ಹಿಂದಿ ಚಿತ್ರರಂಗದಲ್ಲಿ ಧೂಳಿಪಟವಾಯ್ತು ಪ್ರಭಾಸ್ ಹೆಸರು; ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಭಾಸ್​?

| Updated By: ರಾಜೇಶ್ ದುಗ್ಗುಮನೆ

Updated on: Mar 17, 2022 | 4:35 PM

‘ರಾಧೆ ಶ್ಯಾಮ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ಚಿತ್ರದ ಟ್ರೇಲರ್. ಈ ಸಿನಿಮಾದ ಟ್ರೇಲರ್ ಭಿನ್ನ ಫೀಲ್​ ಕೊಟ್ಟಿದ್ದರಿಂದ ಸಿನಿಮಾ ಹಿಂದಿ ಹಕ್ಕನ್ನು ಕೊಂಡುಕೊಳ್ಳೋಕೆ ಅನೇಕರು ಮುಂದೆ ಬಂದಿದ್ದರು.

ಹಿಂದಿ ಚಿತ್ರರಂಗದಲ್ಲಿ ಧೂಳಿಪಟವಾಯ್ತು ಪ್ರಭಾಸ್ ಹೆಸರು; ದಿಟ್ಟ ನಿರ್ಧಾರ ತೆಗೆದುಕೊಂಡ ಪ್ರಭಾಸ್​?
ರಾಧೆ ಶ್ಯಾಮ್​
Follow us on

ನಟ ಪ್ರಭಾಸ್ ನಟನೆಯ ‘ಬಾಹುಬಲಿ’ ಸಿನಿಮಾ (Bahubali Movie) ಹಿಂದಿ ಚಿತ್ರರಂಗದಲ್ಲೂ ಮೋಡಿ ಮಾಡಿತ್ತು. ರಾಜಮೌಳಿ (SS Rajamouli) ನಿರ್ದೇಶನದ ಈ ಚಿತ್ರ ದೊಡ್ಡ ಮೊತ್ತದ ಕಲೆಕ್ಷನ್​ ಮಾಡಿತ್ತು. ಅದೇ ರೀತಿ ‘ರಾಧೆ ಶ್ಯಾಮ್​’ ಚಿತ್ರ ಕೂಡ ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿದೆ ಎನ್ನಲಾಗಿತ್ತು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದೆ. ಪ್ರಭಾಸ್​ ಅವರು ಈ ಸಿನಿಮಾದಿಂದ ಹಿಂದಿ ಚಿತ್ರರಂಗದಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಈ ಸಿನಿಮಾ 20 ಕೋಟಿ ರೂಪಾಯಿ ಗಳಿಕೆ ಮಾಡೋಕೂ ಒದ್ದಾಡುತ್ತಿದೆ. ಇದು ಪ್ರಭಾಸ್ (Prabhas) ಕರಿಯರ್​ನಲ್ಲೇ ದೊಡ್ಡ ಸೋಲು ಎಂದು ಬಣ್ಣಿಸಲಾಗುತ್ತಿದೆ.

‘ರಾಧೆ ಶ್ಯಾಮ್​’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿತ್ತು. ಇದಕ್ಕೆ ಕಾರಣವಾಗಿದ್ದು ಚಿತ್ರದ ಟ್ರೇಲರ್. ಈ ಸಿನಿಮಾದ ಟ್ರೇಲರ್ ಭಿನ್ನ ಫೀಲ್​ ಕೊಟ್ಟಿದ್ದರಿಂದ ಸಿನಿಮಾ ಹಿಂದಿ ಹಕ್ಕನ್ನು ಕೊಂಡುಕೊಳ್ಳೋಕೆ ಅನೇಕರು ಮುಂದೆ ಬಂದಿದ್ದರು. ಮೂಲಗಳ ಪ್ರಕಾರ, ‘ರಾಧೆ ಶ್ಯಾಮ್’ ಚಿತ್ರದ ಹಿಂದಿ ವರ್ಷನ್ ಹಂಚಿಕೆ ಹಕ್ಕು 100 ಕೋಟಿ ರೂಪಾಯಿಗೆ ಮಾರಾಟ ಆಗಿದೆ. ಆದರೆ, ಈ ಚಿತ್ರ ಹಿಂದಿ ಅವತರಣಿಕೆಯಲ್ಲಿ ಕಲೆಕ್ಟ್​ ಆಗಿದ್ದು 20 ಕೋಟಿ ರೂಪಾಯಿಗೂ ಕಡಿಮೆ.

‘ರಾಧೆ ಶ್ಯಾಮ್​’ ಸಿನಿಮಾ ಮೊದಲ ದಿನ (ಮಾರ್ಚ್​ 11) 4.5 ಕೋಟಿ ಕಲೆಕ್ಷನ್​ ಮಾಡಿತ್ತು. ಮಾರ್ಚ್​ 12ರಂದು 4.5 ಕೋಟಿ ರೂಪಾಯಿ, ಮಾರ್ಚ್​ 13ರಂದು 5 ಕೋಟಿ ಕಲೆಕ್ಷನ್​ ಮಾಡಿದೆ ಈ ಸಿನಿಮಾ. ನಂತರ ಈ ಚಿತ್ರದ ಕಲೆಕ್ಷನ್​ ಕುಸಿದಿದೆ. ಮಾರ್ಚ್​ 14 ಹಾಗೂ ಮಾರ್ಚ್​​ 15ರಂದು ಈ ಚಿತ್ರ ತಲಾ 1.15 ಕೋಟಿ ಗಳಿಸಿದೆ.  ಈ ಮೂಲಕ ಸಿನಿಮಾ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ 16.65 ಕೋಟಿ ರೂಪಾಯಿ ಬಾಚಿಕೊಂಡಿದೆ.

ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಹಿಂದಿ ವರ್ಷನ್​ನಿಂದ 100 ಕೋಟಿ ರೂಪಾಯಿ ಬಾಕ್ಸ್ ಆಫೀಸ್​ ಕಲೆಕ್ಷನ್​ ಮಾಡಿತ್ತು. ಪ್ರಭಾಸ್ ಚಿತ್ರ ಕೂಡ ಇದೇ ಮಾದರಿಯಲ್ಲಿ ಕಲೆಕ್ಟ್​​​ ಮಾಡಲಿದೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರ ತಲೆಕೆಳಗಾಗಿದೆ. ಪ್ರಭಾಸ್ ಆ್ಯಕ್ಷನ್​ ಶೈಲಿಯನ್ನು ಆಯ್ಕೆ ಮಾಡಿಕೊಳ್ಳದೆ ಒಂದು ಪ್ರೀತಿ-ಪ್ರೇಮದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಸಿನಿಮಾದಲ್ಲಿ ಯಾವುದೇ ಫೈಟ್​ ಇಲ್ಲ. ಇದು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ತಂದಿತ್ತು. ಅವರು ಮಾಸ್ ಅವತಾರ ತಾಳದೆ ಇದ್ದಿದ್ದು ಪ್ರೇಕ್ಷಕರಿಗೆ ಕೊಂಚವೂ ಇಷ್ಟವಾಗಿಲ್ಲ.

ಪ್ರಭಾಸ್ ಈ ಸೋಲಿನಿಂದ ಅಸಮಾಧಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಆಯ್ಕೆ ವೇಳೆ ಹೆಚ್ಚು ಗಮನವಹಿಸಲು ನಿರ್ಧರಿಸಿದ್ದಾರೆ. ಅಭಿಮಾನಿಗಳು ಇಷ್ಟಪಡುವ ಸಿನಿಮಾ  ಮಾಡೋಕೆ ಅವರು ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Radhe Shyam First Half Review: ಹೇಗಿದೆ ಪ್ರಭಾಸ್​ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾದ ಮೊದಲಾರ್ಧ?; ಇಲ್ಲಿದೆ ರಿಪೋರ್ಟ್​

ಕರ್ನಾಟಕದಲ್ಲಿ ಮಗಿಯಲಿದೆ ಪ್ರಭಾಸ್ ಆಟ; ‘ರಾಧೆ ಶ್ಯಾಮ್​’ ಬಹುತೇಕ ಶೋಗಳು ಅಂತ್ಯ?