ಪ್ರಭಾಸ್ ಜೊತೆಗಿನ ನಾಲ್ಕನೇ ಸಿನಿಮಾಕ್ಕೆ ಅಡ್ವಾನ್ಸ್ ಕೊಟ್ಟ ಹೊಂಬಾಳೆ, ನಿರ್ದೇಶಕ ಯಾರು?
Prabhas: ನಟ ಪ್ರಭಾಸ್ ಭಾರತದ ಬಲು ಬೇಡಿಕೆಯ ನಟ. ಹಲವು ನಿರ್ಮಾಣ ಸಂಸ್ಥೆಗಳು ಪ್ರಭಾಸ್ ಕಾಲ್ಶೀಟ್ಗಾಗಿ ಕಾದು ನಿಂತಿವೆ. ಆದರೆ ಪ್ರಭಾಸ್ ಈಗಾಗಲೇ ಹೊಂಬಾಳೆಗೆ ಮುಂಗಡವಾಗಿ ಮೂರು ಸಿನಿಮಾ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಸಿನಿಮಾ ‘ಸಲಾರ್ 2’. ಇನ್ನೆರಡು ಸಿನಿಮಾಗಳು ಯಾವುವು? ಇಲ್ಲಿದೆ ಮಾಹಿತಿ...

ಪ್ರಭಾಸ್ (Prabhas) ಜೊತೆಗೆ ಮೂರು ಸಿನಿಮಾ ಮಾಡುವುದಾಗಿ ಹೊಂಬಾಳೆ (Hombale) ನಿರ್ಮಾಣ ಸಂಸ್ಥೆ ಇದಾಗಲೆ ಘೋಷಣೆ ಮಾಡಿದೆ. ಈಗಾಗಲೇ ಒಂದು ಸಿನಿಮಾವನ್ನು ಪ್ರಭಾಸ್ ಜೊತೆ ಮಾಡಿದ್ದಾಗಿದೆ. ಪ್ರಭಾಸ್ ಸಹ, ಹೊಂಬಾಳೆ ಮೇಲಿನ ನಂಬಿಕೆಯಿಂದ ಕತೆ, ನಿರ್ದೇಶಕ ಏನನ್ನೂ ಪ್ರಶ್ನೆ ಮಾಡದೆ ಬರೋಬ್ಬರಿ ಮೂರು ಸಿನಿಮಾ ಮಾಡಿಕೊಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂರರಲ್ಲಿ ಒಂದು ಸಿನಿಮಾ ‘ಸಲಾರ್ 2’. ‘ಸಲಾರ್’ ಸಿನಿಮಾದ ಸೀಕ್ವೆಲ್ ಇನ್ನೊಂದು ವರ್ಷದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ. ಪ್ರಭಾಸ್ರ ಇನ್ನೆರಡು ಸಿನಿಮಾಗಳ ಕತೆ ಮತ್ತು ನಿರ್ದೇಶಕರನ್ನು ಹೊಂಬಾಳೆ ಈಗಾಗಲೇ ಅಂತಿಮಗೊಳಿಸಿದೆ. ಇತ್ತೀಚೆಗಷ್ಟೆ ನಿರ್ದೇಶಕರೊಬ್ಬರಿಗೆ ಅಡ್ವಾನ್ಸ್ ಕೊಟ್ಟು ಒಪ್ಪಂದ ಮಾಡಿಕೊಂಡಿದೆ.
ಪ್ರಭಾಸ್ ಪ್ರಸ್ತುತ ರಘು ಹನುಪುಡಿ ನಿರ್ದೇಶನದ ‘ಫೌಜಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗು ಚಿತ್ರರಂಗದ ಇತ್ತೀಚೆಗಿನ ಕ್ಲಾಸಿಕ್ ಸಿನಿಮಾ ‘ಸೀತಾ ರಾಮಂ’ ನಿರ್ದೇಶಕ ಇದೇ ರಘು ಹನುಪುಡಿ. ಇವರೊಟ್ಟಿಗೆ ಸಿನಿಮಾದಲ್ಲಿ ನಟಿಸುತ್ತಿರುವಾಗಲೇ ಪ್ರಭಾಸ್ಗೆ ರಘು ಹನುಪುಡಿಯ ಸಿನಿಮಾ ಮೇಕಿಂಗ್ ಬಹಳ ಇಷ್ಟವಾಗಿ ರಘು ಅವರೊಟ್ಟಿಗೆ ಇನ್ನೊಂದು ಸಿನಿಮಾದಲ್ಲಿ ಕೆಲಸ ಮಾಡಲು ಉತ್ಸಾಹ ವ್ಯಕ್ತಪಡಿಸಿದ್ದಾರೆ.
ಇದೇ ಕಾರಣಕ್ಕೆ ಹೊಂಬಾಳೆ, ರಘು ಹನುಪುಡಿ ಅವರಿಗೆ ಅಡ್ವಾನ್ಸ್ ನೀಡಿ ಅವರನ್ನು ಬುಕ್ ಮಾಡಿಕೊಂಡಿದ್ದು, ಪ್ರಭಾಸ್ ಅವರಿಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸುವಂತೆ ಮನವಿ ಮಾಡಿದೆ. ಪ್ರಭಾಸ್ ಸಹ ರಘು ಅವರೊಟ್ಟಿಗೆ ಕೆಲಸ ಮಾಡಲು ಅತೀವ ಉತ್ಸಾಹ ತೋರಿಸಿರುವುದು ಮಾತ್ರವೇ ಅಲ್ಲದೆ. ಸಿನಿಮಾದ ಕತೆಯೂ ಸಹ ಈಗಾಗಲೇ ರೆಡಿಯಾಗಿದೆಯಂತೆ. ‘ಫೌಜಿ’ ಸಿನಿಮಾ ಮುಗಿದ ಬಳಿಕ ಪ್ರಭಾಸ್ ಜೊತೆಗಿನ ಹೊಸ ಸಿನಿಮಾದ ಚಿತ್ರಕತೆಯನ್ನು ರಘು ಹನುಪುಡಿ ರೆಡಿ ಮಾಡಲಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಮುತ್ತು ಕೊಡುತ್ತಿರುವ ಈ ಯುವತಿ ಯಾರು ಗೊತ್ತೆ?
ಪ್ರಭಾಸ್, ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಸೂಪರ್ ಹೀರೋ ಕತೆಯಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೂ ಸಹ ಹೊಂಬಾಳೆಯೇ ಬಂಡವಾಳ ತೊಡಗಿಸಲಿದೆ. ಪ್ರಶಾಂತ್ ವರ್ಮಾ ಈ ಹಿಂದೆ ‘ಹನುಮ್ಯಾನ್’ ಸಿನಿಮಾ ನಿರ್ದೇಶಿಸಿದ್ದರು. ಅವರು ಪ್ರಭಾಸ್ಗಾಗಿ ಪೌರಾಣಿಕ ಕತೆ ಆಧರಿಸಿ ಸೂಪರ್ ಹೀರೋ ಕತೆಯೊಂದನ್ನು ರೆಡಿ ಮಾಡಿದ್ದಾರೆ. ಪ್ರಭಾಸ್ ಅವರ ಬೇಡಿಕೆ ಮೇರೆಗೆ ಹೊಂಬಾಳೆಯವರೇ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯ ‘ಜೈ ಹನುಮಾನ್’ ಸಿನಿಮಾವನ್ನು ಇದೇ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ