ದಶಕದ ಬಳಿಕ ತಮಿಳು ಚಿತ್ರರಂಗಕ್ಕೆ ಅನುಷ್ಕಾ ಶೆಟ್ಟಿ ರೀ-ಎಂಟ್ರಿ
Anushka Shetty: ಕರ್ನಾಟಕ ಮೂಲದ ನಟಿ ಅನುಷ್ಕಾ ಶೆಟ್ಟಿ ಮಿಂಚಿದ್ದು ಮಾತ್ರ ನೆರೆಯ ತೆಲುಗು ಚಿತ್ರರಂಗದಲ್ಲಿ. ‘ಬಾಹುಬಲಿ’ ಸಿನಿಮಾದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಮತ್ತೆ ಸಕ್ರಿಯರಾಗಿದ್ದಾರೆ. ಇದೀಗ ಸುಮಾರು ಹತ್ತು ವರ್ಷಗಳ ಬಳಿಕ ನೇರ ತಮಿಳು ಸಿನಿಮಾ ಒಂದರಲ್ಲಿ ನಟಿಸಲು ಅನುಷ್ಕಾ ಶೆಟ್ಟಿ ಮುಂದಾಗಿದ್ದಾರೆ. ಯಾವುದು ಆ ಸಿನಿಮಾ?

ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ (Anushka Shetty) ಮಿಂಚಿದ್ದು ಮಾತ್ರ ನೆರೆಯ ತೆಲುಗು ಚಿತ್ರರಂಗದಲ್ಲಿ. ಒಂದು ದಶಕಕ್ಕೂ ಹೆಚ್ಚು ಕಾಲ ಅನುಷ್ಕಾ ಶೆಟ್ಟಿ, ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದರು. ತೆಲುಗಿನ ಹಲವು ಅತ್ಯುತ್ತಮ ಸಿನಿಮಾಗಳಲ್ಲಿ, ಅತ್ಯುತ್ತಮ ಪಾತ್ರಗಳಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ಆದರೆ ‘ಬಾಹುಬಲಿ’ ಸಿನಿಮಾದ ಬಳಿಕ ಯಾಕೋ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ತುಸು ದೂರಾದರು. ಬಹಳ ವರ್ಷಗಳ ಬಳಿಕ ಈಗ ಮತ್ತೆ ತೆಲುಗು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಸಕ್ರಿಯರಾಗಿದ್ದು, ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಅನುಷ್ಕಾ ಶೆಟ್ಟಿ ನಟಿಸಿದ ಕೆಲವು ಹಲವು ತೆಲುಗು ಸಿನಿಮಾಗಳು ತಮಿಳಿಗೂ ಡಬ್ ಆಗಿ ಸೂಪರ್ ಹಿಟ್ ಆಗಿವೆ. ಆದರೆ ನೇರ ತಮಿಳು ಸಿನಿಮಾನಲ್ಲಿಯೇ ಅನುಷ್ಕಾ ಶೆಟ್ಟಿ ನಟಿಸಿ ಸುಮಾರು ಒಂದು ದಶಕವಾಗುತ್ತಾ ಬಂದಿದೆ. ಸೂರ್ಯ ಜೊತೆಗೆ 2016 ರಲ್ಲಿ ನಟಿಸಿದ್ದರು ಅನುಷ್ಕಾ, ಅದಾದ ಮೇಲೆ ‘ಬಾಹುಬಲಿ’ಯಲ್ಲಿ ಬ್ಯುಸಿಯಾಗಿಬಿಟ್ಟರು. ಇದೀಗ ಸುಮಾರು ಹತ್ತು ವರ್ಷದ ಬಳಿಕ ಮತ್ತೆ ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.
ಅನುಷ್ಕಾ ಶೆಟ್ಟಿ, ಸೂರ್ಯ ಅವರ ಸಹೋದರ ಕಾರ್ತಿ ನಟಿಸಲಿರುವ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಕಾರ್ತಿ ನಟಿಸಿರುವ ‘ಖೈದಿ’ ಸಿನಿಮಾ 2019 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು. ಆ ಸಿನಿಮಾ ಮೂಲಕ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ತೆರೆದುಕೊಂಡಿತ್ತು. ಅದೇ ಸಿನಿಮಾ ಆಧರಿಸಿ ‘ವಿಕ್ರಂ’, ‘ಲಿಯೋ’ ಸಿನಿಮಾಗಳು ಸಹ ಬಂದವು. ಇದೀಗ ಮತ್ತೊಮ್ಮೆ ‘ಖೈದಿ 2’ ಬರಲಿದ್ದು, ಸಿನಿಮಾದ ಚಿತ್ರಕತೆ ಫೈನಲ್ ಆಗಿದ್ದು, ಚಿತ್ರೀಕರಣ ಕೆಲವೇ ತಿಂಗಳುಗಳಲ್ಲಿ ಪ್ರಾರಂಭ ಆಗಲಿದೆ.
ಇದನ್ನೂ ಓದಿ:ತಗ್ಗಿಲ್ಲ ಅನುಷ್ಕಾ ಶೆಟ್ಟಿ ಮಾರುಕಟ್ಟೆ; ದಾಖಲೆ ಬೆಲೆಗೆ ‘ಘಾಟಿ’ ಚಿತ್ರದ ಹಕ್ಕು ಮಾರಾಟ
‘ಖೈದಿ 2’ ಸಿನಿಮಾನಲ್ಲಿ ಕಾರ್ತಿಯ ಪತ್ನಿಯ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ಕಾರ್ತಿ ಜೊತೆಗೆ ಅನುಷ್ಕಾಗೆ ಇದು ಮೊದಲ ಸಿನಿಮಾ. ಅದೇ ಅವರ ಅಣ್ಣ ಸೂರ್ಯ ಜೊತೆಗೆ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ಅನುಷ್ಕಾ ಶೆಟ್ಟಿ ನೀಡಿದ್ದಾರೆ. ‘ಖೈದಿ’ ಸಿನಿಮಾನಲ್ಲಿ ಕಾರ್ತಿ ಜೈಲಿಂದ ಬಿಡುಗಡೆ ಆಗುವುದು ಮಾತ್ರವೇ ತೋರಿಸಲಾಗಿತ್ತು. ಆದರೆ ‘ಖೈದಿ 2’ ಸಿನಿಮಾನಲ್ಲಿ ಕಾರ್ತಿ ಜೈಲಿಗೆ ಹೋಗಿದ್ದು ಏಕೆಂಬುದನ್ನು ತೋರಿಸಲಾಗಿದೆ. ಅದರ ಜೊತೆಗೆ ‘ವಿಕ್ರಂ’ ಸಿನಿಮಾದ ಪವರ್ಫುಲ್ ವಿಲನ್ ರೋಲೆಕ್ಸ್ ಹಾಗೂ ಕಾರ್ತಿಯ ನಡುವೆ ಸಂಭವಿಸುವ ಜಿದ್ದಾಜಿದ್ದಿಯನ್ನು ತೋರಿಸಲಾಗುತ್ತದೆ. ರೋಲೆಕ್ಸ್ ಪಾತ್ರವನ್ನು ಕಾರ್ತಿ ಅವರ ಅಣ್ಣ ಸೂರ್ಯ ಅವರೇ ನಿರ್ವಹಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ