Prashanth Neel: ಜೂನಿಯರ್ ಎನ್​ಟಿಆರ್​-ಪ್ರಶಾಂತ್ ನೀಲ್ ಚಿತ್ರಕ್ಕೆ ಸಿಕ್ತು ಪವರ್​ಫುಲ್ ಟೈಟಲ್

ಮೇ 20ರಂದು ಜೂನಿಯರ್​ ಎನ್​ಟಿಆರ್ ಬರ್ತ್​ಡೇ. ಈ ಹಿನ್ನೆಲೆಯಲ್ಲಿ ‘ದೇವರ’ ಸಿನಿಮಾದ ಸಾಂಗ್ ರಿಲೀಸ್ ಆಗಲಿದೆ. ‘ವಾರ್ 2’ ಕಡೆಯಿಂದ ಪೋಸ್ಟರ್ ರಿಲೀಸ್ ಆಗೋ ಸಾಧ್ಯತೆ ಇದೆ. ಅದೇ ರೀತಿ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಟೈಟಲ್ ಅನೌನ್ಸ್ ಆಗೋ ಸಾಧ್ಯತೆ ಇದೆಯಂತೆ. ಈ ಚಿತ್ರಕ್ಕೆ ಈಗ ಪವರ್​ಫುಲ್ ಟೈಟಲ್ ಕೂಡ ಸಿಕ್ಕಿದೆ.

Prashanth Neel: ಜೂನಿಯರ್ ಎನ್​ಟಿಆರ್​-ಪ್ರಶಾಂತ್ ನೀಲ್ ಚಿತ್ರಕ್ಕೆ ಸಿಕ್ತು ಪವರ್​ಫುಲ್ ಟೈಟಲ್
ಜೂ.ಎನ್​ಟಿಆರ್​-ಪ್ರಶಾಂತ್ ನೀಲ್

Updated on: May 17, 2024 | 7:07 AM

ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ (Prashanth Neel) ಒಟ್ಟಾಗಿ ಸಿನಿಮಾ ಮಾಡುತ್ತಾರೆ ಅನ್ನೋದು ಇಂದು ನಿನ್ನೆಯ ಚರ್ಚೆ ಅಲ್ಲ. ಬಹಳ ವರ್ಷಗಳ ಹಿಂದೆಯೇ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಆದರೆ, ಈವರೆಗೆ ಸಿನಿಮಾ ಕೆಲಸಗಳು ಆರಂಭ ಆಗಿಲ್ಲ. ಇಬ್ಬರೂ ಬೇರೆ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡರು. ಈಗ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್​ ಸಿನಿಮಾ ಸೆಟ್ಟೇರೋ ಸಮಯ. ಈ ಚಿತ್ರಕ್ಕೆ ಈಗಾಗಲೇ ಪವರ್​ಫುಲ್ ಟೈಟಲ್ ಸಿಕ್ಕಿದೆ ಎನ್ನಲಾಗಿದೆ.

ಜೂನಿಯರ್​ ಎನ್​ಟಿಆರ್​ ಅವರು ‘ದೇವರ’ ಹಾಗೂ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಎರಡೂ ಸಿನಿಮಾ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುತ್ತಿದ್ದಾರೆ. ಮೇ 20ರಂದು ಜೂನಿಯರ್​ ಎನ್​ಟಿಆರ್ ಬರ್ತ್​ಡೇ. ಈ ಹಿನ್ನೆಲೆಯಲ್ಲಿ ‘ದೇವರ’ ಸಿನಿಮಾದ ಸಾಂಗ್ ರಿಲೀಸ್ ಆಗಲಿದೆ. ‘ವಾರ್ 2’ ಕಡೆಯಿಂದ ಪೋಸ್ಟರ್ ರಿಲೀಸ್ ಆಗೋ ಸಾಧ್ಯತೆ ಇದೆ. ಅದೇ ರೀತಿ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಟೈಟಲ್ ಅನೌನ್ಸ್ ಆಗೋ ಸಾಧ್ಯತೆ ಇದೆಯಂತೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಟೈಟಲ್ ಇಡಲಾಗಿದೆಯಂತೆ.

‘ದೇವರ’ ಹಾಗೂ ‘ವಾರ್ 2’ ಕೆಲಸಗಳ ಬಳಿಕ ಜೂನಿಯರ್​ ಎನ್​ಟಿಆರ್​ ಅವರು ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ. ಪ್ರಶಾಂತ್ ನೀಲ್ ಅವರು ‘ಸಲಾರ್’ ಬಳಿಕ ಜೂನಿಯರ್​ ಎನ್​ಟಿಆರ್ ಕಾಲ್​ಶೀಟ್​ಗಾಗಿ ಕಾಯುತ್ತಿದ್ದಾರೆ. ಈ ಮಧ್ಯೆ ಟೈಟಲ್ ವಿಚಾರ ಚರ್ಚೆಗೆ ಬಂದಿದೆ. ‘ಡ್ರ್ಯಾಗನ್’ ಅನ್ನೋದು ಪವರ್​ಫುಲ್ ಟೈಟಲ್ ಎನಿಸುತ್ತದೆ. ಹೀಗಾಗಿ ಈ ಟೈಟಲ್ ಫೈನಲ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದೇವಸ್ಥಾನ ನಿರ್ಮಾಣಕ್ಕೆ 12.5 ಲಕ್ಷ ರೂಪಾಯಿ ದೇಣಿಗೆ ನೀಡಿದ ಜೂ. ಎನ್​ಟಿಆರ್​

ಈ ಮೊದಲ ಜೂನಿಯರ್​ ಎನ್​ಟಿಆರ್​ ಬರ್ತ್​ಡೇ ದಿನಗಳಲ್ಲಿ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್ ಸಿನಿಮಾ ಮಾಡೋ ಬಗ್ಗೆ ಘೋಷಣೆ ಮಾಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವರ್ಷದ ಆರಂಭದಲ್ಲೇ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಕೆಲಸಗಳು ವಿಳಂಬ ಆಗುತ್ತಲೇ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us