ಪ್ರಶಾಂತ್ ನೀಲ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡ್ತಾರಾ ಬಾಬಿ ಡಿಯೋಲ್?

ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಮಾಡಬೇಕಾಗಿದೆ. ಹೀಗಿರುವಾಗಲೇ ಬಾಬಿ ಡಿಯೋಲ್ ಚಿತ್ರದಲ್ಲಿ ನಟಿಸಬಹುದು ಎಂದು ವರದಿ ಆಗಿದೆ. ಪ್ರಶಾಂತ್ ನೀಲ್ ಅವರು ಈಗಾಗಲೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

ಪ್ರಶಾಂತ್ ನೀಲ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡ್ತಾರಾ ಬಾಬಿ ಡಿಯೋಲ್?
ಬಾಬಿ-ನೀಲ್
Edited By:

Updated on: Jun 14, 2024 | 12:44 PM

ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol) ಅವರು ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆರಂಭದಲ್ಲಿ ಫ್ಲಾಪ್ ಎನಿಸಿಕೊಂಡಿದ್ದ ಅವರು, ಈಗ ಮತ್ತೆ ಫೇಮಸ್ ಆಗಿದ್ದಾರೆ. ಇದಕ್ಕಾಗಿ ಬಾಬಿ ಡಿಯೋಲ್ ಕೂಡ ಬಹಳ ಸಮಯ ಕಾಯಬೇಕಾಯಿತು. ‘ಅನಿಮಲ್’ ಚಿತ್ರದಿಂದ ಅವರ ಬದುಕು ಬದಲಾಗಿದೆ. ಬಾಬಿ ಡಿಯೋಲ್ ಈಗ ಒಂದರ ನಂತರ ಒಂದರಂತೆ ಚಿತ್ರಗಳನ್ನು ಪಡೆಯುತ್ತಿದ್ದಾರೆ. ಸೌತ್ ಫಿಲ್ಮ್ ಇಂಡಸ್ಟ್ರಿಯಿಂದಲೂ ಉತ್ತಮ ಆಫರ್‌ಗಳು ಅವರಿಗೆ ಬರುತ್ತಿವೆ. ‘ಕಂಗುವಾ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರಿಗೆ ಮತ್ತೊಂದು ಸಿನಿಮಾ ಕೂಡ ಸಿಕ್ಕಿದೆ ಎನ್ನಲಾಗಿದೆ. ಅದು ಪ್ರಶಾಂತ್ ನೀಲ್ ಸಿನಿಮಾ ಅನ್ನೋದು ವಿಶೇಷ.

ಆಸ್ಕರ್ ಪ್ರಶಸ್ತಿ ವಿಜೇತ ‘RRR’ ಚಿತ್ರದಲ್ಲಿ ನಟ ಜೂನಿಯರ್ ಎನ್​ಟಿಆರ್ ಪ್ರಮುಖ ಪಾತ್ರ ಮಾಡಿದ್ದರು. ಈ ಮೂಲಕ ಅವರು ಫೇಮಸ್ ಆದರು. RRR ಚಿತ್ರದಲ್ಲಿ ಅವರು ತಮ್ಮ ಆ್ಯಕ್ಷನ್ ಮತ್ತು ಸ್ಟಂಟ್‌ಗಳಿಂದ ಎಲ್ಲರನ್ನೂ ಆಕರ್ಷಿಸಿದರು. ಈಗ ಅವರು ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್ ಜೂನಿಯರ್ ಎನ್​ಟಿಆರ್ ಅವರನ್ನು ಎದುರಿಸಲಿದ್ದಾರೆ ಎನ್ನಲಾಗಿದೆ. ಅಂದರೆ ಈ ಚಿತ್ರಕ್ಕೆ ಅವರೇ ವಿಲನ್.

ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಮಾಡಬೇಕಾಗಿದೆ. ಹೀಗಿರುವಾಗಲೇ ಬಾಬಿ ಡಿಯೋಲ್ ಚಿತ್ರದಲ್ಲಿ ನಟಿಸಬಹುದು ಎಂದು ವರದಿ ಆಗಿದೆ. ಪ್ರಶಾಂತ್ ನೀಲ್ ಅವರು ಈಗಾಗಲೇ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

ಜೂನಿಯರ್ ಎನ್​ಟಿಆರ್ ಅವರ ಬಳಿ ಎರಡು ಚಿತ್ರಗಳಿವೆ. ಅಯಾನ್ ಮುಖರ್ಜಿ ನಿರ್ದೇಶನದ ಹೃತಿಕ್ ರೋಷನ್ ನಟನೆಯ ‘ವಾರ್ 2’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: ಕಾಮಿಡಿ ಶೋ ವೇದಿಕೆಯಲ್ಲಿ ಕಣ್ಣೀರು ಹಾಕಿದ ‘ಅನಿಮಲ್​’ ನಟ ಬಾಬಿ ಡಿಯೋಲ್​

ಬಾಬಿ ಡಿಯೋಲ್ ಸಿನಿಮಾ ಬಗ್ಗೆ ಮಾತನಾಡುವುದಾದರೆ, ಅವರು ಪ್ರಸ್ತುತ ಅನೇಕ ಸಿನಿಮಾಗಳಿವೆ. ಅವರು ಈಗಾಗಲೇ ಸೌತ್ ಚಿತ್ರ ‘ಕಂಗುವ’ದಲ್ಲಿ ನೆಗೆಟಿವ್ ರೋಲ್ ಮಾಡಲು ರೆಡಿಯಾಗಿದ್ದಾರೆ. ಇದಲ್ಲದೆ, ಅವರು ‘ಹರಿಹರ ವೀರ ಮಲ್ಲು’ ಮತ್ತು ‘NBK109’ನ ಭಾಗವಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us