ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು? ಎಲ್ಲಾ ಗೊಂದಲಗಳಿಗೆ ಬಿತ್ತು ತೆರೆ

ಜೂನಿಯರ್ ಎನ್​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಘೋಷಣೆ ಆಗಿ ಕೆಲವು ವರ್ಷ ಕಳೆದಿವೆ. ಹೀಗಾಗಿ, ಈಗ ಈ ಚಿತ್ರವನ್ನು ಆರಂಭಿಸಲೇಬೇಕಾದ ಅನಿವಾರ್ಯತೆ ಇದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಅವರು ಮುಂದಿನ ಚಿತ್ರ ಇದೇ ಆಗಿರಲಿದೆ ಎಂದು ವರದಿ ಆಗಿದೆ.  

ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು? ಎಲ್ಲಾ ಗೊಂದಲಗಳಿಗೆ ಬಿತ್ತು ತೆರೆ
ಪ್ರಶಾಂತ್ ನೀಲ್

Updated on: Jul 04, 2024 | 12:56 PM

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ಈ ಬಗ್ಗೆ ಯಾವುದೂ ಸ್ಪಷ್ಟವಾಗಿಲ್ಲ. ಜೂನಿಯರ್​ ಎನ್​ಟಿಆರ್ ಅವರು ‘ದೇವರ’ ಹಾಗೂ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತ ಪ್ರಶಾಂತ್ ನೀಲ್ ಅವರು ‘ಸಲಾರ್’ ಬಳಿಕ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಹೀಗಾಗಿ, ಪ್ರಶಾಂತ್ ನೀಲ್ ‘ಸಲಾರ್ 2’ ಕೈಗೆತ್ತಿಕೊಳ್ಳಲಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಇದರಲ್ಲಿ ನಿಜವಿಲ್ಲ ಎಂದು ವರದಿ ಆಗಿದೆ.

‘ಸಲಾರ್’ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ 600 ಕೋಟಿ ರೂಪಾಯಿ ಕಮಾಯಿ ಮಾಡಿತು. ಈ ಚಿತ್ರದಿಂದ ಪ್ರಭಾಸ್ ಗೆಲುವಿನ ನಗೆ ಬೀರಿದರು. ಪ್ರಶಾಂತ್ ನೀಲ್ ಅವರು ಈಗ ಹೇಳಿರೋದು ಅರ್ಧ ಕಥೆ ಮಾತ್ರ. ಹೀಗಾಗಿ, ಪೂರ್ತಿ ಕಥೆ ತಿಳಿಯಲು ‘ಸಲಾರ್ 2’ ಬರಬೇಕಿದೆ. ಜೂನಿಯರ್ ಎನ್​ಟಿಆರ್ ಅವರು ‘ದೇವರ’ ಹಾಗೂ ‘ವಾರ್ 2’ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ ಪ್ರಶಾಂತ್ ನೀಲ್ ‘ಸಲಾರ್ 2’ ಸಿನಿಮಾ ಕೆಲಸ ಆರಂಭಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದು ನಿಜವಿಲ್ಲ.

ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್​ಟಿಆರ್ ಸಿನಿಮಾ ಘೋಷಣೆ ಆಗಿ ಬಹಳ ಸಮಯ ಕಳೆದಿವೆ. ಹೀಗಾಗಿ, ಈಗ ಈ ಚಿತ್ರವನ್ನು ಆರಂಭಿಸಲೇಬೇಕಾದ ಅನಿವಾರ್ಯತೆ ಇದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದೆ ಎನ್ನಲಾಗುತ್ತಿದೆ. ಪ್ರಶಾಂತ್ ನೀಲ್ ಅವರು ಮುಂದಿನ ಚಿತ್ರ ಇದೇ ಆಗಿರಲಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದ ಎರಡನೇ ಪಾರ್ಟ್ ರಿಲೀಸ್​ಗೆ ಫಿಕ್ಸ್ ಆಯ್ತು ಮುಹೂರ್ತ; ಇಲ್ಲಿದೆ ವಿವರ

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಈಗಷ್ಟೇ ರಿಲೀಸ್ ಆಗಿದೆ. ಈ ಚಿತ್ರ ಒಂದೇ ವಾರದಲ್ಲಿ 700 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರ ಜೊತೆಗೆ ಅವರು ‘ರಾಜಾ ಸಾಬ್’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಸ್ಪಿರಿಟ್’ ಚಿತ್ರದಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ. ಇವುಗಳ ಮಧ್ಯೆ ಅವರು ‘ಸಲಾರ್ 2’ ಚಿತ್ರಕ್ಕೆ ಸಮಯ ಮಾಡಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.