AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಬೀರ್, ಸಲ್ಮಾನ್ ಜೊತೆ ಬ್ರೇಕಪ್ ಆದಾಗ ಗಳಗಳನೆ ಅತ್ತಿದ್ದ ಕತ್ರಿನಾ ಕೈಫ್

Katrina Kaif Birthday: ಕತ್ರಿನಾ ಕೈಫ್ ಅವರ ಜನ್ಮದಿನದ ಪ್ರಯುಕ್ತ ಅವರ ಹಿಂದಿನ ಸಂಬಂಧಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಜೊತಿನ ಅವರ ಸಂಬಂಧಗಳು ಮತ್ತು ಬ್ರೇಕಪ್​ಗಳು ಅವರ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರಿದ್ದವು.ಈ ವೇಳೆ ಅವರು ನಿರಂತರವಾಗಿ ಕಣ್ಣೀರು ಹಾಕಿದ್ದರು.

ರಣಬೀರ್, ಸಲ್ಮಾನ್ ಜೊತೆ ಬ್ರೇಕಪ್ ಆದಾಗ ಗಳಗಳನೆ ಅತ್ತಿದ್ದ ಕತ್ರಿನಾ ಕೈಫ್
ಕತ್ರಿನಾ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 16, 2025 | 7:55 AM

Share

ನಟಿ ಕತ್ರಿನಾ ಕೈಫ್ (Katrina Kaif) ಅವರು ವಯಸ್ಸಲ್ಲಿ ತಮಗಿಂತ ಸಣ್ಣ ವ್ಯಕ್ತಿಯನ್ನು ವಿವಾಹ ಆಗಿ ಅಚ್ಚರಿ ಮೂಡಿಸಿದ್ದರು. ಅವರು ವಿಕ್ಕಿ ಕೌಶಲ್ ಜೊತೆ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇಂದು (ಜುಲೈ 16) ಅವರಿಗೆ ಜನ್ಮದಿನ. ಈ ವೇಳೆ ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಕತ್ರಿನಾ ಕೈಫ್ ಅವರು ಬ್ರೇಕಪ್ ಬಳಿಕ ಸಾಕಷ್ಟು ಬೇಸರಗೊಂಡಿದ್ದರು. ಅವರು ಗಳಗಳನೆ ಅತ್ತಿದ್ದಾಗಿ ಹೇಳಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಕತ್ರಿನಾ ಕೈಫ್ ಅವರು ಮೊದಲು ಸಲ್ಮಾನ್ ಖಾನ್ ಜೊತೆ ರಿಲೇಶನ್​ಶಿಪ್ ಹೊಂದಿದ್ದರು. 2005ರಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. ನಾಲ್ಕು ವರ್ಷಗಳ ಕಾಲ ಸಲ್ಲು ಹಾಗೂ ಕತ್ರಿನಾ ಒಟ್ಟಾಗಿ ಸಮಯ ಕಳೆದರು. ಆದರೆ, ಇವರದ್ದು ಬ್ರೇಕಪ್​ನಲ್ಲಿ ಕೊನೆ ಆಯಿತು. ಈ ಬ್ರೇಕಪ್ ಬಳಿಕ ಅವರು ಸಾಕಷ್ಟು ಬೇಸರ ಮಾಡಿಕೊಂಡರು. ವಿಶೇಷ ಎಂದರೆ, ಈಗಲೂ ಸಲ್ಲು ಜೊತೆ ಅವರು ಒಳ್ಳೆಯ ಸಂಬಂಧ ಹೊಂದಿದ್ದಾರೆ ಮತ್ತು ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೇ’ ಹಾಗೂ ‘ಟೈಗರ್ 3’ ರೀತಿಯ ಸಿನಿಮಾಗಳನ್ನು ಮಾಡಿದರು.

ಸಲ್ಲು ಜೊತೆ ಬ್ರೇಕಪ್ ಆದಾಗ ಕತ್ರಿನಾ ಅತ್ತಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸಿಕ್ಕಿದ್ದೇ ರಣಬೀರ್ ಕಪೂರ್. 2009ರಲ್ಲಿ ಇವರ ಪರಿಚಯ ಆಯಿತು ಮತ್ತು ಪ್ರೀತಿ ಮೂಡಿತು. 2016ರವರೆಗೆ ಇವರಿಬ್ಬರೂ ಜೊತೆಯಾಗಿದ್ದರು. ಹಲವು ಕಡೆಗಳಲ್ಲಿ ಒಟ್ಟಾಗಿ ಸುತ್ತಾಟ ಮಾಡಿದ್ದರು. ಆ ಬಳಿಕ ಕತ್ರಿನಾ ಹಾಗೂ ರಣಬೀರ್ ಬ್ರೇಕಪ್ ಮಾಡಿಕೊಂಡರು. ರಣಬೀರ್ ಮೋಸ್ ಮಾಡಿದ್ದರಿಂದಲೇ ಕತ್ರಿನಾ ಬ್ರೇಕಪ್ ಮಾಡಿಕೊಂಡರು ಎನ್ನುವ ವರದಿ ಇದೆ.

ಇದನ್ನೂ ಓದಿ
Image
ಎಲ್ಲಿ ಹೋದರು ಕತ್ರಿನಾ ಕೈಫ್? ಬರ್ತ್​ಡೇಗಾದರೂ ಸಿಗುತ್ತಾ ಹೊಸ ಸಿನಿಮಾ?
Image
‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ ಮನೆಗೆ ಬಂದಳು ಮಹಾಲಕ್ಷ್ಮೀ
Image
ಬರಲಿದೆ ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’; ಇಲ್ಲಿದೆ ಆಡಿಷನ್ ವಿವರ
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

ಇದನ್ನೂ ಓದಿ: ಎಲ್ಲಿ ಹೋದರು ಕತ್ರಿನಾ ಕೈಫ್? ಬರ್ತ್​ಡೇಗಾದರೂ ಸಿಗುತ್ತಾ ಹೊಸ ಸಿನಿಮಾ?

ಬ್ರೇಕಪ್ ಬಳಿಕ ಅತ್ತಿದ್ದಾಗಿ ಕತ್ರಿನಾ ಒಪ್ಪಿಕೊಂಡಿದ್ದರು. ಅಲ್ಲದೆ ‘ನಾನು ಕೂಡ ಮನುಷ್ಯ. ನನಗೆ ಭಾವನೆಗಳಿವೆ’ ಎಂದು ಅವರು ಹೇಳಿದ್ದರು. ಅವರು ಜೀವನದಲ್ಲಿ ಮುಂದೆ ಸಾಗೋದು ಹೇಗೆ ಎಂಬುದನ್ನು ಅರಿತುಕೊಂಡಿದ್ದಾರೆ. ಈಗ ಅವರು ವಿಕ್ಕಿ ಜೊತೆ ಮದುವೆ ಆಗಿ ಹಾಯಾಗಿದ್ದಾರೆ. ಇವರ ಸಂಬಂಧಕ್ಕೆ ಯಾವುದೇ ದೃಷ್ಟಿ ಬೀಳದಿರಲಿ ಎಂದು ಫ್ಯಾನ್ಸ್ ಕೋರಿಕೊಳ್ಳುತ್ತಿದ್ದಾರೆ.  ಕತ್ರಿನಾ ಬರ್ತ್​ಡೇ ಪ್ರಯುಕ್ತ ಹೊಸ ಸಿನಿಮಾ ಘೋಷಣೆ ಆಗಲಿ ಎಂದು ಪ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.