಕಾಂತ್ ಮಾತಿಗೆ ಯಾರು ಗೌರವ ಕೊಡುತ್ತಾರೆ” ಎಂದು ವ್ಯಂಗ್ಯ ಮಾಡಿದ್ದಾರೆ ಪೋಸಾನಿ.

ಇದನ್ನೂ ಓದಿ:ಚಂದ್ರಬಾಬು ನಾಯ್ಡು ಜೊತೆ ಸೇರಿ ಎನ್​ಟಿಆರ್ ಅವರನ್ನು ಮತ್ತೆ ಕೊಂದಿದ್ದಾರೆ ರಜಿನೀಕಾಂತ್: ನಟಿ ರೋಜಾ

ಪ್ರಸ್ತುತ ಆಂಧ್ರ ಸರ್ಕಾರವು ನಂದಿ ಪ್ರಶಸ್ತಿಗಳನ್ನು ಸೂಕ್ತವಾಗಿ ನೀಡುತ್ತಿಲ್ಲ ಎಂಬ ಬಗ್ಗೆ ಮಾತನಾಡುತ್ತಾ, ಈಗಿರುವ ಸರ್ಕಾರವು ಒಳ್ಳೆಯ ರೌಡಿ, ಒಳ್ಳೆಯ ಗೂಂಡಾ ಪ್ರಶಸ್ತಿಗಳನ್ನಷ್ಟೆ ನೀಡಬಲ್ಲದು ಇನ್ನೊಂದೆರಡು ವರ್ಷವಾಗಲಿ ಆಗ ಮತ್ತೆ ಘನತೆಯಿಂದ ಸಿನಿಮಾ ಪ್ರಶಸ್ತಿಗಳನ್ನು ಕೊಡಬಹುದು ಎಂದಿರುವ ಜನಪ್ರಿಯ ನಿರ್ಮಾಪಕ ಅಶ್ವಿನಿ ದತ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಪೋಸಾನಿ, ಅಶ್ವಿನಿ ದತ್ ಅವರು ”ಅತ್ಯುತ್ತಮ ಬೆನ್ನಿಗೆ ಚೂರಿ ಹಾಕಿದವ, ಅತ್ಯುತ್ತಮ ಲೋ.ರ್, ಅತ್ಯುತ್ತಮ ವಂಚಕ ಈ ಪ್ರಶಸ್ತಿಗಳ ಹೆಸರನ್ನೆಲ್ಲ ಬಿಟ್ಟುಬಿಟ್ಟಿದ್ದಾರೆ” ಎಂದಿದ್ದಾರೆ. ಈ ಪ್ರಶಸ್ತಿಗಳನ್ನೆಲ್ಲ ಚಂದ್ರಬಾಬು ನಾಯ್ಡುಗೆ ನೀಡಬೇಕು ಎಂದು ಪೋಸಾನಿ ಪರೋಕ್ಷವಾಗಿ ಹೇಳಿದ್ದಾರೆ.

ಪೋಸಾನಿ ಕೃಷ್ಣ ಮುರಳಿ, ತೆಲುಗಿನ ಜನಪ್ರಿಯ ಪೋಷಕ ನಟ ಹಾಗೂ ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಸದಸ್ಯ, ಈ ಹಿಂದೆ ಪವನ್ ಕಲ್ಯಾಣ್, ಸಿಎಂ ಜಗನ್ ವಿರುದ್ಧ ಮಾತನಾಡಿದ್ದಾಗ, ಪೋಸಾನಿ, ಪವನ್ ಕಲ್ಯಾಣ್​ರ ಖಾಸಗಿ ಜೀವನದ ಬಗ್ಗೆ ಅವರ ಪತ್ನಿಯ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದರು. ಆಗ ಪವನ್ ಕಲ್ಯಾಣ್ ಅಭಿಮಾನಿಗಳು ಪೋಸಾನಿ ಮೇಲೆ ದಾಳಿ ಮಾಡಿ ಹಲ್ಲೆ ಸಹ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ