ಪ್ರಭಾಸ್ ‘ರಾಜ್​ಸಾಬ್’ ಸಿನಿಮಾ ನಿರ್ಮಾಪಕರಿಂದ ಹೇಳಿಕೆ ಬಿಡುಗಡೆ

|

Updated on: Dec 19, 2024 | 12:30 PM

Rajasaab: ಪ್ರಭಾಸ್ ನಟನೆಯ ‘ರಾಜಾಸಾಬ್’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಈ ನಡುವೆ ಸಿನಿಮಾದ ಕುರಿತು ಕೆಲವು ಸುದ್ದಿಗಳು ಹರಿದಾಡುತ್ತಿದ್ದು, ಇದರ ನಡುವೆ ಸಿನಿಮಾದ ನಿರ್ಮಾಪಕರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಪ್ರಭಾಸ್ ಅಭಿಮಾನಿಗಳಿಗೆ ಬೇಸರ ಮೂಡಿದೆ.

ಪ್ರಭಾಸ್ ‘ರಾಜ್​ಸಾಬ್’ ಸಿನಿಮಾ ನಿರ್ಮಾಪಕರಿಂದ ಹೇಳಿಕೆ ಬಿಡುಗಡೆ
Raja Saab
Follow us on

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಇದೇ ವರ್ಷ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಪ್ರಭಾಸ್ ಕೈಯಲ್ಲಿ ಈಗ ಅಧಿಕೃತವಾಗಿ ಏಳು ಸಿನಿಮಾಗಳಿವೆ. ಯಾವ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬ ಕಅತರ ಅಭಿಮಾಗಳಿಗೆ ಇದೆ. ‘ಕಲ್ಕಿ 2898 ಎಡಿ’ ಸಿನಿಮಾದ ಬಳಿಕ ಪ್ರಭಾಸ್ ನಟನೆಯ ‘ರಾಜಾಸಾಬ್’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ‘ರಾಜಾಸಾಬ್’ ಸಿನಿಮಾದ ಟೀಸರ್ ಸಹ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿತ್ತು. ಇದೀಗ ‘ರಾಜಾಸಾಬ್’ ಸಿನಿಮಾದ ನಿರ್ಮಾಪಕರು ಸಿನಿಮಾ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

‘ರಾಜಾ ಸಾಬ್’ ಸಿನಿಮಾದ ಬಿಡುಗಡೆ, ಟ್ರೈಲರ್ ಬಿಡುಗಡೆ ಇತ್ಯಾದಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ‘ರಾಜಾಸಾಬ್’ ನಿರ್ಮಾಪಕರು. ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ್ದಾರೆ. ‘ರಾಜಾಸಾಬ್’ ಸಿನಿಮಾದ ಟ್ರೈಲರ್ ಕ್ರಿಸ್​ಮಸ್​ಗೆ ಅಥವಾ ಹೊಸ ವರ್ಷಕ್ಕೆ ಬಿಡುಗಡೆ ಆಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿತ್ತು. ಆದರೆ ಈ ಸುದ್ದಿಯನ್ನು ಸಿನಿಮಾ ನಿರ್ಮಾಪಕರು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ:ಪ್ರಭಾಸ್ ಸಿನಿಮಾಕ್ಕೆ ನೋ ಎಂದ ನಟಿ, ಕಾರಣವೇನು?

ಹೇಳಿಕೆ ಬಿಡುಗಡೆ ಮಾಡಿರುವ ‘ರಾಜಾಸಾಬ್’ ತಂಡ, ‘ಪ್ರಭಾಸ್ ನಟನೆಯ ‘ರಾಜಾಸಾಬ್’ ಸಿನಿಮಾದ ಚಿತ್ರೀಕರಣ ವೇಗವಾಗಿ ನಡೆಯುತ್ತಿದೆ. ಸಿನಿಮಾದ 80% ಚಿತ್ರೀಕರಣ ಈಗಾಗಲೇ ಮುಗಿದಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಸಹ ವೇಗವಾಗಿ ನಡೆಯುತ್ತಿದೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ರಾಜಾಸಾಬ್’ ಸಿನಿಮಾದ ಟೀಸರ್ ಹೊಸವರ್ಷ ಅಥವಾ ಕ್ರಿಸ್​ಮಸ್​ಗೆ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸತ್ಯವಲ್ಲ. ಯಾರೂ ಇದನ್ನು ನಂಬಬೇಡಿ’ ಎಂದಿದ್ದಾರೆ.

‘ರಾಜಾಸಾಬ್’ ಸಿನಿಮಾದ ಚಿತ್ರೀಕರಣದ ವೇಳೆ ಪ್ರಭಾಸ್​ಗೆ ಗಾಯವಾಗಿದೆ. ಇದೇ ಕಾರಣಕ್ಕೆ ಅವರು ‘ಕಲ್ಕಿ 2898 ಎಡಿ’ ಸಿನಿಮಾದ ಜಪಾನ್ ರಿಲೀಸ್ ಕಾರ್ಯಕ್ರಮಕ್ಕೆ ಸಹ ಹೋಗಲು ಸಾಧ್ಯವಾಗಿಲ್ಲ. ಗಾಯಗೊಂಡಿರುವ ಕಾರಣ ‘ರಾಜಾಸಾಬ್’ ಸಿನಿಮಾದ ಚಿತ್ರೀಕರಣವೂ ತಡವಾಗುತ್ತಿದೆ ಎನ್ನಲಾಗಿದೆ.

ಇನ್ನು ಪ್ರಭಾಸ್ ಕೈಯಲ್ಲಿ ಈಗ ಏಳು ಸಿನಿಮಾಗಳಿವೆ. ‘ರಾಜಾಸಾಬ್’ ಹಾಗೂ ರಘು ಹನುಪುಡಿ ‘ಫೌಜಿ’ ಸಿನಿಮಾವನ್ನು ಒಟ್ಟಿಗೆ ನಟಿಸುತ್ತಿದ್ದಾರೆ. ಇದಾದ ಬಳಿಕ ‘ಸಲಾರ್ 2’ ಪ್ರಾರಂಭ ಆಗಲಿದೆ. ‘ಸಲಾರ್ 2’ ಬಳಿಕ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗ ಪ್ರಾರಂಭ ಆಗಲಿದೆ. ಅದಾದ ಬಳಿಕ ಹೊಂಬಾಳೆ ಜೊತೆ ಇನ್ನೆರಡು ಸಿನಿಮಾಗಳಲ್ಲಿ ಪ್ರಭಾಸ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:22 pm, Thu, 19 December 24