‘ಪ್ರಭಾಸ್ ಜೊತೆ ನಾನು ಸ್ಪರ್ಧಿಸಲ್ಲ, ನನ್ನನ್ನು ಬಿಟ್ಟುಬಿಡಿ’; ಬೇಡಿಕೊಂಡ ವಿವೇಕ್ ಅಗ್ನಿಹೋತ್ರಿ

‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ‘ಸಲಾರ್’ ಎದುರು ರಿಲೀಸ್ ಮಾಡಿ ಗೆಲ್ಲುತ್ತೇನೆ ಎಂದು ವಿವೇಕ್ ಹೇಳಿರುವುದಾಗಿ ವರದಿ ಆಗಿತ್ತು. ಈ ವರದಿಯನ್ನು ಅವರು ರೀಟ್ವೀಟ್ ಮಾಡಿದ್ದಾರೆ.

‘ಪ್ರಭಾಸ್ ಜೊತೆ ನಾನು ಸ್ಪರ್ಧಿಸಲ್ಲ, ನನ್ನನ್ನು ಬಿಟ್ಟುಬಿಡಿ’; ಬೇಡಿಕೊಂಡ ವಿವೇಕ್ ಅಗ್ನಿಹೋತ್ರಿ
ಪ್ರಭಾಸ್

Updated on: Jul 28, 2023 | 6:30 AM

ನಟ ಪ್ರಭಾಸ್ (Prabhas) ಅವರ ಸಿನಿಮಾಗಳು ಇತ್ತೀಚೆಗೆ ಗೆಲ್ಲುತ್ತಿಲ್ಲ. ಆದರೆ, ಅವರ ಮುಂದಿನ ಸಿನಿಮಾಗಳ ಬಗ್ಗೆ ಇರುವ ಕ್ರೇಜ್ ಕಡಿಮೆ ಆಗಿಲ್ಲ ಮತ್ತು ಕಡಿಮೆ ಆಗುವಂಥದ್ದಲ್ಲ. ‘ಸಲಾರ್’ ಸಿನಿಮಾ ಬಗ್ಗೆ ಸದ್ಯ ನಿರೀಕ್ಷೆ ಜಾಸ್ತಿ ಆಗಿದೆ. ಈ ಚಿತ್ರದ ಎದುರು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ (The Vaccine War Movie) ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ಸ್ಪಷ್ಟನೆ ನೀಡಿದ್ದಾರೆ. ಅವರ ಎದುರು ತಾವು ಸ್ಪರ್ಧಿಸುವುದಿಲ್ಲ ಎನ್ನುವ ಸ್ಪಷ್ಟನೆಯನ್ನು ವಿವೇಕ್ ನೀಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ‘ರಾಧೆ ಶ್ಯಾಮ್’ ಒಂದೇ ದಿನ (ಮಾರ್ಚ್​ 11, 2022) ರಿಲೀಸ್ ಆಗಿತ್ತು. ‘ರಾಧೆ ಶ್ಯಾಮ್’ ಹೇಳ ಹೆಸರಿಲ್ಲದೆ ಹೋದರೆ, ‘ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 250 ಕೋಟಿ ರೂಪಾಯಿ ಬಾಚಿತ್ತು. ಅದೇ ರೀತಿ ‘ದಿ ವ್ಯಾಕ್ಸಿನ್ ವಾರ್’ ಚಿತ್ರವನ್ನು ‘ಸಲಾರ್’ ಎದುರು ರಿಲೀಸ್ ಮಾಡಿ ಗೆಲ್ಲುತ್ತೇನೆ ಎಂದು ವಿವೇಕ್ ಹೇಳಿರುವುದಾಗಿ ವರದಿ ಆಗಿತ್ತು. ಈ ವರದಿಯನ್ನು ಅವರು ರೀಟ್ವೀಟ್ ಮಾಡಿದ್ದಾರೆ.

‘ನಾನು ಹೇಳಿದ್ದೇನು ಎಂದು ಉಲ್ಲೇಖಿಸಿ ಈ ರೀತಿಯ ನಕಲಿ ಸುದ್ದಿಗಳನ್ನು ಯಾರು ಹರಡುತ್ತಿದ್ದಾರೆ? ನಾನು ಪ್ರಭಾಸ್ ಅವರನ್ನು ಗೌರವಿಸುತ್ತೇನೆ. ಅವರು ಮೆಗಾ ಮೆಗಾ ಸ್ಟಾರ್. ಮೆಗಾ ಮೆಗಾ ಬಜೆಟ್ ಚಿತ್ರಗಳಲ್ಲಿ ಅವರು ನಟಿಸುತ್ತಾರೆ.  ಆದರೆ, ನಮ್ಮ ಸಿನಿಮಾದಲ್ಲಿ ಸ್ಟಾರ್​ಗಳು ಇರಲ್ಲ, ಸಣ್ಣ ಬಜೆಟ್ ಸಿನಿಮಾ ಆಗಿರುತ್ತದೆ. ನಮ್ಮ ಸಿನಿಮಾಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ನನ್ನನ್ನು ಬಿಡಿ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ನಾನು ನಕ್ಸಲ್ ಆಗಿದ್ದೆ’; ಕರಾಳ ಸತ್ಯ ಬಿಚ್ಚಿಟ್ಟ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ

ಇದಕ್ಕೆ ಬಗೆಬಗೆಯ ಕಮೆಂಟ್​ಗಳು ಬಂದಿವೆ. ‘ಪ್ರಭಾಸ್ ಅವರು ಹೀರೋ, ನೀವು ಪ್ರೊಪೊಗಾಂಡ ಸಿನಿಮಾ ಮಾಡುವ ನಿರ್ದೇಶಕ. ನಿಮ್ಮಿಬ್ಬರ ಮಧ್ಯೆ ಹೋಲಿಕೆ ಅಸಾಧ್ಯ ಬಿಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ರಾಧೆ ಶ್ಯಾಮ್ ಸಿನಿಮಾ ಫ್ಲಾಪ್ ಆಗಿರಬಹುದು. ಧೈರ್ಯ ಇದ್ದರೆ ಸಲಾರ್ ಎದುರು ಬಂದು ನೋಡಿ’ ಎಂದು ಕೆಲವರು ಸವಾಲು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us