ಹೃದಯಗಳೋ ಹೃದಯಗಳು: ಖುಷಿಯಲ್ಲಿ ವಿಜಯಲಕ್ಷ್ಮಿ ದರ್ಶನ್
Vijayalakshmi Darshan: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಜಾಮೀನು ದೊರೆತ ಬಳಿಕ ವಿಜಯಲಕ್ಷ್ಮಿ ದರ್ಶನ್ ಖುಷಿಯಾಗಿದ್ದಾರೆ. ದರ್ಶನ್ ಜೈಲಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಿಂದ ಬಹುತೇಕ ದೂರವೇ ಉಳಿದಿದ್ದರು ವಿಜಯಲಕ್ಷ್ಮಿ. ಯಾವುದೇ ಖುಷಿಯ ಪೋಸ್ಟ್ಗಳನ್ನು ವಿಜಯಲಕ್ಷ್ಮಿ ಆಗ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಒಂದರ ಹಿಂದೊಂದು ಪೋಸ್ಟ್ ಶೇರ್ ಮಾಡುತ್ತಿದ್ದಾರೆ.
Updated on: Jan 30, 2025 | 11:00 PM

ವಿಜಯಲಕ್ಷ್ಮಿ ದರ್ಶನ್ ಖುಷಿಯಾಗಿದ್ದಾರೆ. ದರ್ಶನ್ ಜಾಮೀನಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ವಿಜಯಲಕ್ಷ್ಮಿ ನಿಯಮಿತವಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಇದೀಗ ನಟಿ ವಿಜಯಲಕ್ಷ್ಮಿ ಇನ್ಸ್ಟಾಗ್ರಾಂನಲ್ಲಿ ಕೆಲ ಫೋಟೊಗಳನ್ನು ಹಂಚಿಕೊಂಡಿದ್ದು, ಫೋಟೊನಲ್ಲಿ ಹೃದಯದಾಕಾರದ ಬಲೂನುಗಳೇ ತುಂಬಿವೆ. ವಿಜಯಲಕ್ಷ್ಮಿ ಸಹ ಖುಷಿಯಿಂದ ಫೋಟೊಕ್ಕೆ ಫೋಸು ನೀಡಿದ್ದಾರೆ.

ಸದ್ಯ ದರ್ಶನ್ ಜೊತೆ ಕಾಲ ಕಳೆಯುತ್ತಿರುವ ವಿಜಯಲಕ್ಷ್ಮಿ, ದರ್ಶನ್ ಜೊತೆ ಪ್ರತಿ ಕ್ಷಣ ಎಂಜಾಯ್ ಮಾಡ್ತಿರುವಂತಿದೆ. ಇತ್ತೀಚೆಗೆ ಖುಷಿಯ ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ದರ್ಶನ್ ಜೈಲಿನಲ್ಲಿದ್ದಾಗ ಸಾಮಾಜಿಕ ಜಾಲತಾಣದಿಂದ ಬಹುತೇಕ ದೂರವೇ ಉಳಿದಿದ್ದರು ವಿಜಯಲಕ್ಷ್ಮಿ. ಯಾವುದೇ ಖುಷಿಯ ಪೋಸ್ಟ್ಗಳನ್ನು ವಿಜಯಲಕ್ಷ್ಮಿ ಆಗ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಈಗ ಒಂದರ ಹಿಂದೊಂದು ಪೋಸ್ಟ್ ಶೇರ್ ಮಾಡುತ್ತಿದ್ದಾರೆ.

ದರ್ಶನ್ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದು, ವಿಜಯಲಕ್ಷ್ಮಿ ಅವರ ಜೊತೆಗೆ ವಾಸಿಸುತ್ತಿದ್ದಾರೆ. ಇನ್ನು ಅವರ ಪ್ರೇಯಸಿ ಪವಿತ್ರಾ ಗೌಡ ಅವರು ದೆಹಲಿಗೆ ಹೋಗಿದ್ದು, ತಮ್ಮ ಉದ್ಯಮವನ್ನು ಮರು ಪ್ರಾರಂಭಿಸುವ ಪ್ರಯತ್ನದಲ್ಲಿದ್ದಾರೆ.



















