‘ಕಣ್ಣಪ್ಪ’ ಸಿನಿಮಾ ನೋಡಿ ಕೇಸ್ ಹಾಕಲು ನಿರ್ಧರಿಸಿದ ಪ್ರಭಾಸ್ ಅಭಿಮಾನಿ

ನಟ ಪ್ರಭಾಸ್ ಅವರು ಅತಿಥಿ ಪಾತ್ರ ಮಾಡಿದ್ದಾರೆ ಎಂಬ ಕಾರಣಕ್ಕೆ ‘ಕಣ್ಣಪ್ಪ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿತ್ತು. ಆದರೆ ಸಿನಿಮಾ ನೋಡಿದ ಬಳಿಕ ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಆಗಿದೆ. ಚಿತ್ರತಂಡದ ಮೇಲೆ ಪ್ರಭಾಸ್ ಫ್ಯಾನ್ಸ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಕಣ್ಣಪ್ಪ’ ಸಿನಿಮಾ ನೋಡಿ ಕೇಸ್ ಹಾಕಲು ನಿರ್ಧರಿಸಿದ ಪ್ರಭಾಸ್ ಅಭಿಮಾನಿ
Prabhas

Updated on: Jun 27, 2025 | 7:35 PM

ಬಹುನಿರೀಕ್ಷಿತ ‘ಕಣ್ಣಪ್ಪ’ ಸಿನಿಮಾ (Kannappa Movie) ಇಂದು (ಜೂನ್ 27) ಬಿಡುಗಡೆ ಆಗಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರಿಗಂತೂ ಸಿಕ್ಕಾಪಟ್ಟೆ ಕೋಪ ಬಂದಿದೆ. ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರ ಪೈಕಿ ಕೆಲವರು ಸಖತ್ ಗರಂ ಆಗಿದ್ದಾರೆ. ಎಷ್ಟರಮಟ್ಟಿಗೆ ಎಂದರೆ, ಸಿನಿಮಾದ ಮುಖ್ಯ ಪಾತ್ರಧಾರಿ ವಿಷ್ಣು ಮಂಚು ಮೇಲೆ ಕೇಸ್ ಹಾಕುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣ, ಪ್ರಭಾಸ್ (Prabhas) ಪಾತ್ರವನ್ನು ಸರಿಯಾಗಿ ತೋರಿಸದೇ ಇರುವುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

‘ಕಣ್ಣಪ್ಪ’ ಸಿನಿಮಾದಲ್ಲಿ ವಿಷ್ಣು ಮಂಜು, ಮೋಹನ್ ಬಾಬು ಮುಂತಾದವರು ನಟಿಸಿದ್ದಾರೆ. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಮುಂತಾದ ನಟರು ಅತಿಥಿ ಪಾತ್ರ ಮಅಡಿದ್ದಾರೆ. ಪ್ರಭಾಸ್ ಇದ್ದಾರೆ ಎಂಬ ಕಾರಣಕ್ಕೆ ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಬಂದಿದ್ದಾರೆ. ಆದರೆ ಸಿನಿಮಾ ನೋಡಿದಾಗ ಹಲವರಿಗೆ ನಿರಾಸೆ ಆಗಿದೆ. ಅಭಿಮಾನಿಯೊಬ್ಬರು ಸಖತ್ ಗರಂ ಆಗಿ ಮಾತನಾಡಿದ್ದಾರೆ.

ಸಿನಿಮಾ ನೋಡಿದ ಬಳಿಕ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಭಾಸ್ ಅಭಿಮಾನಿಯೊಬ್ಬರು ಕೇಸ್ ಹಾಕುವ ಮಟ್ಟಕ್ಕೆ ಕೋಪ ತೋರಿಸಿದ್ದಾರೆ. ‘ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನಾನು ವಿಷ್ಣು ಮಂಚು ವಿರುದ್ಧ ಕೇಸ್ ಹಾಕುತ್ತೇನೆ. ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದು ಏನು? ಫಸ್ಟ್ ಹಾಫ್​ನಲ್ಲಿ ಶಿವ ಎಲ್ಲಿದ್ದಾನೆ? ನಾನು ಪ್ರಭಾಸ್ ಅಭಿಮಾನಿ. ಭಕ್ತ ಕಣ್ಣಪ್ಪ ಸಿನಿಮಾ ನೋಡಿಕೊಂಡು ಇಲ್ಲಿಗೆ ಬಂದೆ’ ಎಂದು ಹೇಳಿರುವ ಆ ವ್ಯಕ್ತಿಗೆ ‘ಕಣ್ಣಪ್ಪ’ ಸಿನಿಮಾದಿಂದ ನಿರಾಸೆ ಆಗಿದೆ.

ಇದನ್ನೂ ಓದಿ
ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ‘ಕಲ್ಕಿ 2898 ಎಡಿ’ ಟೀಂ
ಪ್ರಭಾಸ್ ಜೊತೆಗೆ ಹೊಂಬಾಳೆಯ 4ನೇ ಸಿನಿಮಾ, ನಿರ್ದೇಶಕ ಯಾರು?
ತಂದೆ ಮೃತಪಟ್ಟ ನೋವಲ್ಲೂ ಸಹಾಯ ಮಾಡೋದು ಮರೆತಿರಲಿಲ್ಲ ಪ್ರಭಾಸ್  
ಪ್ರಭಾಸ್​ರ ಹೊಸ ಚಿತ್ರ ಶೂಟಿಂಗ್​ಗೆ ಮುಹೂರ್ತ ಫಿಕ್ಸ್, ಬಿಡುಗಡೆ ಯಾವಾಗ?

‘ಪ್ರಭಾಸ್ ಕುಟುಂಬದವರು ಇವರಿಗೆ ಸಿನಿಮಾ ಮಾಡಲು ಹಕ್ಕುಗಳನ್ನು ಕೊಟ್ಟರು. ಇದು ನಿಮ್ಮ ಡ್ರೀಮ್ ಪ್ರಾಜೆಕ್ಟ್ ಆಗಿದೇ ಎಂದ ಮಾತ್ರಕ್ಕೆ ನಿಮಗೆ ಬೇಕಾದಂತೆ ಸಿನಿಮಾ ಮಾಡೋದಲ್ಲ. ಟ್ರೇಲರ್​ನಲ್ಲಿ ಇವರು ತಪ್ಪು ಮಾಹಿತಿ ನೀಡಿದರು. ಸಿನಿಮಾವನ್ನು ಭಕ್ತ ಕಣ್ಣಪ್ಪ ರೀತಿ ಪ್ರಚಾರ ಮಾಡಿದ್ದೀರಿ. ಆದರೆ ನಿಮ್ಮ ಹೀರೋಯಿಸಂ ಯಾಕೆ ತೋರಿಸಿದ್ದೀರಿ? ಅದರ ಬದಲು ಭಕ್ತಿ ತೋರಿಸಿ. ನಾವು ಪ್ರಭಾಸ್ ಸಲುವಾಗಿ ಬಂದೆವು. ಸೆಕೆಂಡ್​ ಹಾಫ್​ನಲ್ಲಿ 20 ನಿಮಿಷ ಸಿನಿಮಾ ನೋಡಿದ್ದೇವೆ ಅಷ್ಟೇ’ ಎಂದಿದ್ದಾರೆ ಕೋಪಗೊಂಡ ಅಭಿಮಾನಿ.

ಇದನ್ನೂ ಓದಿ: ‘ಕಣ್ಣಪ್ಪ’ ಟ್ವಿಟ್ಟರ್ ವಿಮರ್ಶೆ: ಪರೀಕ್ಷೆ ಬರೆದಿದ್ದು ಮಂಚು ವಿಷ್ಣು, ಪಾಸ್ ಆಗಿದ್ದು ಪ್ರಭಾಸ್

ಕೆಲವರು ಈ ಸಿನಿಮಾದ ವಿಎಫ್​ಎಕ್ಸ್ ಬಗ್ಗೆ ತಕರಾರು ತೆಗೆದಿದ್ದಾರೆ. ‘ಆದಿಪುರುಷ್’ ಬಳಿಕ ಅತಿ ಕಳಪೆ ಮಟ್ಟದ ವಿಎಫ್​ಎಕ್ಸ್ ‘ಕಣ್ಣಪ್ಪ’ ಸಿನಿಮಾದಲ್ಲಿ ಇದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾದ ಅವಧಿ (3 ಗಂಟೆ) ತುಂಬಾ ದೀರ್ಘವಾಯಿತು ಎಂದು ಕೂಡ ಜನರು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.