ಪ್ರಭಾಸ್ರ ಹೊಸ ಚಿತ್ರ ಶೂಟಿಂಗ್ಗೆ ಮುಹೂರ್ತ ಫಿಕ್ಸ್, ಬಿಡುಗಡೆ ಯಾವಾಗ?
Prabhas: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಚಿತ್ರೀಕರಣ ಮುಗಿದು ಹೋಗಿದೆ. ರಘು ಹನುಪುಡಿ ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದೀಗ ಹೊಸದೊಂದು ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಪ್ರಾರಂಭ ಮಾಡಲಿದ್ದಾರೆ. ಯಾವುದು ಆ ಸಿನಿಮಾ? ಬಿಡುಗಡೆ ಆಗುವುದು ಯಾವಾಗ? ಇಲ್ಲಿದೆ ಮಾಹಿತಿ...

ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಕೋವಿಡ್ಗೆ ಮುಂಚೆ ವರ್ಷಕ್ಕೆ ಒಂದೇ ಸಿನಿಮಾದಲ್ಲಿ ನಟಿಸುವ ನಿಯಮವನ್ನು ತಮಗೆ ತಾವೇ ಹಾಕಿಕೊಂಡಿದ್ದರು. ‘ಬಾಹುಬಲಿ’ ಮತ್ತು ಅದರ ಎರಡನೇ ಭಾಗಕ್ಕೆ ನಾಲ್ಕು ವರ್ಷ ತೆಗೆದುಕೊಂಡರು. ಅದಾದ ಬಳಿಕವೂ ವರ್ಷಕ್ಕೆ ಒಂದೇ ಸಿನಿಮಾ ಎಂಬ ನಿಯಮ ಪಾಲಿಸುತ್ತಿದ್ದ ಪ್ರಭಾಸ್ 2023 ರಲ್ಲಿ ಆ ನಿಯಮ ಮುರಿದರು. 2023 ರಲ್ಲಿ ಪ್ರಭಾಸ್ ನಟನೆಯ ಮೂರು ಸಿನಿಮಾ ಬಿಡುಗಡೆ ಆದವು. ಈಗ ವರ್ಷಕ್ಕೆ ಎರಡು ಸಿನಿಮಾ ಎಂಬ ನಿಯಮ ಪಾಲಿಸುತ್ತಾ ಸಾಗುತ್ತಿದ್ದಾರೆ. ಇದೀಗ ಈ ವರ್ಷ ಪ್ರಭಾಸ್ ನಟನೆಯ ಎರಡು ಸಿನಿಮಾ ಬಿಡುಗಡೆ ಆಗಲಿದ್ದು, ಹೊಸ ಸಿನಿಮಾದ ಶೂಟಿಂಗ್ ಸಹ ಆರಂಭಿಸಲಿದ್ದಾರೆ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಅದರ ಜೊತೆಗೆ ಹನು ರಘುಪುಡಿ ನಿರ್ದೇಶನದ ಸಿನಿಮಾದ ಚಿತ್ರೀಕರಣ ಸಾಗುತ್ತಿದೆ. ಅದರ ಜೊತೆಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಪ್ರಾರಂಭಿಸುತ್ತಿದ್ದಾರೆ. ಮೇ ತಿಂಗಳಲ್ಲಿ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಆರಂಭ ಮಾಡುತ್ತಿದ್ದಾರೆ. ಒಂದು ವರ್ಷದಲ್ಲಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದೆ. 2026ರ ಆರಂಭದಲ್ಲಿ ಅಥವಾ ಮಧ್ಯ ಭಾಗದಲ್ಲಿ ‘ಸ್ಪಿರಿಟ್’ ಸಿನಿಮಾದ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಪ್ರಭಾಸ್ ಮೇಲೆ ಹೆವಿ ಲವ್ ಅಂತೆ ಈ ಸುಂದರ ನಟಿಗೆ
‘ಸ್ಪಿರಿಟ್’ ಸಿನಿಮಾ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬನ ಸೇಡಿನ ಕತೆಯಂತೆ. ಪ್ರಾಮಾಣಿಕತೆಯ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಪೊಲೀಸ್ ಅಧಿಕಾರಿ, ತನ್ನ ಕುಟುಂಬವನ್ನು ಕೊಲ್ಲಲು ಪ್ರಯತ್ನಿಸಿದ ವಿಲನ್ ಅನ್ನು ಹುಡುಕಿ ಕೊಲ್ಲುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಮೊದಲಾರ್ಧ ಪ್ರಾಮಾಣಿಕ, ಶಿಸ್ತಿನ ವ್ಯಕ್ತಿಯಾಗಿರುವ ಪ್ರಭಾಸ್ ದ್ವೀತೀಯಾರ್ಧದಲ್ಲಿ ಮದ್ಯ ವ್ಯಸನಿ, ಹಿಂಸಾತ್ಮಕ ಪ್ರವೃತ್ತಿಯ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
‘ಅರ್ಜುನ್ ರೆಡ್ಡಿ’, ‘ಅನಿಮಲ್’ ರೀತಿ ಚರ್ಚಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿರುವ ಸಂದೀಪ್ ರೆಡ್ಡಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತಮ್ಮ ಹಿಂದಿನ ಎರಡು ಸಿನಿಮಾಗಳಿಗಿಂತಲೂ ಈ ಸಿನಿಮಾ ಭಿನ್ನವಾಗಿರಲಿದೆ ಎಂದಿದ್ದಾರೆ. ಸಿನಿಮಾಕ್ಕೆ ಹಿಂದಿಯ ಭೂಷಣ್ ಕುಮಾರ್ ಬಂಡವಾಳ ಹೂಡಿದ್ದಾರೆ. ಈ ಹಿಂದೆ ಪ್ರಭಾಸ್ರ ‘ಆದಿಪುರಷ್’ ಸಿನಿಮಾಕ್ಕೆ ಇದೇ ಭೂಷಣ್ ಕುಮಾರ್ ಬಂಡವಾಳ ತೊಡಗಿಸಿದ್ದರು. ಆ ಸಿನಿಮಾ ಫ್ಲಾಪ್ ಎನಿಸಿಕೊಂಡಿತ್ತು. ಈಗ ಮತ್ತೊಮ್ಮೆ ಇವರೇ ಪ್ರಭಾಸ್ ಮೇಲೆ ಬಂಡವಾಳ ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Thu, 30 January 25