
ಪ್ರಭಾಸ್ (Prabhas) ನಟನೆಯ ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗಿದೆ. ಇದು ವಿಶೇಷವೇನೂ ಅಲ್ಲ. ಪ್ರಭಾಸ್ ನಟಿಸುವುದೇ ವರ್ಷಕ್ಕೆ ಒಂದೋ-ಎರಡು ಸಿನಿಮಾಗಳಲ್ಲಿ. ಕಳೆದ ವರ್ಷ ಜೂನ್ ತಿಂಗಳಲ್ಲಿ ಅವರ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಪ್ರಭಾಸ್ ನಟನೆಯ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಆದರೆ ಇದು ಪ್ರಭಾಸ್ ಅಭಿಮಾನಿಗಳಿಗೆ ತುಸು ಬೇಸರವನ್ನೇ ಉಂಟು ಮಾಡಿದೆ.
ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸಿನಿಮಾ ಡಿಸೆಂಬರ್ ಐದರಂದು ತೆರೆಗೆ ಬರಲಿದೆ. ಅಸಲಿಗೆ ‘ದಿ ರಾಜಾ ಸಾಬ್’ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗಬೇಕಿತ್ತು. ಈ ಹಿಂದೆ ಹರಿದಾಡಿದ್ದ ಸುದ್ದಿಯಂತೆ ‘ದಿ ರಾಜಾ ಸಾಬ್’ ಸಿನಿಮಾ ಜೂನ್ ಅಥವಾ ಜುಲೈ ತಿಂಗಳಲ್ಲಿ ತೆರೆಗೆ ಬರಬೇಕಿತ್ತು. ಆದರೆ ನಾನಾ ಕಾರಣಗಳಿಂದಾಗಿ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬರುತ್ತಿದೆ.
ಇದೀಗ ಸಿನಿಮಾದ ಬಿಡುಗಡೆ ಘೋಷಣೆ ಆಗಿದ್ದು, ಸಿನಿಮಾ ಡಿಸೆಂಬರ್ 05ಕ್ಕೆ ಬಿಡುಗಡೆ ಆಗಲಿದೆ. ‘ಪುಷ್ಪ 2’ ಸಿನಿಮಾ ಸಹ ಕಳೆದ ವರ್ಷ ಡಿಸೆಂಬರ್ 05 ರಂದೇ ಬಿಡುಗಡೆ ಆಗಿತ್ತು. ಇದೀಗ ‘ರಾಜಾ ಸಾಬ್’ ಸಿನಿಮಾಕ್ಕೂ ಅದೇ ಬಿಡುಗಡೆ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾವಾಗಿ ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಆದರೆ ಸಿನಿಮಾದ ವಿಎಫ್ಎಕ್ಸ್ಗೆ ಹೆಚ್ಚಿನ ಸಮಯ ಹಿಡಿಯುತ್ತಿದೆಯಂತೆ. ಈಗಾಗಲೇ ಮಾಡಲಾಗಿದ್ದ ವಿಎಫ್ಎಕ್ಸ್ ಕೆಲಸವನ್ನು ಮತ್ತೆ ಉನ್ನತೀಕರಣಗೊಳಿಸಲಾಗಿದೆ. ಹಾಗಾಗಿ ಸಿನಿಮಾದ ಬಿಡುಗಡೆಗೆ ಹೆಚ್ಚು ಸಮಯ ಆಗಿದೆ.
ಇದನ್ನೂ ಓದಿ:‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿಯಾದ ‘ಅನಿಮಲ್’ ನಟಿ ತೃಪ್ತಿ ದಿಮ್ರಿ
‘ದಿ ರಾಜಾ ಸಾಬ್’ ಸಿನಿಮಾವು ರೊಮ್ಯಾಂಟಿಕ್ ಹಾರರ್ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಪ್ರಭಾಸ್ ಆತ್ಮದ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಅವರದ್ದು ಡಬಲ್ ರೋಲ್ ಅಂತೆ. ಸಿನಿಮಾದ ಕೆಲ ಪೋಸ್ಟರ್ಗಳು ಬಿಡುಗಡೆ ಆಗಿದ್ದು, ಒಂದರಲ್ಲಿ ಪ್ರಭಾಸ್ ವಯಸ್ಸಾದ ಜಮೀನ್ದಾರ್ ರೀತಿ ಹಾಗೂ ಮತ್ತೊಂದರಲ್ಲಿ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ದಿ ರಾಜಾ ಸಾಬ್’ ಹೊರತುಪಡಿಸಿ, ಪ್ರಭಾಸ್ ಪ್ರಸ್ತುತ ‘ಫೌಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ ‘ಕಲ್ಕಿ 2’ ಆ ಬಳಿಕ ‘ಸಲಾರ್ 2’ ಅದರ ಬಳಿಕ ಹೊಂಬಾಳೆ ನಿರ್ಮಾಣದ ಇನ್ನೂ ಎರಡು ಸಿನಿಮಾಗಳಲ್ಲಿ ನಟನೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ