ಮಹೇಶ್ ಬಾಬು-ರಾಜಮೌಳಿ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಪೃಥ್ವಿರಾಜ್
Mahesh Babu Rajamouli movie: ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ SSMB29 ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪ್ರಿಥ್ವಿರಾಜ್ ಸುಕುಮಾರನ್ ನಟಿಸುತ್ತಿದ್ದಾರೆ. ಹೈದರಾಬಾದ್ ಮತ್ತು ಆಫ್ರಿಕಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಇದ್ದು, ಪ್ರಿಥ್ವಿರಾಜ್ ಅವರ ಪಾತ್ರದ ಬಗ್ಗೆ ಜಿಜ್ಞಾಸೆ ಹೆಚ್ಚಾಗಿದೆ.

ಮಹೇಶ್ ಬಾಬು ಮುಂದಿನ ಸಿನಿಮಾ ಎಸ್ಎಸ್ ರಾಜಮೌಳಿ ಜೊತೆ ಅನ್ನೋದು ಗೊತ್ತಿರುವ ವಿಚಾರ. ಈಗಾಗಲೇ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಹೈದರಾಬಾದ್ನಲ್ಲಿ ದೊಡ್ಡ ಸೆಟ್ಗಳನ್ನುಹಾಕಿ ಸಿನಿಮಾ ಶೂಟ್ ಮಾಡಲಾಗುತ್ತಿದೆ. ಈ ಚಿತ್ರದ ಶೂಟ್ ಆಫ್ರಿಕಾದಲ್ಲೂ ಸಾಗಲಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ಅವರು ನಟಿಸುತ್ತಾರೆ ಎನ್ನುವ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಈ ವಿಚಾರವನ್ನು ಪೃಥ್ವಿರಾಜ್ ಸುಕುಮಾರನ್ ಅವರೇ ಖಚಿತಪಡಿಸಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಮಹೇಶ್ ಬಾಬು ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ನಿಂದ ಬಂದಿದ್ದಾರೆ. ವಿವಾಹದ ಬಳಿಕ ಅಮೆರಿಕದಲ್ಲೇ ಸೆಟಲ್ ಆಗಿದ್ದ ಅವರು ಇದೇ ಮೊದಲ ಬಾರಿಗೆ ಭಾರತ ಸಿನಿಮಾ ರಂಗಕ್ಕೆ ಮರಳಿದ್ದಾರೆ. ಹಲವು ದೊಡ್ಡ ನಿರ್ಮಾಪಕರು ಅವರಿಗೆ ಆಫರ್ ಕೊಟ್ಟರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಆದರೆ, ರಾಜಮೌಳಿ ಅವರು ಆಫರ್ ಕೊಟ್ಟ ತಕ್ಷಣ ಅದನ್ನು ಅವರು ಒಪ್ಪಿಕೊಂಡರು. ಪೃಥ್ವಿರಾಜ್ ಕೂಡ ಚಿತ್ರವನ್ನು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ರಾಜಮೌಳಿ ನಿರ್ದೇಶನದ ಹೊಸ ಚಿತ್ರಕ್ಕೆ ಸದ್ಯ ‘SSMB29’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಬಗ್ಗೆ ಸಂದರ್ಶನ ಒಂದರಲ್ಲಿ ಪೃಥ್ವಿರಾಜ್ ಮಾತನಾಡಿರುವ ಬಗ್ಗೆ ವರದಿ ಆಗಿದೆ. ‘ನಾನು ಇನ್ನೂ ತಂಡದ ಜೊತೆ ಮಾತನಾಡುತ್ತಿದ್ದೇನೆ. ಆದರೆ, ಯಾವುದೂ ಫೈನಲ್ ಆಗಿಲ್ಲ’ ಎಂದಿದ್ದಾರೆ. ಪೃಥ್ವಿರಾಜ್ ಅವರು ಇತ್ತೀಚೆಗೆ ವಿಲನ್ ಪಾತ್ರ ಮಾಡಿ ಗಮನ ಸೆಳೆಯುತ್ತಿದ್ದಾರೆ. ಈಗ ಅವರು ಹೊಸ ಸಿನಿಮಾದಲ್ಲಿ ಅದೇ ರೀತಿಯ ಪಾತ್ರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಸೆಟ್ನಲ್ಲೇ ಮೂಡಿತು ಪ್ರೀತಿ; ನಾಲ್ಕು ವರ್ಷ ಪ್ರೀತಿ ವಿಚಾರ ಮುಚ್ಚಿಟ್ಟಿದ್ದ ನಮ್ರತಾ-ಮಹೇಶ್ ಬಾಬು
ಪೃಥ್ವಿರಾಜ್ ಮಾತ್ರವಲ್ಲದೆ, ಜಾನ್ ಅಬ್ರಹಾಂ ಕೂಡ ರಾಜಮೌಳಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಈ ಚಿತ್ರಕ್ಕಾಗಿ ಹಲವು ವರ್ಷ ಮುಡಿಪಿಡಲಿದ್ದಾರೆ. ಅವರು ಉದ್ದ ಕೂದಲು ಕೂಡ ಬಿಟ್ಟಿದ್ದಾರೆ. ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಅವರು ಸಿನಿಮಾ ಶೂಟ್ಗಾಗಿ ಹೈದರಾಬಾದ್ಗೆ ಆಗಮಿಸಿದ್ದರು. ಈ ವೇಳೆ ದೇವಾಲಯಗಳಿಗೆ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದರು.
ಇತ್ತೀಚೆಗೆ ರಾಜಮೌಳಿ ಅವರು ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಸಿಂಹನ ಪಂಜರದಲ್ಲಿ ಕೂಡಿಟ್ಟ ರೀತಿಯಲ್ಲಿ ತೋರಿಸಿದ್ದರು. ಕೆಲವು ವರದಿಗಳ ಪ್ರಕಾರ ಇಲ್ಲಿ ಸಿಂಹ ಮಹೇಶ್ ಬಾಬು. ಅವರನ್ನು ರಾಜಮೌಳಿ ಸಿನಿಮಾಗಿ ಬಂಧಿಸಿಟ್ಟಿದ್ದಾರೆ ಎಂಬ ಅರ್ಥವನ್ನು ಇದು ನೀಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ