Prabhas: ರಾಮಾಯಣ ಆಧಾರಿತ ‘ಆದಿಪುರುಷ್’ ಚಿತ್ರಕ್ಕೆ ಟ್ರೋಲ್​ ಕಾಟ;​ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಏನು?

| Updated By: ಮದನ್​ ಕುಮಾರ್​

Updated on: Oct 03, 2022 | 12:13 PM

Adipurush Teaser Troll: ‘ಆದಿಪುರುಷ್ ಟೀಸರ್​ನಲ್ಲಿ ರಾವಣನನ್ನು ನೋಡಿದರೆ ಅಲ್ಲಾವುದ್ದೀನ್​ ಖಿಲ್ಜಿ ನೋಡಿದಂತೆ ಆಗುತ್ತಿದೆ. ಇದಕ್ಕಿಂತ ರಾಮಾಯಣ ಸೀರಿಯಲ್​ ಎಷ್ಟೋ ಚೆನ್ನಾಗಿತ್ತು’ ಎಂದು ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Prabhas: ರಾಮಾಯಣ ಆಧಾರಿತ ‘ಆದಿಪುರುಷ್’ ಚಿತ್ರಕ್ಕೆ ಟ್ರೋಲ್​ ಕಾಟ;​ ನೆಟ್ಟಿಗರ ಅಸಮಾಧಾನಕ್ಕೆ ಕಾರಣ ಏನು?
ಪ್ರಭಾಸ್, ಸೈಫ್​ ಅಲಿ ಖಾನ್​
Follow us on

ಭಾರಿ ನಿರೀಕ್ಷೆ ಮೂಡಿಸಿದ್ದ ‘ಆದಿಪುರುಷ್​’ ಚಿತ್ರದ ಟೀಸರ್​ (Adipurush Teaser) ಬಿಡುಗಡೆ ಆಗಿದೆ. ಆಯೋಧ್ಯೆಯಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಭಾನುವಾರ (ಅ.2) ಟೀಸರ್​ ರಿಲೀಸ್​ ಮಾಡಲಾಯಿತು. ಪ್ರಭಾಸ್​ (Prabhas) ಅಭಿಮಾನಿಗಳು ಈ ಟೀಸರ್​ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ (Troll) ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಕಳಪೆ ಗ್ರಾಫಿಕ್ಸ್​! ಈ ಚಿತ್ರಕ್ಕೆ ಓಂ ರಾವತ್​ ನಿರ್ದೇಶನ ಮಾಡುತ್ತಿದ್ದು, ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಆಗುತ್ತಿದೆ. ಬಹುಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಕೂಡ ಗ್ರಾಫಿಕ್ಸ್​ ಯಾಕೆ ಇಷ್ಟು ಕಳಪೆ ಆಗಿದೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಸಖತ್​ ಚರ್ಚೆ ನಡೆಯುತ್ತಿದೆ.

ರಾಮಾಯಣದ ಕಥೆಯನ್ನು ಇಟ್ಟುಕೊಂಡು ‘ಆದಿಪುರುಷ್​’ ಚಿತ್ರ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಅವರಿಗೆ ರಾಮನ ಪಾತ್ರವಿದೆ. ಸೀತೆಯಾಗಿ ಕೃತಿ ಸನೋನ್​ ಅಭಿನಯಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ಅಬ್ಬರಿಸಲಿದ್ದಾರೆ. ಪೌರಾಣಿಕ ಸಿನಿಮಾಗಳನ್ನು ಕಟ್ಟಿಕೊಡಲು ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಸಬೇಕಾಗುತ್ತದೆ. ಈ ವಿಚಾರದಲ್ಲಿ ‘ಆದಿಪುರುಷ್’ ತಂಡ ಎಡವಿದೆ ಎಂಬುದು ನೆಟ್ಟಿಗರ ಅಭಿಪ್ರಾಯ.

ಇದನ್ನೂ ಓದಿ
Adipurush: ಪ್ರಭಾಸ್​ ಫ್ಯಾನ್ಸ್​ ಮನ ಗೆದ್ದ ‘ಆದಿಪುರುಷ್​’ ಟೀಸರ್​; ಇಲ್ಲಿದೆ ರಾಮ-ರಾವಣರ ಮುಖಾಮುಖಿ
Adipurush Teaser: ‘ಆದಿಪುರುಷ್​’ ಟೀಸರ್​ ಬಿಡುಗಡೆ; ಅಯೋಧ್ಯೆಯಲ್ಲಿ ರಾಮನಾಗಿ ದರ್ಶನ ನೀಡಿದ ಪ್ರಭಾಸ್​
Prabhas: ದೊಡ್ಡಪ್ಪನ ನಿಧನದ ನೋವಿಟ್ಟುಕೊಂಡು ಕೆಲಸಕ್ಕೆ ಬಂದ ಪ್ರಭಾಸ್​; ‘ಸಲಾರ್​’ ಶೂಟಿಂಗ್​ ಮತ್ತೆ ಶುರು
Prabhas: ದೊಡ್ಡಪ್ಪನ ಅಂತ್ಯ ಸಂಸ್ಕಾರಕ್ಕೆ ಬಂದ ಫ್ಯಾನ್ಸ್​ಗೆ ಊಟದ ವ್ಯವಸ್ಥೆ ಮಾಡಿಸಿ ಕಾಳಜಿ ತೋರಿದ ಪ್ರಭಾಸ್​

ರಾಮನ ಪರಾಕ್ರಮ, ರಾವಣನ ಹತ್ತು ತಲೆ, ವಾನರ ಸೇನೆಯ ದಾಳಿ, ರಾಮಸೇತು ನಿರ್ಮಾಣ ಸೇರಿದಂತೆ ಅನೇಕ ದೃಶ್ಯಗಳ ಝಲಕ್​ ಈ ಟೀಸರ್​ನಲ್ಲಿ ಕಾಣಿಸಿದೆ. ಅವುಗಳನ್ನು ತೋರಿಸಿರುವ ರೀತಿ ಕಂಡು ಜನರು ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ. ಇದರಲ್ಲಿನ ಗ್ರಾಫಿಕ್ಸ್​ ನೋಡಿದರೆ ಕಾರ್ಟೂನ್​ ನೆಟ್​ವರ್ಕ್​ ನೆನಪಾಗುತ್ತದೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.

‘ರಾವಣನನ್ನು ನೋಡಿದರೆ ಅಲ್ಲಾವುದ್ದೀನ್​ ಖಿಲ್ಜಿ ನೋಡಿದಂತೆ ಆಗುತ್ತಿದೆ. ಮಂಗಗಳ ಬದಲಿಗೆ ಬೇರೆ ಯಾವುದೇ ಪ್ರಾಣಿಗಳು ಕಾಣಿಸುತ್ತಿವೆ. ಈ ಚಿತ್ರಕ್ಕಿಂತ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಸೀರಿಯಲ್​ ಎಷ್ಟೋ ಚೆನ್ನಾಗಿತ್ತು. ಸಿನಿಮಾ ಮಾಡುವುದಕ್ಕಿಂತ ಮುನ್ನ ಒಂದಷ್ಟು ಅಧ್ಯಯನ ಮಾಡಿಕೊಳ್ಳಬೇಕು’ ಎಂದು ನೆಟ್ಟಿಗರು ಖಾರವಾಗಿ ಕಮೆಂಟ್​ ಮಾಡುತ್ತಿದ್ದಾರೆ.

ಟೀಕೆಗಳು ಏನೇ ಇರಲಿ, ಯೂಟ್ಯೂಬ್​ನಲ್ಲಿ ಜನರು ಮುಗಿಬಿದ್ದು ‘ಆದಿಪುರುಷ್​​’ ಟೀಸರ್​ ನೋಡುತ್ತಿದ್ದಾರೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ ಹಾಗೂ ತಮಿಳು ವರ್ಷನ್​ ಸೇರಿ ಕೇವಲ 16 ಗಂಟೆಗಳಲ್ಲಿ 75 ಮಿಲಿಯನ್​ಗಿಂತಲೂ (7.5 ಕೋಟಿ) ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಸದ್ಯ ಜನರಿಂದ ವ್ಯಕ್ತವಾಗಿರುವ ನೆಗೆಟಿವ್​ ಪ್ರತಿಕ್ರಿಯೆಗಳಿಗೆ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.