‘ಸ್ಟಾರ್ ಯಾವಾಗಲೂ ಸ್ಟಾರ್’; ಪ್ರಭಾಸ್ ಸರಣಿ ಸೋಲಿನ ಬಗ್ಗೆ ಪ್ರಶಾಂತ್ ನೀಲ್ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Dec 20, 2023 | 11:04 AM

ಸತತ ಮೂರು ಸಿನಿಮಾಗಳು ಸೋತಿರುವುದರಿಂದ ಪ್ರಭಾಸ್ ಜನಪ್ರಿಯತೆ ಕಡಿಮೆ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಸತತ ಸೋಲಿನ ಬಗ್ಗೆ ಪ್ರಶಾಂತ್ ನೀಲ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಸ್ಟಾರ್ ಯಾವಾಗಲೂ ಸ್ಟಾರ್’; ಪ್ರಭಾಸ್ ಸರಣಿ ಸೋಲಿನ ಬಗ್ಗೆ ಪ್ರಶಾಂತ್ ನೀಲ್ ಮಾತು
ನೀಲ್-ಪ್ರಭಾಸ್
Follow us on

‘ಬಾಹುಬಲಿ 2’ (Bahubali 2) ರಿಲೀಸ್ ಆದ ಬಳಿಕ ಪ್ರಭಾಸ್​ಗೆ ಅದೃಷ್ಟ ಖುಲಾಯಿಸಲಿಲ್ಲ. ಅವರ ನಟನೆಯ ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಚಿತ್ರಗಳು ಹೀನಾಯವಾಗಿ ಸೋಲು ಕಂಡವು. ಈಗ ಅವರ ನಟನೆಯ ಸಲಾರ್’ ಸಿನಿಮಾ (Salaar Movie) ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಮೂಲಕ ಪ್ರಭಾಸ್​ಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಸತತ ಮೂರು ಸಿನಿಮಾಗಳು ಸೋತಿರುವುದರಿಂದ ಪ್ರಭಾಸ್ ಜನಪ್ರಿಯತೆ ಕಡಿಮೆ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಆದರೆ, ಇದನ್ನು ಪ್ರಶಾಂತ್ ನೀಲ್ ಅವರು ಅಲ್ಲಗಳೆದಿದ್ದಾರೆ. ‘ಓರ್ವ ಸ್ಟಾರ್ ಯಾವಾಗಲೂ ಸ್ಟಾರ್’ ಎಂದಿದ್ದಾರೆ ಅವರು.

‘ಬಾಹುಬಲಿ 2’ ರಿಲೀಸ್ ಆಗಿದ್ದು 2017ರ ಏಪ್ರಿಲ್​ನಲ್ಲಿ. ಇನ್ನು ಕೆಲವೇ ತಿಂಗಳು ಕಳೆದರೆ ಈ ಸಿನಿಮಾ ರಿಲೀಸ್ ಆಗಿ ಏಳು ವರ್ಷ ಆಗಲಿದೆ. ಈ ಸಿನಿಮಾ ಬಳಿಕ ಪ್ರಭಾಸ್​ಗೆ ಇನ್ನೂ ದೊಡ್ಡ ಗೆಲುವು ಸಿಕ್ಕಿಲ್ಲ. ಇದು ಪ್ರಭಾಸ್ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಹೀಗಾಗಿ ಪ್ರಭಾಸ್ ಫ್ಯಾನ್ಸ್​ ಫ್ರಸ್ಟ್ರೇಟ್ ಆಗಿದ್ದಾರೆ. ‘ಸಲಾರ್’ ಮೂಲಕ ದೊಡ್ಡ ಗೆಲುವು ಸಿಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಸತತ ಸೋಲಿನ ಬಗ್ಗೆ ಪ್ರಶಾಂತ್ ನೀಲ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಎಷ್ಟೇ ಫ್ಲಾಪ್ ನೀಡಿದರೂ ಒಂದು ಚಿತ್ರ ಹಿಟ್ ಆದ ಬಳಿಕ ಸ್ಟಾರ್ ಬೌನ್ಸ್ ಬ್ಯಾಕ್ ಮಾಡುತ್ತಾನೆ ಅನ್ನೋದು ಪ್ರಶಾಂತ್ ನೀಲ್ ಅಭಿಪ್ರಾಯ. ‘ಪ್ರಭಾಸ್ ದೊಡ್ಡ ಸ್ಟಾರ್. ಬಾಹುಬಲಿ ಬಳಿಕ ಅವರ ಜನಪ್ರಿಯತೆ ಹೆಚ್ಚಿತು. ಆ ರೀತಿಯ ಚಿತ್ರಗಳನ್ನು ಜನರು ಮರೆಯುವುದಿಲ್ಲ. ಸ್ಟಾರ್ ಯಾವಾಗಲೂ ಸ್ಟಾರ್. ಸ್ಟಾರ್​​ಗಳು ಒಂದು ಫ್ಲಾಪ್ ಕೊಡಲಿ ಅಥವಾ 20 ಫ್ಲಾಪ್ ಸಿನಿಮಾ ನೀಡಲಿ ಅವನಿಗೆ ಒಂದು ದೊಡ್ಡ ಗೆಲುವಿನ ಅವಶ್ಯಕತೆ ಇರುತ್ತದೆ ಅಷ್ಟೇ ಎಂದಿದ್ದಾರೆ’ ಪ್ರಶಾಂತ್ ನೀಲ್.

ಶಾರುಖ್ ಖಾನ್ ಅವರು ಸಾಲು ಸಾಲು ಫ್ಲಾಪ್ ಸಿನಿಮಾ ನೀಡಿದ್ದರು. ಈ ಕಾರಣದಿಂದಲೇ ಅವರು ನಾಲ್ಕು ವರ್ಷ ಬ್ರೇಕ್ ಪಡೆದರು. ಶಾರುಖ್ ಖಾನ್ ಅವರ ವೃತ್ತಿ ಬದುಕು ಪೂರ್ಣಗೊಂಡಿತು ಎಂದು ಅನೇಕರು ಮಾತನಾಡಿಕೊಂಡಿದ್ದಿದೆ. ಆದರೆ, ಬ್ಯಾಕ್ ಟು ಬ್ಯಾಕ್ ಎರಡು ಹಿಟ್ ಸಿನಿಮಾ ನೀಡಿ ಅವರು ಮಾರುಕಟ್ಟೆ ಹೆಚ್ಚಿಸಿಕೊಂಡಿದ್ದಾರೆ. ಇದನ್ನು ಪ್ರಶಾಂತ್ ನೀಲ್ ಉದಾಹರಣೆ ಆಗಿ ನೀಡಿದ್ದಾರೆ. ‘ಸ್ಟಾರ್ ಯಾವಾಗಲೂ ಸ್ಟಾರ್ ಆಗಿರುತ್ತಾನೆ ಎಂಬುದನ್ನು ಶಾರುಖ್ ಖಾನ್ ಅವರು ತೋರಿಸಿಕೊಟ್ಟಿದ್ದಾರೆ. ಅದನ್ನು ಯಾರೂ ಅಲ್ಲಗಳೆಯುತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ನಿಮ್ಮ ಸಿನಿಮಾಗಳಲ್ಲಿ ಕಪ್ಪು ಬಣ್ಣವೇ ಪ್ರಧಾನ ಏಕೆ? ಕಾರಣ ನೀಡಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಡಿಸೆಂಬರ್ 22ರಂದು ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಮೂಲಕ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಪ್ರಭಾಸ್, ಪೃಥ್ವಿರಾಜ್​ ಸುಕುಮಾರನ್, ಶ್ರುತಿ ಹಾಸನ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ತಂತ್ರಜ್ಞರು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ