AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಕ್ರಾಂತಿಗೆ ‘ಮಹಾವತಾರ ನರಸಿಂಹ’ನ ದರ್ಶನ ಮಾಡಿಸಿದ ಹೊಂಬಾಳೆ

ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿರುವ ತಮ್ಮ ಮೊದಲ ಅನಿಮೇಟೆಡ್ ಚಿತ್ರ ‘ಮಹಾವತಾರ ನರಸಿಂಹ’ನ ಏಪ್ರಿಲ್ 3ರಂದು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದೆ. ನರಸಿಂಹನ ಕಥೆಯನ್ನು ಆಧರಿಸಿದ ಈ ಚಿತ್ರದ ಟೀಸರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದೆ. 3D ಆವೃತ್ತಿಯಲ್ಲೂ ಲಭ್ಯವಿರುವ ಈ ಚಿತ್ರವನ್ನು ಅಶ್ವಿನ್ ಕುಮಾರ್ ನಿರ್ದೇಶಿಸಿದ್ದಾರೆ.

ಸಂಕ್ರಾಂತಿಗೆ ‘ಮಹಾವತಾರ ನರಸಿಂಹ’ನ ದರ್ಶನ ಮಾಡಿಸಿದ ಹೊಂಬಾಳೆ
ಮಹಾವತಾರ ನರಸಿಂಹ
ರಾಜೇಶ್ ದುಗ್ಗುಮನೆ
|

Updated on: Jan 14, 2025 | 2:50 PM

Share

ಹೊಂಬಾಳೆ ಫಿಲ್ಮ್ಸ್​ನವರು ಈವರೆಗೆ ಹಲವು ರೀತಿಯ ಚಿತ್ರಗಳನ್ನು ನೀಡಿದ್ದಾರೆ. ಕಮರ್ಷಿಯಲ್ ಆ್ಯಕ್ಷನ್ ಚಿತ್ರಗಳನ್ನು ಅವರು ಹೆಚ್ಚಾಗಿ ನೀಡಿದ್ದಾರೆ. ಆದರೆ, ಅವರು ಎಂದಿಗೂ ಅನಿಮೇಟೆಡ್ ಸಿನಿಮಾ ಮಾಡುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಈಗ ಅಂಥದ್ದೊಂದು ಚಿತ್ರವನ್ನು ಪ್ರಸ್ತುತಪಡಿಸಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ‘ಮಹಾವತಾರ ನರಸಿಂಹ’ ಎಂದು ಹೆಸರಿಡಲಾಗಿದ್ದು, ಸಂಕ್ರಾಂತಿ ಪ್ರಯುಕ್ತ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಚಿತ್ರದ ರಿಲೀಸ್ ದಿನಾಂಕ ಕೂಡ ರಿವೀಲ್ ಆಗಿದೆ.

ನರಸಿಂಹನ ಕಥೆ ಬಹುತೇಕರಿಗೆ ಗೊತ್ತಿದೆ. ವಿಷ್ಣುವಿನ ಅವತಾರದಲ್ಲಿ ನರಸಿಂಹನ ರೂಪವೂ ಒಂದು. ನರಸಿಂಹನು ಹಿರಣ್ಯ ಕಶಿಪುನ ಸಾಯಿಸುತ್ತಾನೆ. ಇದೇ ಕಥೆಯನ್ನು ಇಟ್ಟುಕೊಂಡು ಹೊಂಬಾಳೆ ಸಿನಿಮಾದವರು ಅನಿಮೇಟೆಡ್ ಸಿನಿಮಾ ಮಾಡಿದ್ದಾರೆ. ಈ ಟೀಸರ್ ಕನ್ನಡ, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆ ಕಂಡಿದೆ.

ಹಿರಣ್ಯ ಕಶಿಪು ಮಗ ಪ್ರಹ್ಲಾದ ಸದಾ ಹರಿಯ ಭಜನೆ ಮಾಡುತ್ತಾ ಇರುತ್ತಾನೆ. ಇದರಿಂದ ಸಿಟ್ಟಾಗುವ ಹಿರಣ್ಯ ಕಶಿಪು ‘ನಿನ್ನ ಹರಿ ಈ ಕಂಬದಲ್ಲಿ ಇದ್ದಾನೆಯೇ.. ಈ ಕಂಬದಲ್ಲಿ ಇದ್ದಾನೆಯೇ’ ಎಂದು ಕೇಳುತ್ತಾನೆ. ಆಗ ಕಂಬ ಒಡೆದುಕೊಂಡು ನರಸಿಂಹ ಬರುತ್ತಾನೆ. ಇದನ್ನು ಟೀಸರ್​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ಹೊಂಬಾಳೆಯ ಹೊಸ ಸಿನಿಮಾ ‘ನರಸಿಂಹ’, ಟೀಸರ್ ನೋಡಿ

‘ಮಹಾವತಾರ ನರಸಿಂಹ’ ಸಿನಿಮಾ ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಇದು 3ಡಿ ವರ್ಷನ್​​ನಲ್ಲೂ ಲಭ್ಯವಿದೆ. ಮೂಲತಃ ಹಿಂದಿಯಲ್ಲಿ ನಿರ್ಮಾಣ ಆಗಲಿರುವ ಸಿನಿಮಾ ಇದಾಗಿದೆ. ಹೊಂಬಾಳೆಯವರ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದೆ. ಅಶ್ವಿನ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿರುವ ಈ ಚಿತ್ರ ಏಪ್ರಿಲ್ 3ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್