AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನದ ಬೆಲೆ 13,500 ರೂನಿಂದ 31,500 ರೂಗೆ ಏರುತ್ತಾ? ಎಡ್ ಯಾರ್ದೆನಿ ಭವಿಷ್ಯ

Gold price prediction by Ed Yardeni: ಗಗನಕ್ಕೇರುವ ಚಿನ್ನದ ಬೆಲೆ ಇಳಿಯುವ ಯಾವ ಸೂಚನೆಯೂ ಇಲ್ಲ. ಬೆಲೆ ಹೆಚ್ಚಿದಷ್ಟೂ ಅದಕ್ಕೆ ಡಿಮ್ಯಾಂಡ್ ಹೆಚ್ಚುತ್ತಿದೆ. ಮಾರುಕಟ್ಟೆ ವಿಶ್ಲೇಷಕ ಎಡ್ ಯಾರ್ದೆನಿ ಪ್ರಕಾರ ಮುಂದಿನ ಮೂರು ವರ್ಷದಲ್ಲಿ ಚಿನ್ನದ ಬೆಲೆ ಔನ್ಸ್​ಗೆ 10,000 ಡಾಲರ್ ದಾಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 31,000 ರೂ ದಾಟಿ ಹೋಗಬಹುದು ಎಂಬುದು ಅವರ ಎಣಿಕೆ.

ಚಿನ್ನದ ಬೆಲೆ 13,500 ರೂನಿಂದ 31,500 ರೂಗೆ ಏರುತ್ತಾ? ಎಡ್ ಯಾರ್ದೆನಿ ಭವಿಷ್ಯ
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 22, 2025 | 4:29 PM

Share

ನವದೆಹಲಿ, ಡಿಸೆಂಬರ್ 22: ಚಿನ್ನದ ಬೆಲೆ (gold rate) ಕಳೆದ ಒಂದು ವರ್ಷದಲ್ಲಿ ಅಸಾಮಾನ್ಯ ರೀತಿಯಲ್ಲಿ ಓಡಿದೆ. ಈ ಭರ್ಜರಿ ಓಟ ಹೀಗೆ ಮುಂದುವರಿಯುತ್ತಾ ಎನ್ನುವುದು ಹಲವರಿಗೆ ಇರುವ ಪ್ರಶ್ನೆಯಾಗಿದೆ. ಯಾರ್ದೇನಿ ರಿಸರ್ಚ್ ಸಂಸ್ಥೆಯ ಮುಖ್ಯಸ್ಥರಾದ ಎಡ್ ಯಾರ್ದೇನಿ ಅವರ ಪ್ರಕಾರ ಚಿನ್ನದ ಬೆಲೆ 2029ರಲ್ಲಿ ಗ್ರಾಮ್​ಗೆ 31,000 ರೂ ದಾಟಿ ಹೋಗಬಹುದು.

ಸದ್ಯ ಅಮೆರಿಕದ ನ್ಯೂಯಾರ್ಕ್​ನ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ (ಸರಕು ವಿನಿಮಯ ಕೇಂದ್ರ) ಚಿನ್ನದ ಬೆಲೆ ಒಂದು ಔನ್ಸ್​ಗೆ 4,400 ಡಾಲರ್ ಇದೆ. 2029ರಲ್ಲಿ ಇದರ ಬೆಲೆ ಒಂದು ಔನ್ಸ್​ಗೆ 10,000 ಡಾಲರ್​ಗೆ ಏರಬಹುದು ಎಂಬುದ ಎಡ್ ಯಾರ್ಡೇನಿ ಅವರು ಮಾಡಿರುವ ಅಂದಾಜು.

ಒಂದು ಔನ್ಸ್ ಎಂದರೆ 28.3495 ಗ್ರಾಮ್. ಒಂದು ಔನ್ಸ್​ಗೆ 10,000 ಡಾಲರ್ ಎಂದರೆ, ಒಂದು ಗ್ರಾಮ್​ಗೆ ಸುಮಾರು 352 ಡಾಲರ್ ಆಗುತ್ತದೆ. ಭಾರತೀಯ ಕರೆನ್ಸಿಯಲ್ಲಿ 31,740 ರೂ ಆಗುತ್ತದೆ. ಎಡ್ ಯಾರ್ದೆನಿ ಭವಿಷ್ಯ ನಿಜವಾದಲ್ಲಿ ಮುಂದಿನ ಮೂರು ವರ್ಷದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 31,000 ರೂ ಅಥವಾ 32,000 ರೂ ದಾಟಿ ಹೋಗಬಹುದು. ಭಾರತದಲ್ಲಿ ಸದ್ಯ ಒಂದು ಗ್ರಾಮ್ ಚಿನ್ನದ ಬೆಲ 13,500 ರೂನಷ್ಟಿದೆ. ಎರಡೂವರೆ ಪಟ್ಟು ಬೆಲೆ ಅಧಿಕಗೊಳ್ಳಬಹುದು.

ಇದನ್ನೂ ಓದಿ: Gold Rate Today Bangalore: ಚಿನ್ನದ ಬೆಲೆ 10 ಗ್ರಾಮ್​ಗೆ 1,000 ರೂ ಏರಿಕೆ; ಇಲ್ಲಿದೆ ದರಪಟ್ಟಿ

2025ರಲ್ಲಿ ಚಿನ್ನದ ಬೆಲೆ ಶೇ. 67ರಷ್ಟು ಹೆಚ್ಚಿದೆ. ಇತ್ತೀಚಿನ ಕೆಲ ವರ್ಷಗಳಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭ ಸಿಗುತ್ತಾ ಬಂದಿದೆ.

ಭಾರತದ ಷೇರು ಮಾರುಕಟ್ಟೆ ಬಗ್ಗೆ ಯಾರ್ದೆನಿ ನಿರೀಕ್ಷೆ

ಮಾರುಕಟ್ಟೆ ವಿಶ್ಲೇಷಕರಾಗಿರುವ ಎಡ್ ಯಾರ್ದೆನಿ ಅವರು ಭಾರತದ ಈಕ್ವಿಟಿ ಮಾರುಕಟ್ಟೆ ಬಗ್ಗೆ ಬಹಳ ಸಕಾರಾತ್ಮಕವಾಗಿದ್ದಾರೆ. ಹಲವು ವರ್ಷಗಳಿಂದ ಇಲ್ಲಿಯ ಮಾರುಕಟ್ಟೆ ಬಹಳ ಪ್ರಬಲವಾಗಿ ಬೆಳೆದಿದೆ. 2026ರಲ್ಲಿ ಇದು ಸ್ಥಿರಗೊಳ್ಳುವ ವರ್ಷ ಎಂಬುದು ಅವರ ಭಾವನೆ.

ಅಮೆರಿಕದೊಂದಿಗೆ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾಗಿಬಿಟ್ಟರೆ ಭಾರತದ ಈಕ್ವಿಟಿ ಮಾರುಕಟ್ಟೆ ಹೊಸ ಎತ್ತರಕ್ಕೆ ಹೋಗುತ್ತದೆ ಎಂದು ಹೇಳುವ ಅವರು, ಭಾರತ ಹಾಗೂ ಚೀನಾ ಈ ಎರಡೂ ದೇಶಗಳ ಮಾರುಕಟ್ಟೆಗಳು ಉತ್ತಮ ಅವಕಾಶ ಕೊಡುತ್ತವೆ ಎಂದಿದ್ದಾರೆ. ಹಾಗೆಯೇ, ಅವರು ಆ ಎರಡು ದೇಶಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ಭಾರತಕ್ಕೇ ಆದ್ಯತೆ ಕೊಡುತ್ತಾರಂತೆ.

ಇದನ್ನೂ ಓದಿ: ಬೆಂಗಳೂರಿನ ಐಫೋನ್ ಫ್ಯಾಕ್ಟರಿಯಲ್ಲಿ ಕ್ಷಿಪ್ರವೇಗದಲ್ಲಿ 30,000 ಉದ್ಯೋಗಿಗಳ ನೇಮಕ; ಭಾರತದಲ್ಲಿ ಸಿಕ್ಕಾಪಟ್ಟೆ ಆಗುತ್ತಿದೆ ಐಟಿ ಹೈರಿಂಗ್

‘ಭಾರತದಲ್ಲಿ ಹೂಡಿಕೆ ಮಾಡುವುದು ನನ್ನ ಆದ್ಯತೆ. ಅದು ಯಾಕೆಂದರೆ, ಚೀನಾದಲ್ಲಿರುವುದಕ್ಕಿಂತ ಉತ್ತಮವಾದ ಕಾನೂನು ಮತ್ತು ಕಾರ್ಪೊರೇಟ್ ಸಿಸ್ಟಂ ಭಾರತದಲ್ಲಿ ಇದೆ’ ಎಂದು ಯಾರ್ದೆನಿ ರಿಸರ್ಚ್ ಸಂಸ್ಥೆಯ ಅಧ್ಯಕ್ಷರೂ ಆದ ಅವರು ವಿಶ್ಲೇಷಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ