AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳಿ ಹಾಕದ ನಿಮಗೆ ಮದುವೆ ಏಕೆ ಬೇಕು ಎಂದು ವೈಷ್ಣವಿಯ ಕೇಳಿದ ಅಭಿಮಾನಿ; ಕೂಲ್ ಆಗಿ ವಿವರಿಸಿದ ನಟಿ

ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಉತ್ತರ ಭಾರತದ ಅನುಕೂಲ್ ಮಿಶ್ರಾ ಅವರನ್ನು ವಿವಾಹವಾಗಿದ್ದಾರೆ. ವಿವಾಹದ ಬಳಿಕ ಅವರು ಮಂಗಳಸೂತ್ರ ಧರಿಸದಿರುವುದಕ್ಕೆ ಸಾಕಷ್ಟು ಟ್ರೋಲ್‌ಗಳು ಬಂದಿವೆ. ಆದರೆ, ವೈಷ್ಣವಿ ಅವರು ತಮ್ಮ ಅತ್ತೆಯವರ ಕುಟುಂಬದಲ್ಲಿ ಮಂಗಳಸೂತ್ರ ಧರಿಸುವ ಸಂಪ್ರದಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಳಿ ಹಾಕದ ನಿಮಗೆ ಮದುವೆ ಏಕೆ ಬೇಕು ಎಂದು ವೈಷ್ಣವಿಯ ಕೇಳಿದ ಅಭಿಮಾನಿ; ಕೂಲ್ ಆಗಿ ವಿವರಿಸಿದ ನಟಿ
ವೈಷ್ಣವಿ-ಅನುಕೂಲ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 16, 2025 | 10:31 AM

Share

ಕಿರುತೆರೆ ನಟಿ ವೈಷ್ಣವಿ ಅವರು ಇತ್ತೀಚೆಗೆ ಏರ್​ಫೋರ್ಸ್​ನಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಜೊತೆ ವಿವಾಹ ಆಗಿದ್ದು ಗೊತ್ತೇ ಇದೆ. ಅವರು ಉತ್ತರದವರು. ಇವರು ದಕ್ಷಿಣದವರು. ಆದಾಗ್ಯೂ ಎಲ್ಲ ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ವೈಷ್ಣವಿ (Vaishnavi) ವಿವಾಹ ಆಗಿದ್ದಾರೆ. ಈ ಮೂಲಕ ಮದುವೆ ಆಗಬೇಕು ಎಂಬ ಬಹು ವರ್ಷಗಳ ಕನಸು ಈಡೇರಿದೆ ಎಂದೇ ಹೇಳಬಹುದು. ವಿವಾಹದ ಬಳಿಕ ಅವರ ತಾಳಿ ಹಾಕುತ್ತಿಲ್ಲ ಏಕೆ ಎಂಬುದನ್ನು ವಿವರಿಸಿದ್ದಾರೆ.

ಭಾರತ ವೈವಿಧ್ಯೆತೆ ತುಂಬಿರುವ ದೇಶ. ಹಿಂದೂಗಳೇ ಆದರೂ ಅಲ್ಲಿಯೂ ಬೇರೆ ಬೇರೆ ಸಂಪ್ರದಾಯ ಇದೆ ಎನ್ನಬಹುದು. ವೈಷ್ಣವಿ ಅವರು ದಕ್ಷಿಣದವರು. ಇಲ್ಲಿ ತಾಳಿ ಹಾಕುವ ಸಂಪ್ರದಾಯ ಇದೆ. ಆದರೆ, ಅನುಕೂಲ್ ಮಿಶ್ರಾ ಕುಟುಂಬದಲ್ಲಿ ಆ ರೀತಿಯ ಪದ್ಧತಿಯೇ ಇಲ್ಲವಂತೆ. ಈ ಕಾರಣದಿಂದಲೇ ಅವರು ತಾಳಿಯನ್ನೇ ಹಾಕುತ್ತಿಲ್ಲ.

ವೈಷ್ಣವಿ ಅವರು ತಾಳಿ ಹಾಕಿಲ್ಲ ಎಂದು ಸಾಕಷ್ಟು ಜನರು ಟ್ರೋಲ್ ಮಾಡಿದ್ದನ್ನು ನೀವು ನೋಡಿರಬಹುದು. ಆ ಟ್ರೋಲ್​ಗಳನ್ನು ವೈಷ್ಣವಿ ಅವರು ಗಮನಿಸಿದ್ದಾರೆ. ಇದಕ್ಕೆ ಅವರು ಸಿಟ್ಟು ಮಾಡಿಕೊಳ್ಳದೇ ಕೂಲ್ ಆಗಿ ಉತ್ತರಿಸುವ ಕೆಲಸವನ್ನು ಮಾಡಿದ್ದಾರೆ.

ಇದನ್ನೂ ಓದಿ
Image
ಎಲ್ಲಿ ಹೋದರು ಕತ್ರಿನಾ ಕೈಫ್? ಬರ್ತ್​ಡೇಗಾದರೂ ಸಿಗುತ್ತಾ ಹೊಸ ಸಿನಿಮಾ?
Image
‘ಟಾಕ್ಸಿಕ್’ ನಟಿ ಕಿಯಾರಾ ಅಡ್ವಾಣಿ ಮನೆಗೆ ಬಂದಳು ಮಹಾಲಕ್ಷ್ಮೀ
Image
ಬರಲಿದೆ ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’; ಇಲ್ಲಿದೆ ಆಡಿಷನ್ ವಿವರ
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್

‘ಮದುವೆ ಆದಮೇಲೆ ತಾಳಿ ಯಾಕೆ ಹಾಕುತ್ತಿಲ್ಲ, ಸಂಪ್ರದಾಯಕ್ಕೆ ಗೌರವ ಕೊಡುತ್ತಿಲ್ಲ, ಹಾಗಿದ್ದರೆ ಮದುವೆ ಯಾಕೆ ಬೇಕಿತ್ತು ಎಂದು ಕೆಲವರು ಕೇಳಿದ್ದಾರೆ. ಅದರ ಬಗ್ಗೆ ಮಾತನಾಡುತ್ತಿದ್ದೇನೆ. ಹುಡುಗರ ಮನೆ ಸಂಪ್ರದಾಯವನ್ನು ಹಡುಗಿಯರು ಪಾಲಿಸಬೇಕು. ನಾನು ಅದನ್ನೇ ಮಾಡುತ್ತಿದ್ದೇನೆ. ನಾನು ತಾಳಿ ಏಕೆ ಹಾಕುತ್ತಿಲ್ಲ ಎಂದರೆ, ಅವರ ಪದ್ಧತಿಯಲ್ಲಿ ಅದು ಇಲ್ಲ’ ಎಂದು ವೈಷ್ಣವಿ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಮದುವೆ ಬಳಿಕ ನಟಿ ವೈಷ್ಣವಿ ಗೌಡ ಭೇಟಿ ನೀಡಿದ ಸುಂದರ ತಾಣಗಳಿವು

‘ನನ್ನ ಅತ್ತೆ ತಾಳಿ ಹಾಕುವುದಿಲ್ಲ. ಏಕೆ ಎಂದು ನಾನು ಕೇಳಿಲ್ಲ. ತಾಳಿ ಮುಖ್ಯ ಅಲ್ಲ ಎಂದು ಅವರು ಹೇಳಿದರು. ಆದರೆ, ಇಲ್ಲಿ ಬೇರೆ ಶಾಸ್ತ್ರ ಇದೆ. ಮೂಗಿಗೆ ಚುಚ್ಚಿರಬೇಕು. ಕೈಗೆ ಗಾಜಿನ ಬಳೆ, ಒಂದು ಥ್ರೆಡ್ ಇರಬೇಕು. ಜೊತೆಗೆ ಕಾಲಿಗೆ ಉಂಗುರ ಹಾಕಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲಾ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್