AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ರಾನಾಗೆ ಬ್ರೋ ಎಂದು ಕರೆದು ಅಚ್ಚರಿ ಮೂಡಿಸಿದ್ದ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ಮತ್ತು ರಾನಾ ದಗ್ಗುಬಾಟಿ ಅವರ ನಡುವಿನ ಸ್ನೇಹ ಬಾಹುಬಲಿ ಸಿನಿಮಾದ ನಂತರ ಬಲಗೊಂಡಿದೆ. ಅನುಷ್ಕಾ ಅವರು ರಾನಾ ಯಾವಾಗಲೂ ‘ಬ್ರೋ’ ಎಂದು ಕರೆಯುತ್ತಾರೆ. ಇತ್ತೀಚಿನ ಸಂದರ್ಶನದಲ್ಲಿ ರಾನಾ ಮತ್ತು ಪ್ರಭಾಸ್‌ರಲ್ಲಿ ಯಾರು ಹೆಚ್ಚು ಆಕರ್ಷಕ ಎಂದು ಕೇಳಿದಾಗ, ಅನುಷ್ಕಾ ಪ್ರಭಾಸ್ ಹೆಸರನ್ನು ಹೇಳಿದ್ದಾರೆ.

ನಟ ರಾನಾಗೆ ಬ್ರೋ ಎಂದು ಕರೆದು ಅಚ್ಚರಿ ಮೂಡಿಸಿದ್ದ ಅನುಷ್ಕಾ ಶೆಟ್ಟಿ
ರಾನಾ- ಅನುಷ್ಕಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 19, 2024 | 7:53 AM

Share

ಒಂದೇ ಇಂಡಸ್ಟ್ರಿಯಲ್ಲಿ ಇರುವ ಹೀರೋ-ಹೀರೋಯಿನ್​ಗಳು ಯಾವಾಗ ಬೇಕಾದರೂ ಒಟ್ಟಿಗೆ ನಟಿಸೋ ಸಮಯ ಬಂದೊದಗುತ್ತದೆ. ವೈಯಕ್ತಿಕವಾಗಿ ಅವರು ಹೇಗೇ ಇದ್ದರೂ ತೆರೆಮೇಲೆ ಬಣ್ಣ ಹಚ್ಚಿ ನಟಿಸಬೇಕಾಗುತ್ತದೆ. ಬ್ರೇಕಪ್ ಆದ ಬಳಿಕವೂ ತೆರೆಮೇಲೆ ಲವರ್ಸ್ ಪಾತ್ರ ಮಾಡಿದ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಈ ಮೊದಲು ಟಾಲಿವುಡ್​ನಲ್ಲಿ ಅನುಷ್ಕಾ ಶೆಟ್ಟಿ ಅವರು ರಾನಾ ಅವರನ್ನು ಬ್ರೋ ಎಂದು ಕರೆದು ಅಚ್ಚರಿ ಮೂಡಿಸಿದ್ದರು.

‘ರಾನಾ ದಗ್ಗುಬಾಟಿ ಹಾಗೂ ಪ್ರಭಾಸ್ ಇವರಲ್ಲಿ ಯಾರು ಹೆಚ್ಚಿ ಸೆಕ್ಸಿ ಆಗಿ ಕಾಣಿಸುತ್ತಾರೆ’ ಎಂದು ಅನುಷ್ಕಾಗೆ ಪ್ರಶ್ನೆ ಮಾಡಲಾಯಿತು. ಆಗ ಅನುಷ್ಕಾ ಶೆಟ್ಟಿ ಅವರು ಯೋಚಿಸದೆ ಪ್ರಭಾಸ್ ಹೆಸರನ್ನು ತೆಗೆದಕೊಂಡರು. ಅಲ್ಲಿ ಅವರು ಪ್ರಭಾಸ್ ಹೆಸರನ್ನು ತೆಗೆದುಕೊಂಡರು ಎಂಬುದಕ್ಕಿಂತ, ರಾನಾ ಹೆಸರನ್ನು ಏಕೆ ತೆಗೆದುಕೊಂಡಿಲ್ಲ ಎಂಬ ವಿಚಾರ ಸಾಕಷ್ಟು ಚರ್ಚೆ ಆಯಿತು.

‘ರಾನಾ ನನ್ನ ಬ್ರೋ. ಅವರು ನನ್ನನ್ನು ಬ್ರದರ್ ಎಂದು ಕರೆಯುತ್ತಾರೆ. ನಾನು ಕೂಡ ಅವರನ್ನು ಬ್ರದರ್​ ಎಂದು ಕರೆಯುತ್ತೇನೆ ಎಂದಿದ್ದರು’ ಅನುಷ್ಕಾ ಶೆಟ್ಟಿ. ಅಷ್ಟೇ ಅಲ್ಲ, ಟ್ವೀಟ್ ಮಾಡಿದ್ದಾಗಲೂ ಬ್ರದರ್ ಎಂದು ಕರೆದಿದ್ದರು ಅನುಷ್ಕಾ. ಇದನ್ನು ಕೇಳಿ ಸಂದರ್ಶಕಿ ಶಾಕ್ ಆದರು.

2022ರಲ್ಲಿ ರಾನಾ ಅವರು ಚಿತ್ರರಂಗಕ್ಕೆ ಬಂದು 12 ವರ್ಷ ಆಯಿತು. ಈ ಖುಷಿಯನ್ನು ಅವರು ಹಂಚಿಕೊಂಡಿದ್ದರು. ಆ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದರು ರಾನಾ. ಇದನ್ನು ರೀಟ್ವೀಟ್ ಮಾಡಕೊಂಡಿದ್ದ ಅನುಷ್ಕಾ ಶೆಟ್ಟಿ ಅವರು, ‘ಉತ್ತಮವಾಗಿ ಹೋಗುತ್ತಿದ್ದೀರಿ ಬ್ರೋ’ ಎಂದು ಕರೆದಿದ್ದರು.

ಇದನ್ನೂ ಓದಿ: ಅನುಷ್ಕಾ ಜನ್ಮದಿನ; ಆ ಒಂದು ಕಾರಣಕ್ಕೆ ಮದುವೆ ಆಗದೇ ಇರುವ ನಿರ್ಧಾರ ಮಾಡಿದ್ರಾ ನಟಿ?

ಅನುಷ್ಕಾ ಹಾಗೂ ರಾನಾ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದಕ್ಕೆ ಕಾರಣ ಆಗಿದ್ದು ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾ ಈ ಚಿತ್ರ ಸೂಪರ್ ಹಿಟ್ ಆಯಿತು. ಇದರಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು. ರಾನಾ ಅವರು ವಿಲನ್ ಆಗಿ ಕಾಣಿಸಿಕೊಂಡರೆ, ಅನುಷ್ಕಾ ಅವರು ಹೀರೋಯಿನ್ ಪಾತ್ರ ಮಾಡಿದ್ದರು. ಅನುಷ್ಕಾ ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಅವರ ನಟನೆಯ ಎರಡು ಸಿನಿಮಾಗಳು ಘೋಷಣೆ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ