ಕಪ್ಪು-ಕಪ್ಪು ಸಿನಿಮಾಗಳಿಂದ ಕಗ್ಗತ್ತಲ ಸಿನಿಮಾಗಳ ಕಡೆ ಹೊರಳಿದ ಪ್ರಶಾಂತ್ ನೀಲ್
Prashanth Neel: ಪ್ರಶಾಂತ್ ನೀಲ್ ಅವರ ಸಿನಿಮಾಗಳ ಪ್ರತಿ ಪ್ರೇಮ್ನಲ್ಲೂ ಕಪ್ಪು ಅಥವಾ ತಿಳು ಕಪ್ಪು ಬಣ್ಣಗಳೇ ತುಂಬಿರುತ್ತವೆ. ಪ್ರಶಾಂತ್ ನೀಲ್ ಅವರು ತಮ್ಮ ಸಿನಿಮಾಗಳಲ್ಲಿ ಅತಿಯಾಗಿ ಕಪ್ಪು ಬಣ್ಣ ಬಳಸುತ್ತಾರೆ. ಇದೇ ಕಾರಣಕ್ಕೆ ಪ್ರತಿ ಬಾರಿ ಟ್ರೋಲ್ ಸಹ ಆಗುತ್ತಾರೆ. ಆದರೆ ಹಾಗೆ ಕಪ್ಪು ಬಣ್ಣವನ್ನು ಹೆಚ್ಚಾಗಿ ಬಳಸುವುದೇ ಅವರ ಶೈಲಿ ಆಗಿಬಿಟ್ಟಿದೆ. ಆದರೆ ಇದೀಗ ಪ್ರಶಾಂತ್ ನೀಲ್ ತಿಳಿ ಕಪ್ಪು ಬಣ್ಣದಿಂದ ಸಂಪೂರ್ಣ ಕಗ್ಗತ್ತಲ ಕಡೆಗೆ ಹೊರಳಿದ್ದಾರೆ.

ಪ್ರಶಾಂತ್ ನೀಲ್ (Prashanth Neel) ಸಿನಿಮಾಗಳಲ್ಲಿ ಒಂದು ವಿಧದ ಟೆಂಪ್ಲೆಟ್ ಇರುತ್ತದೆ. ಅವರ ಸಿನಿಮಾಗಳ ಪ್ರತಿ ಪ್ರೇಮ್ನಲ್ಲೂ ಕಪ್ಪು ಅಥವಾ ತಿಳು ಕಪ್ಪು ಬಣ್ಣಗಳೇ ತುಂಬಿರುತ್ತವೆ. ಪ್ರಶಾಂತ್ ನೀಲ್ ಅವರು ತಮ್ಮ ಸಿನಿಮಾಗಳಲ್ಲಿ ಅತಿಯಾಗಿ ಕಪ್ಪು ಬಣ್ಣ ಬಳಸುತ್ತಾರೆ. ಇದೇ ಕಾರಣಕ್ಕೆ ಪ್ರತಿ ಬಾರಿ ಟ್ರೋಲ್ ಸಹ ಆಗುತ್ತಾರೆ. ಆದರೆ ಹಾಗೆ ಕಪ್ಪು ಬಣ್ಣವನ್ನು ಹೆಚ್ಚಾಗಿ ಬಳಸುವುದೇ ಅವರ ಶೈಲಿ ಆಗಿಬಿಟ್ಟಿದೆ. ಆದರೆ ಇದೀಗ ಪ್ರಶಾಂತ್ ನೀಲ್ ತಿಳಿ ಕಪ್ಪು ಬಣ್ಣದಿಂದ ಸಂಪೂರ್ಣ ಕಗ್ಗತ್ತಲ ಕಡೆಗೆ ಹೊರಳಿದ್ದಾರೆ.
ಪ್ರಶಾಂತ್ ನೀಲ್, ಆಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ನಿರ್ದೇಶಿಸುತ್ತಾ ಭಾರಿ ಯಶಸ್ಸು ಗಳಿಸಿದ್ದಾರೆ. ಆದರೆ ಇದೀಗ ಅವರ ಹಾರರ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಹಾಗೆಂದು ಪ್ರಶಾಂತ್ ನೀಲ್ ಅವರು ಹಾರರ್ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ ಬದಲಿಗೆ ಸಿನಿಮಾದ ಸಹ ನಿರ್ಮಾಣ ಹಾಗೂ ಸಿನಿಮಾವನ್ನು ಪ್ರಸೆಂಟ್ ಮಾಡುತ್ತಿದ್ದಾರೆ.
ಪ್ರಸ್ತುತ ಪ್ರಶಾಂತ್ ನೀಲ್ ಅವರು ಜೂ ಎನ್ಟಿಆರ್ ನಟನೆಯ ಹೊಸ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಇದೀಗ ಮೈತ್ರಿ ಮೂವಿ ಮೇಕರ್ಸ್ ಅವರೇ ನಿರ್ಮಾಣ ಮಾಡುತ್ತಿರುವ ಹೊಸ ಹಾರರ್ ಸಿನಿಮಾ ಅನ್ನು ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಲಿದ್ದಾರೆ. ಸಿನಿಮಾದ ಸಹ ನಿರ್ಮಾಣದ ಜವಾಬ್ದಾರಿಯನ್ನೂ ನೀಲ್ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್ 3 ಫೈನಲ್ ಡ್ರಾಫ್ಟ್ ಸಿದ್ಧ’; ಪ್ರಶಾಂತ್ ನೀಲ್ ಪೋಸ್ಟ್ ಹಿಂದಿನ ಅಸಲಿಯತ್ತು ಏನು?
ಸಿನಿಮಾನಲ್ಲಿ ಸೂರ್ಯರಾಜ್ ವೀರಭತಿನಿ, ಹನು ರೆಡ್ಡಿ, ಪ್ರೀತಿ ಪಗದಾಲ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಹಾರರ್ ಸಿನಿಮಾವನ್ನು ಪ್ರಶಾಂತ್ ನೀಲ್ ಗರಡಿಯಲ್ಲಿ ಪಳಗಿರುವ ಕೀರ್ತನ್ ನಾಡಗೌಡ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ನಿನ್ನೆಯಷ್ಟೆ ನಡೆದಿದೆ. ಈ ಕಥೆಯು ವಿಜ್ಞಾನ ಮತ್ತು ಮೂಢನಂಬಿಕೆಗಳ ಕುರಿತಾದ ಕತೆಯನ್ನು ಒಳಗೊಂಡಿದೆ. ಇಂತಹ ಯುವ ಪ್ರತಿಭೆಗಳನ್ನು ಬೆಂಬಲಿಸಲು ಮೈತ್ರಿ ಮೂವಿ ಮೇಕರ್ಸ್ ಮತ್ತು ಪ್ರಶಾಂತ್ ನೀಲ್ ಒಟ್ಟಾಗಿರುವುದನ್ನು ಉದ್ಯಮದ ದಿಗ್ಗಜರು ಶ್ಲಾಘಿಸಿದ್ದು. ಸಿನಿಮಾಕ್ಕೆ ಶುಭ ಕೋರಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
ಪ್ರಶಾಂತ್ ನೀಲ್ ಪ್ರಸ್ತುತ ಜೂ ಎನ್ಟಿಆರ್ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ. ಈ ಸಿನಿಮಾಕ್ಕಾಗಿ ಜೂ ಎನ್ಟಿಆರ್ ದೇಹವನ್ನು ಸಪೂರಗೊಳಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ. ಅದಾದ ಬಳಿಕ ಪ್ರಶಾಂತ್ ನೀಲ್, ಪ್ರಭಾಸ್ ನಟನೆಯ ‘ಸಲಾರ್ 2’ ಸಿನಿಮಾ ಚಿತ್ರೀಕರಣ ಮಾಡುವ ಸಾಧ್ಯತೆ ಇದೆ. ಅದರ ಬಳಿಕ ಅಲ್ಲು ಅರ್ಜುನ್ ನಾಯಕರಾಗಿರುವ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




