AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಷ್ಕಾ ಶೆಟ್ಟಿಯ ಒಂದು ಚಿತ್ರದಿಂದ ಆಗಿತ್ತು ಸರಣಿ ಅಪಘಾತ, ಯಾವುದು ಆ ಚಿತ್ರ?

Anushka Shetty: ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆದರೆ ಒಂದು ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ್ದ ನಟಿ ಅವರು. ನಿಮಗೆ ಗೊತ್ತೆ ಅನುಷ್ಕಾ ಶೆಟ್ಟಿಯ ಕೇವಲ ಒಂದು ಫೋಟೊ ಇಂದಾಗಿ 40ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದವು. ಆ ಫೋಟೊನಲ್ಲಿ ಅಂಥಹದ್ದೇನಿತ್ತು? ಫೋಟೊ ಯಾವುದು? ಇಲ್ಲಿದೆ ಮಾಹಿತಿ...

ಅನುಷ್ಕಾ ಶೆಟ್ಟಿಯ ಒಂದು ಚಿತ್ರದಿಂದ ಆಗಿತ್ತು ಸರಣಿ ಅಪಘಾತ, ಯಾವುದು ಆ ಚಿತ್ರ?
Anushka Shetty
ಮಂಜುನಾಥ ಸಿ.
|

Updated on: Jun 05, 2025 | 11:34 AM

Share

ಅನುಷ್ಕಾ ಶೆಟ್ಟಿ (Anushka Shetty) ದಕ್ಷಿಣ ಭಾರತದ ಸ್ಟಾರ್ ನಟಿ ಆಗಿದ್ದವರು. ದಶಕಗಳ ಕಾಲ ಅವರು ತಮ್ಮ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದ್ದರು. ನಾಯಕಿಯಾಗಿ ಕೇವಲ ಮರ ಸುತ್ತುವ ಪಾತ್ರಗಳನ್ನು ಮಾಡದೆ ತಮ್ಮ ನಟನೆ, ಅಂದ ಮತ್ತು ವ್ಯಕ್ತಿತ್ವದದಿಂದಾಗಿ ಭಾರಿ ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾ ನಟನೆ ಕಡಿಮೆ ಮಾಡಿದ್ದಾರೆ. ಆದರೆ ಒಂದು ಕಾಲದಲ್ಲಿ ವರ್ಷಕ್ಕೆ ಹತ್ತಾರು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಅನುಷ್ಕಾ ಶೆಟ್ಟಿಯ ಒಂದು ಚಿತ್ರದಿಂದ 40 ಅಪಘಾತಗಳು ಸಂಭವಿಸಿದ್ದವು. ಯಾವುದು ಆ ಚಿತ್ರ, ಅಪಘಾತ ಆಗಿದ್ದು ಏಕೆ?

ಅಪಘಾತಕ್ಕೆ ಕಾರಣವಾಗಿದ್ದ ಅನುಷ್ಕಾ ಶೆಟ್ಟಿಯ ಚಿತ್ರ ಇದು

Anushka Shetty1

Anushka Shetty1

15 ವರ್ಷದ ಹಿಂದೆ ಅನುಷ್ಕಾ ಶೆಟ್ಟಿ ‘ವೇದಂ’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಅಲ್ಲು ಅರ್ಜುನ್ ಸಹ ಇದ್ದರು. ಕ್ರಿಶ್ ನಿರ್ದೇಶನ ಮಾಡಿದ್ದ ಆ ಸಿನಿಮಾ ಅಂಥಾಲಜಿ ಸಿನಿಮಾ ಆಗಿತ್ತು. ಒಂದಕ್ಕೊಂದು ಸಂಬಂಧ ಇಲ್ಲದ ನಾಲ್ಕು ಜನರ ಕತೆಯನ್ನು ಒಳಗೊಂಡಿದ್ದ ಸಿನಿಮಾ ಅದು. ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ಮೊದಲ ಬಾರಿಗೆ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬಿಡುಗಡೆಗೆ ಮುಂಚೆ ಪ್ರಚಾರಕ್ಕೆಂದು ಅವರ ಚಿತ್ರದ ಪೋಸ್ಟರ್ ಅನ್ನು ಹೈದರಾಬಾದ್​​ನ ಹಲವು ಕಡೆ ಹಾಕಲಾಗಿತ್ತು.

ಹಳದಿ ಬಣ್ಣದ ಸೀರೆಯುಟ್ಟ ಅನುಷ್ಕಾರ ದೊಡ್ಡ ಪೋಸ್ಟರ್ ಒಂದನ್ನು ಹೈದರಾಬಾದ್​​ನ ಪಂಜಾಗುಟ್ಟ ಸರ್ಕಲ್​​ನಲ್ಲಿ ಹಾಕಲಾಗಿತ್ತು. ಆ ಪೋಸ್ಟರ್ ಅದೆಷ್ಟು ಆಕರ್ಷವಾಗಿತ್ತೆಂದರೆ ಆ ಪೋಸ್ಟರ್ ನೋಡಿಕೊಂಡು ಗಾಡಿ ಓಡಿಸಿ ಹಲವು ಅಪಘಾತಗಳು ಆಗಿದ್ದವು. ಒಂದಲ್ಲ ಎರಡರಲ್ಲ ಬರೋಬ್ಬರಿ 40 ಅಪಘಾತಗಳು ಕೆಲವೇ ದಿನಗಳಲ್ಲಿ ಪಂಜಾಗುಟ್ಟ ಸರ್ಕಲ್​​ನಲ್ಲಿ ನಡೆದಿತ್ತು. ಈ ಸರಣಿ ಅಪಘಾತ ಗಮನಿಸಿದ ಹೈದರಾಬಾದ್ ಪೊಲೀಸರು ಹೈದರಾಬಾದ್ ಮುನ್ಸಿಪಲ್​ಗೆ ಮನವಿ ನೀಡಿ ಕೊನೆಗೆ ಅನುಷ್ಕಾ ಶೆಟ್ಟಿಯ ಪೋಸ್ಟರ್ ಅನ್ನು ಪಂಜಾಗುಟ್ಟ ಸರ್ಕಲ್​​ನಿಂದ ತೆಗೆಸಬೇಕಾಯ್ತು.

ಇದನ್ನೂ ಓದಿ:ನಟ ರಾನಾಗೆ ಬ್ರೋ ಎಂದು ಕರೆದು ಅಚ್ಚರಿ ಮೂಡಿಸಿದ್ದ ಅನುಷ್ಕಾ ಶೆಟ್ಟಿ

‘ವೇದಂ’ ಸಿನಿಮಾ ತೆಲುಗು ಚಿತ್ರರಂಗದ ಅದ್ಭುತ ಸಿನಿಮಾಗಳಲ್ಲಿ ಒಂದು. ಸಿನಿಮಾದ ಹಾಡುಗಳು ಇಂದಿಗೂ ಎವರ್ ಗ್ರೀನ್. ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ತನ್ನ ವೇಶ್ಯಾ ಅಡ್ಡೆಯಿಂದ ತಪ್ಪಿಸಿಕೊಂಡು ಹೋಗಿ ನೆಮ್ಮದಿಯಾದ ಬದುಕು ಬಾಳುವುದು ಆಕೆಯ ಗುರಿ. ಅಲ್ಲು ಅರ್ಜುನ್, ತ್ವರಿತವಾಗಿ ಶ್ರೀಮಂತನಾಗುವ ಕನಸು ಕಂಡು ಶ್ರೀಮಂತ ಯುವತಿಯೊಬ್ಬಾಕೆಯನ್ನು ಪ್ರೀತಿಸಿರುವ ಯುವಕನ ಪಾತ್ರದಲ್ಲಿ ನಟಿಸಿದ್ದರು. ನಟ ಮನೋಜ್ ಬಾಜ್ಪೇಯಿ ಮುಸ್ಲಿಂ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ನಟ ಮಂಚು ಮನೋಜ್, ಜವಾಬ್ದಾರಿ ಇಲ್ಲದ ಸಂಗೀತಗಾರನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ನಿನ್ನೆಗೆ (ಜುಲೈ 4) 15 ವರ್ಷಗಳಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ