ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್​’ ಸಿನಿಮಾದಲ್ಲಿ ಜೋಡಿ ಆಗ್ತಾರಾ ತ್ರಿಶಾ-ಪ್ರಭಾಸ್​?

|

Updated on: Aug 06, 2024 | 9:35 PM

‘ವರ್ಷಂ’, ‘ಪೌರ್ಣಮಿ’, ‘ಬುಜ್ಜಿಗಾಡು’ ಸಿನಿಮಾಗಳಲ್ಲಿ ಪ್ರಭಾಸ್​ ಮತ್ತು ತ್ರಿಶಾ ಕೃಷ್ಣನ್​ ಜೋಡಿ ಆಗಿದ್ದರು. ಈಗ ಅವರನ್ನು ನಾಲ್ಕನೇ ಬಾರಿಗೆ ಒಂದಾಗಿಸಲು ಪ್ರಯತ್ನಗಳು ನಡೆಯುತ್ತಿವೆ. ‘ಸ್ಪಿರಿಟ್​’ ಸಿನಿಮಾದಲ್ಲಿ ಪ್ರಭಾಸ್​ ಜೊತೆ ತ್ರಿಶಾ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ತ್ರಿಶಾ ಜೊತೆ ಚಿತ್ರತಂಡದವರು ಮಾತಕಥೆ ನಡೆಸುತ್ತಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ.

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್​’ ಸಿನಿಮಾದಲ್ಲಿ ಜೋಡಿ ಆಗ್ತಾರಾ ತ್ರಿಶಾ-ಪ್ರಭಾಸ್​?
ಪ್ರಭಾಸ್​, ತ್ರಿಶಾ
Follow us on

‘ಅನಿಮಲ್​’ ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ ಅವರು ಪ್ರಭಾಸ್​ ಜೊತೆ ಹೊಸ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಚಿತ್ರಕ್ಕೆ ತಯಾರಿ ನಡೆಯುತ್ತಿದೆ. ‘ಸ್ಪಿರಿಟ್​’ ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಪಾತ್ರವರ್ಗದ ಆಯ್ಕೆಯಲ್ಲಿ ಸಂದೀಪ್​ ರೆಡ್ಡಿ ವಂಗಾ ಅವರು ಬ್ಯುಸಿ ಆಗಿದ್ದಾರೆ. ಚಿತ್ರತಂಡದಿಂದ ಅಧಿಕೃತವಾಗಿ ಮಾಹಿತಿ ಹೊರಬೀಳುವುದಕ್ಕೂ ಮುನ್ನವೇ ಕೆಲವು ಅಂತೆ-ಕಂತೆಗಳು ಹರಿದಾಡಲು ಆರಂಭಿಸಿವೆ. ‘ಸ್ಪಿರಿಟ್​’ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ಜೋಡಿಯಾಗಿ ತ್ರಿಶಾ ಕೃಷ್ಣನ್​ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಟಿ ತ್ರಿಶಾ ಕೃಷ್ಣನ್​ ಅವರು ಕಳೆದ 2 ದಶಕಗಳಿಂದಲೂ ಬಣ್ಣದ ಲೋಕದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹೀರೋಯಿನ್​ ಪಾತ್ರಗಳಿಗೆ ಈಗಲೂ ಅವರು ಬೇಡಿಕೆಯ ನಟಿಯಾಗಿದ್ದಾರೆ. ಸ್ಟಾರ್​ ನಟರಿಗೆ ತ್ರಿಶಾ ಜೋಡಿ ಆಗುತ್ತಿದ್ದಾರೆ. ‘ಸ್ಪಿರಿಟ್​’ ಚಿತ್ರಕ್ಕಾಗಿ ತ್ರಿಶಾ ಜೊತೆ ಸಂದೀಪ್ ರೆಡ್ಡಿ ವಂಗ ಅವರು ಮಾತುಕತೆ ನಡೆಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಆದರೆ ಚಿತ್ರತಂಡದವರು ಅಧಿಕೃತವಾಗಿ ಘೋಷಿಸುವುದು ಬಾಕಿ ಇದೆ.

ಪ್ರಭಾಸ್​ ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಯಾವುದೇ ರೀತಿಯಲ್ಲಿ ವಿಳಂಬ ಮಾಡದೇ ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಪ್ರಭಾಸ್​ ಬ್ಯುಸಿ ಆಗಿದ್ದಾರೆ. ‘ದಿ ರಾಜಾ ಸಾಬ್​’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಸಂದೀಪ್​ ರೆಡ್ಡಿ ವಂಗಾ ಜೊತೆ ಪ್ರಭಾಸ್​ ಕೈ ಜೋಡಿಸಿರುವ ‘ಸ್ಪಿರಿಟ್​’ ಸಿನಿಮಾದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: ‘ಆ ಉದ್ದೇಶಕ್ಕೆ ತ್ರಿಶಾರನ್ನು 25 ಲಕ್ಷ ರೂಪಾಯಿಗೆ ಕೇಳಿದ್ರು’ ಎಂದ ಎ.ವಿ. ರಾಜು ವಿರುದ್ಧ ನಟಿ ಗರಂ

ಸಂದೀಪ್​ ರೆಡ್ಡಿ ವಂಗಾ ಅವರು ‘ಅರ್ಜುನ್​ ರೆಡ್ಡಿ’, ‘ಕಬೀರ್ ಸಿಂಗ್​’, ‘ಅನಿಮಲ್​’ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರವನ್ನು ಅವಹೇಳನಕಾರಿಯಾಗಿ ತೋರಿಸಲಾಗುತ್ತದೆ ಎಂಬ ಟೀಕೆ ಇದೆ. ‘ಅನಿಮಲ್​’ ಬಿಡುಗಡೆ ಆದಾಗ ಸಾಕಷ್ಟು ನೆಗೆಟಿವ್​ ಕಮೆಂಟ್​ಗಳು ಬಂದವು. ಹಾಗಾಗಿ ಸಂದೀಪ್ ರೆಡ್ಡಿ ವಂಗಾ ಜೊತೆ ಸಿನಿಮಾ ಮಾಡಲು ತ್ರಿಶಾ ಒಪ್ಪಿಕೊಳ್ಳುತ್ತಾರಾ ಎಂಬ ಅನುಮಾನ ಅನೇಕರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.