ಸಲಾರ್​ ಚಿತ್ರದ ಎರಡನೇ ಶೆಡ್ಯೂಲ್ ಮುಗಿಸಿ ಬರೋಬ್ಬರಿ 400 ಕೋಟಿ ಬಜೆಟ್​ನ ಆದಿಪುರುಷ್ ಚಿತ್ರದಲ್ಲಿ ತೊಡಗಿಸಿಕೊಂಡ ಪ್ರಭಾಸ್

Prabhas: ಬಹುಬೇಡಿಕೆಯ ನಟ ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಚಿತ್ರೀಕರಣ ಪುನರಾರಂಭಗೊಂಡಿದೆ. ಚಿತ್ರತಂಡದ ಮೂರನೇ ಶೆಡ್ಯೂಲ್​ಗೆ ಪ್ರಭಾಸ್ ಹಾಗೂ ಕೃತಿ ಜೊತೆಯಾಗಿದ್ದಾರೆ.

ಸಲಾರ್​ ಚಿತ್ರದ ಎರಡನೇ ಶೆಡ್ಯೂಲ್ ಮುಗಿಸಿ ಬರೋಬ್ಬರಿ 400 ಕೋಟಿ ಬಜೆಟ್​ನ ಆದಿಪುರುಷ್ ಚಿತ್ರದಲ್ಲಿ ತೊಡಗಿಸಿಕೊಂಡ ಪ್ರಭಾಸ್
ಸಾಂದರ್ಭಿಕ ಚಿತ್ರ
Edited By:

Updated on: Aug 18, 2021 | 7:12 PM

ಮುಂಬೈ: ಟಾಲಿವುಡ್​ನ ಬಹುಬೇಡಿಕೆಯ ನಟ ಪ್ರಭಾಸ್ ‘ಆದಿಪುರುಷ್’ ಚಿತ್ರದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ‘ಸಲಾರ್’ ಚಿತ್ರದ ಎರಡನೇ ಶೆಡ್ಯೂಲ್ ಮುಗಿಸಿ ಅವರು ಮುಂಬೈಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಬೈನಲ್ಲಿ ಪ್ರಭಾಸ್ ಕೃತಿ ಸನೂನ್ ಅವರೊಂದಿಗೆ ಆದಿಪುರುಷ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕೆ ಈಗಾಗಲೇ ಕಾಯುತ್ತಿದ್ದು, ಟ್ವಿಟರ್​ನಲ್ಲಿ ಆದಿಪುರುಷ್ ಹ್ಯಾಶ್​ಟ್ಯಾಗ್ ಟ್ರೆಂಡ್ ಆಗಿದೆ. 

ಓಂ ರಾವುತ್ ನಿರ್ದೇಶನದ ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ಶ್ರೀ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃತಿ ಸನೂನ್ ಸೀತಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಭಾಸ್ ‘ಆದಿಪುರುಷ್’ ಚಿತ್ರದಲ್ಲಿ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಸಹಕಲಾವಿದ ಸೈಫ್ ಅಲಿ ಖಾನ್​ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದರು. ಕೊರೊನಾ ಎರಡನೇ ಅಲೆ ಕಾಣಿಸಿಕೊಳ್ಳುವ ಮುನ್ನ ಆದಿಪುರುಷ್ ಚಿತ್ರತಂಡ ಮುಂಬೈನಲ್ಲಿ ಬೀಡುಬಿಟ್ಟು ಚಿತ್ರೀಕರಣದಲ್ಲಿ ತೊಡಗಿಕೊಂಡಿತ್ತು.

ಮಾರ್ಚ್ 12ರಂದು ಪ್ರಭಾಸ್ ಕೃತಿ ಸನೂನ್ ಹಾಗೂ ಸನ್ನಿ ಸಿಂಗ್​ರನ್ನು ಸೆಟ್​ಗೆ ಸ್ವಾಗತಿಸಿದ್ದರು. ಚಿತ್ರೀಕರಣವೂ ಭರದಿಂದ ಸಾಗಿತ್ತು. ಆದರೆ ಲಾಕ್​ಡೌನ್​ನ ಕಾರಣದಿಂದ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. ಜುಲೈ 3ರಂದು ಚಿತ್ರೀಕರಣವು ಮತ್ತೆ ಆರಂಭವಾಗಿದ್ದು, ಈಗ ಸೆಟ್​ಗೆ ಮರಳಿ ಪ್ರಭಾಸ್ ಹಾಗೂ ಕೃತಿ ಪ್ರವೇಶ ಮಾಡಿದ್ದಾರೆ. ಪ್ರಸ್ತುತ ‘ಆದಿಪುರುಷ್’ ಚಿತ್ರದ ಮೂರನೇ ಶೆಡ್ಯೂಲ್ ಚಿತ್ರೀಕರಣ ನಡೆಯುತ್ತಿದೆ.

ಆದಿಪುರುಷ್ ಚಿತ್ರದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ನಟಿಸುತ್ತಿದ್ದಾರೆ. ಈ ಚಿತ್ರವು ಅದ್ದೂರಿ ಬಜೆಟ್​ನ ಚಿತ್ರವಾಗಿದ್ದು ಸುಮಾರು 400ಕೋಟಿ ಬಜೆಟ್​ನಲ್ಲಿ ತಯಾರಾಗಲಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನೂ ತಿಳಿಸಲಾಗಿದ್ದು, 2022ರ ಆಗಸ್ಟ್ 11ರಂದು ಹಲವು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಪ್ರಭಾಸ್ ಈ ಚಿತ್ರವಲ್ಲದೆ ಸಲಾರ್ ಚಿತ್ರದಲ್ಲಿ ಶೃತಿ ಹಾಸನ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಇದಲ್ಲದೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಣಿಸಿಕೊಂಡಿರುವ ‘ರಾಧೆಶ್ಯಾಮ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ:

ಸೈಲೆಂಟ್​ ಆಗಿ ಎಂಗೇಜ್​ಮೆಂಟ್​ ಮಾಡಿಕೊಂಡ ಕತ್ರಿನಾ-ವಿಕ್ಕಿ? ಸಲ್ಲುಗೆ ಬೇಕಂತೆ ಮದುವೆ ಲೊಕೇಷನ್​

ಕಂಗನಾಗೆ ಇನ್​ಸ್ಟಾಗ್ರಾಮ್​ಗೆ ಚೀನಾ ಹ್ಯಾಕರ್ಸ್​ ಕಾಟ; ತಾಲಿಬಾನ್​ ಪೋಸ್ಟ್​ಗಳು ಡಿಲೀಟ್ ​

(Prabhas and Kriti Sanon started shooting for Adipurush in Mumbai)