AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರುಗಾಗಿ ಸಂಭಾವನೆ ಪಡೆಯಲು ನಿರಾಕರಿಸಿದ ಸಲ್ಮಾನ್​ ಖಾನ್​; ಫ್ರೀ ಆಗಿ ನಟಿಸಿದ ಸ್ಟಾರ್ ನಟ

ಮಲಯಾಳಂನಲ್ಲಿ ಮೋಹನ್​ ಲಾಲ್​ ನಟನೆಯ ಸೂಪರ್​ ಹಿಟ್​ ಚಿತ್ರ ‘ಲೂಸಿಫರ್​’ ಟಾಲಿವುಡ್​ಗೆ ‘ಗಾಡ್​ ಫಾದರ್​’ ಹೆಸರಿನಲ್ಲಿ ರಿಮೇಕ್​ ಆಗುತ್ತಿದೆ. ಚಿರಂಜೀವಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿರುಗಾಗಿ ಸಂಭಾವನೆ ಪಡೆಯಲು ನಿರಾಕರಿಸಿದ ಸಲ್ಮಾನ್​ ಖಾನ್​; ಫ್ರೀ ಆಗಿ ನಟಿಸಿದ ಸ್ಟಾರ್ ನಟ
ಸಲ್ಮಾನ್​ ಖಾನ್
TV9 Web
| Edited By: |

Updated on: Mar 17, 2022 | 6:08 PM

Share

ಸಲ್ಮಾನ್​ ಖಾನ್​ (Salman Khan) ಗೆಳೆತನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರು ಯಾರನ್ನೂ ಅಷ್ಟು ಸುಲಭವಾಗಿ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆದರೆ, ಹತ್ತಿರಕ್ಕೆ ಸೇರಿಸಿಕೊಂಡವರು ಇಷ್ಟ ಆದರೆ, ಅವರಿಗೋಸ್ಕರ ಯಾವ ಸಹಾಯ ಮಾಡೋಕೂ ಸಲ್ಲು ರೆಡಿ ಇರುತ್ತಾರೆ. ಈ ಮೊದಲು ಅನೇಕ ಬಾರಿ ಇದು ಸಾಬೀತಾಗಿದೆ. ಸಲ್ಮಾನ್​ ಖಾನ್​ಗೆ ನಾನಾ ಕ್ಷೇತ್ರದಲ್ಲಿ ಗೆಳೆಯರಿದ್ದಾರೆ. ಕನ್ನಡದಲ್ಲಿ ಸುದೀಪ್​, ಬಾಲಿವುಡ್​ನಲ್ಲಿ (Bollywood) ಶಾರುಖ್​ ಖಾನ್​, ಟಾಲಿವುಡ್​ನಲ್ಲಿ ಚಿರಂಜೀವಿ ಜತೆ ಸಲ್ಮಾನ್​ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ. ಚಿರು ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡೋಕೆ ಸಲ್ಮಾನ್ ಖಾನ್ ಒಂದು ರೂಪಾಯಿ ಸಂಭಾವನೆ ಪಡೆದಿಲ್ಲ ಎನ್ನಲಾಗುತ್ತಿದೆ.

ಮಲಯಾಳಂನಲ್ಲಿ ಮೋಹನ್​ ಲಾಲ್​ ನಟನೆಯ ಸೂಪರ್​ ಹಿಟ್​ ಚಿತ್ರ ‘ಲೂಸಿಫರ್​’ ಟಾಲಿವುಡ್​ಗೆ ‘ಗಾಡ್​ ಫಾದರ್​’ ಹೆಸರಿನಲ್ಲಿ ರಿಮೇಕ್​ ಆಗುತ್ತಿದೆ. ಚಿರಂಜೀವಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್​ ಖಾನ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ಸಂಭಾವನೆ ಸ್ವೀಕರಿಸುತ್ತಿಲ್ಲ ಎಂದು ವರದಿ ಆಗಿದೆ.

ಮೂಲ ಚಿತ್ರದಲ್ಲಿ ಪ್ರಥ್ವಿರಾಜ್​ ಸುಕುಮಾರನ್​ ಮಾಡಿದ ಪಾತ್ರವನ್ನು ರಿಮೇಕ್​ನಲ್ಲಿ ಸಲ್ಮಾನ್​ ಖಾನ್​ ಮಾಡುತ್ತಿದ್ದಾರೆ. ಹೀರೋ ಕಷ್ಟದಲ್ಲಿದ್ದಾಗ ಬೆಂಬಲವಾಗಿ ನಿಲ್ಲೋ ವ್ಯಕ್ತಿಯಾಗಿ ಸಲ್ಮಾನ್​ ಖಾನ್​ ಪಾತ್ರ ಮೂಡಿ ಬರಲಿದೆ. ಈ ಚಿತ್ರದಲ್ಲಿ ನಟಿಸೋಕೆ ಸಲ್ಲು ಸಖತ್​ ಎಗ್ಸೈಟ್​ ಆಗಿದ್ದಾರೆ. ಅವರನ್ನು ದಕ್ಷಿಣ ಭಾರತದ ಚಿತ್ರದಲ್ಲಿ ನೋಡೋಕೆ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

ಸಲ್ಮಾನ್​ ಖಾನ್​ ಪಾತ್ರ 20 ನಿಮಿಷಗಳ ಕಾಲ ತೆರೆಮೇಲೆ ಬರಲಿದೆ. ಈ ಚಿತ್ರದಲ್ಲಿ ನಟಿಸೋಕೆ ಸಲ್ಲುಗೆ 15-20 ಕೋಟಿ ರೂಪಾಯಿ ಸಂಭಾವನೆ ನೀಡಲು ನಿರ್ಮಾಪಕರು ನಿರ್ಧರಿಸಿದ್ದರು. ಸಂಭಾವನೆ ವಿಚಾರ ಕೇಳಿದಾಗ, ‘ಶೂಟಿಂಗ್​ ಬಳಿಕ ಈ ಬಗ್ಗೆ ಮಾತನಾಡೋಣ’ ಎಂದಿದ್ದರು ಸಲ್ಮಾನ್​ ಖಾನ್​. ಚಿತ್ರೀಕರಣ​ ಪೂರ್ಣಗೊಂಡ ನಂತರ ಕೇಳಿದರೆ, ‘ತಾವು ಚಿರಂಜೀವಿಗೋಸ್ಕರ ಸಂಭಾವನೆ ಪಡೆಯುವುದಿಲ್ಲ’ ಎನ್ನುವ ಮಾತನ್ನು ಹೇಳಿದ್ದಾರೆ.

ಚಿರಂಜೀವಿ ಕೂಡ ಸಂಭಾವನೆ ಪಡೆಯುವಂತೆ ಒತ್ತಾಯ ಮಾಡಿದ್ದಾರೆ. ಈ ವೇಳೆ ಸಲ್ಮಾನ್​ ಖಾನ್ ಹೇಳಿದ ಒಂದೇ ಒಂದು ಮಾತಿಗೆ ಚಿರಂಜೀವಿ ಮರುಮಾತನಾಡಿಲ್ಲ ಎನ್ನಲಾಗಿದೆ. ಹಾಗಾದರೆ ಸಲ್ಲು​ ಹೇಳಿದ ಮಾತೇನು? ‘ನನ್ನ ಚಿತ್ರದಲ್ಲಿ ನೀವು ಅತಿಥಿ ಪಾತ್ರ ಮಾಡಿದ್ದರೆ ನೀವು ಹಣ ಮುಟ್ಟುತ್ತಿದ್ದಿರಾ?’ ಎಂದು ಸಲ್ಮಾನ್​ ಖಾನ್​ ಅವರು ಚಿರುಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಕೇಳಿದ ಮೆಗಾಸ್ಟಾರ್​ ಮರುಮಾತನಾಡಿಲ್ಲ.

ಶಾರುಖ್ ಖಾನ್​ ನಟನೆಯ ‘ಪಠಾಣ್​’ ಚಿತ್ರದಲ್ಲೂ ಸಲ್ಮಾನ್​ ಖಾನ್​ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಅವರು ಹಣ ಪಡೆದಿಲ್ಲ ಎಂದು ಈ ಮೊದಲು ವರದಿ ಆಗಿತ್ತು.

ಇದನ್ನೂ ಓದಿ: ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ

ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್