ಪ್ರಭಾಸ್ ಮುತ್ತು ಕೊಡುತ್ತಿರುವ ಈ ಯುವತಿ ಯಾರು ಗೊತ್ತೆ?

|

Updated on: Mar 14, 2025 | 6:53 PM

Prabhas: ನಟ ಪ್ರಭಾಸ್ ಭಾರತದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್​ಗಳಲ್ಲಿ ಒಬ್ಬರು. ಪ್ರಭಾಸ್ ಹೆಸರು ಹಲವು ಸ್ಟಾರ್ ನಟಿಯರೊಟ್ಟಿಗೆ ಕೇಳಿ ಬರುತ್ತಲೇ ಇರುತ್ತದೆ. ಆದರೆ ಪ್ರಭಾಸ್ ಇನ್ನೂ ಸಿಂಗಲ್. ಆದರೆ ಇದೀಗ, ಪ್ರಭಾಸ್ ಯುವತಿಯೊಬ್ಬಾಕೆಯನ್ನು ತಬ್ಬಿಕೊಂಡು ಮುತ್ತು ಕೊಡುತ್ತಿರುವ ಚಿತ್ರಗಳು ವೈರಲ್ ಆಗಿವೆ. ಅಷ್ಟಕ್ಕೂ ಈ ಯುವತಿ ಯಾರು?

ಪ್ರಭಾಸ್ ಮುತ್ತು ಕೊಡುತ್ತಿರುವ ಈ ಯುವತಿ ಯಾರು ಗೊತ್ತೆ?
Prabhas
Follow us on

ನಟ ಪ್ರಭಾಸ್ (Prabhas), ಭಾರತದ ಮೋಸ್ಟ್ ಎಲಿಜಿಬೆಲ್ ಬ್ಯಾಚುಲರ್​ಗಳಲ್ಲಿ ಒಬ್ಬರು. ಪ್ರಭಾಸ್ ಜೊತೆಗೆ ಡೇಟಿಂಗ್ ನಡೆಸಲು ದೊಡ್ಡ ದೊಡ್ಡ ನಟೀಮಣಿಯರೇ ಕಾದು ನಿಂತಿದ್ದಾರೆ ಆದರೆ ಪ್ರಭಾಸ್ ಮಾತ್ರ ತಾವಾಯ್ತು ತಮ್ಮ ಕೆಲಸವಾಯ್ತು ಎಂದಿದ್ದಾರೆ. ಯಾರಾದರೂ ನಟೀಮಣಿಯರು ಮಾತನಾಡಿಸಿದರೂ ಸಹ ನಾಚಿ ನೀರಾಗುವ ನಾಚಿಕೆ ಸ್ವಭಾವದ ಪ್ರಭಾಸ್​ರ ಕೆಲ ಫೋಟೊಗಳು ಇತ್ತೀಚೆಗೆ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿಳಿಗೆ ಶಾಕ್ ನೀಡಿದೆ. ಬಲು ನಾಚಿಕೆಯ ಸ್ವಭಾವದ ಪ್ರಭಾಸ್, ಫೋಟೊಗಳಲ್ಲಿ ಯುವತಿಯೊಬ್ಬಾಕೆಯ ಕೆನ್ನೆಗೆ ಮುತ್ತು ಕೊಡುತ್ತಿದ್ದಾರೆ. ಅಷ್ಟಕ್ಕೂ ಯಾರು ಈ ಯುವತಿ?

ಪ್ರಭಾಸ್, ಯುವತಿಯ ಕೆನ್ನೆಗೆ ಮುತ್ತುಗಳನ್ನು ಕೊಡುತ್ತಿರುವ ಕೆಲವು ಫೋಟೊಗಳು ಇತ್ತೀಚೆಗೆ ಬಲು ವೈರಲ್ ಆಗುತ್ತಿವೆ. ಆದರೆ ಆ ಯುವತಿ ಯಾವುದೇ ಹೀರೋಯಿನ್ ಅಲ್ಲ, ಯಾವ ಸಿನಿಮಾದಲ್ಲೂ ನಟಿಸಿಲ್ಲ. ಪ್ರಭಾಸ್ ಸಂಬಂಧಿಯೂ ಅಲ್ಲ. ಹಾಗಿದ್ದರೆ ಯಾವುದೋ ಯುವತಿಗೆ ಪ್ರಭಾಸ್ ಹೀಗೇಕೆ ಮುತ್ತಿನ ಸುರಿಮಳೆ ಸುರಿಸುತ್ತಿದ್ದಾರೆ? ಅಷ್ಟಕ್ಕೂ ಪ್ರಭಾಸ್​ ಇಂದ ಸಿಹಿ ಮುತ್ತುಗಳನ್ನು ಪಡೆದ ಆ ಅದೃಷ್ಟವಂತ ಯುವತಿ ಯಾರು? ಇಲ್ಲಿದೆ ಉತ್ತರ.

ಪ್ರಭಾಸ್ ಮುತ್ತು ಕೊಡುತ್ತಿರುವ ಆ ಯುವತಿಯ ಹೆಸರು ಬಿಲ್ಲಿ ಮಾನಿಕ್. ಈ ಯುವತಿಯ ಜನಪ್ರಿಯ ಮೇಕಪ್ ಅಪ್ ಕಲಾವಿದೆ. ಬಾಲಿವುಡ್​ನ ಹಲವಾರು ಖ್ಯಾತನಾಮ ನಟಿಯರಿಗೆ ಮೇಕಪ್ ಮಾಡುತ್ತಾರೆ. ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ಸ್ಟಾರ್ ನಟಿಯರ ಖಾಸಾ ಮೇಕಪ್ ಕಲಾವಿದೆ ಈಕೆ. ಹಿಂದಿ, ತೆಲುಗು, ತಮಿಳಿನ ಹಲವಾರು ಬಿಗ್ ಬಜೆಟ್ ಸಿನಿಮಾಗಳಿಗೆ ಮೇಕಪ್ ಕಲಾವಿದೆಯಾಗಿ ಇವರು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಕಾರಣದಿಂದ ರಿಷಬ್ ಶೆಟ್ಟಿ ಸಿನಿಮಾ ಮೇಲೆ ಕರಿನೆರಳು

ಬಿಲ್ಲಿ ಮಾನಿಕ್, ಖ್ಯಾತ ನಟಿ ತಮನ್ನಾ ಭಾಟಿಯಾ ಅವರ ಆಪ್ತ ಗೆಳತಿ. ‘ಬಾಹುಬಲಿ’ ಸಿನಿಮಾದ ಪ್ರಚಾರದ ವೇಳೆ, ಸ್ವತಃ ತಮನ್ನಾ, ತನ್ನ ಗೆಳತಿಯರಿಗೆ ಪ್ರಭಾಸ್ ಎಂದರೆ ಅಚ್ಚುಮೆಚ್ಚು, ಅವರಿಗೆ ಪ್ರಭಾಸ್ ಅನ್ನು ಭೇಟಿ ಆಗುವಾಸೆ ಎಂದಿದ್ದರು. ಆಗ ಬಿಲ್ಲಿ ಮಾನಿಕ್ ಹೆಸರನ್ನು ಸಹ ತೆಗೆದುಕೊಂಡಿದ್ದರು. ಅದೇ ಸಮಯದಲ್ಲಿ ಪ್ರಭಾಸ್ ಅನ್ನು ಭೇಟಿಯಾಗಿದ್ದ ಬಿಲ್ಲಿ ಮಾನಿಕ್, ಆ ನಂತರ ಪ್ರಭಾಸ್​ರ ಗೆಳತಿಯೂ ಆದರು. ಇಬ್ಬರ ನಡುವೆ ಉತ್ತಮ ಆತ್ಮೀಯತೆ ಇದೆ. ಆದರೆ ಇವರು ಪ್ರೀತಿ ಅಥವಾ ಡೇಟಿಂಗ್ ಯಾವುದನ್ನೂ ಮಾಡುತ್ತಿಲ್ಲ. ಇಬ್ಬರದ್ದು ಗೆಳೆತನ ಅಷ್ಟೆ.

ಪ್ರಭಾಸ್ ಪ್ರಸ್ತುತ, ‘ರಾಜಾ ಸಾಬ್’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್​ನಲ್ಲಿ ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ರಘು ಹನುಪುಡಿಯ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲಿದೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್ 2’ ಹಾಗೂ ‘ಕಲ್ಕಿ 2’ ಸಿನಿಮಾಗಳು ಒಟ್ಟೊಟ್ಟಿಗೆ ಆರಂಭ ಆಗಲಿವೆ. ಈ ವರ್ಷ ಪ್ರಭಾಸ್​ರ ಎರಡು ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ