ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ (JR. NTR) ಸಿನಿಮಾ ಘೋಷಣೆ ಆಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. ಆದರೆ, ಸಿನಿಮಾ ಇಷ್ಟು ದಿನ ಸೆಟ್ಟೇರಿರಲಿಲ್ಲ. ಈಗ ಚಿತ್ರದ ಶೂಟ್ ಭರದಿಂದ ಸಾಗುತ್ತಿದೆ. ಈಗ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆಯೂ ಮಾಹಿತಿ ಹೊರ ಬಿದ್ದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ಈ ಸಿನಿಮಾ ವೀಕ್ಷಿಸಬೇಕು ಎಂದರೆ ಇನ್ನೂ ಒಂದು ವರ್ಷಗಳಿಗೂ ಅಧಿಕ ಕಾಲ ನೀವು ಕಾಯಲೇಬೇಕು.
ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಬಳಿಕ ಒಂದು ಬ್ರೇಕ್ ಪಡೆದರು. ಅವರು ಮುಂಬರುವ ತಮ್ಮ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡರು. ಅವರು ‘ಸಲಾರ್ 2’ ಎತ್ತಿಕೊಳ್ಳುತ್ತಾರಾ ಅಥವಾ ‘ಕೆಜಿಎಫ್ 3’ ಮಾಡುತ್ತಾ ಎನ್ನುವ ಪ್ರಶ್ನೆ ಇತ್ತು. ಆದರೆ, ಹಳೆಯ ಕಮಿಟ್ಮೆಂಟ್ಗಳಲ್ಲಿ ಒಂದಾದ ಜೂನಿಯರ್ ಎನ್‌ಟಿಆರ್ ಜೊತೆಗಿನ ಚಿತ್ರವನ್ನು ಅವರು ಘೋಷಣೆ ಮಾಡಿದರು. ಈ ಸಿನಿಮಾ 2026ರ ಜೂನ್ 25ರಂದು ರಿಲೀಸ್ ಆಗಲಿದೆ.
ಈ ಮೊದಲು ಪ್ರಶಾಂತ್ ನೀಲ್ ಸಿನಿಮಾ 2026ರ ಸಂಕ್ರಾಂತಿಗೆ ಬರಲಿದೆ ಮತ್ತು ದಳಪತಿ ವಿಜಯ್ ಸಿನಿಮಾ ಜೊತೆ ಕ್ಲ್ಯಾಶ್ ಮಾಡಿಕೊಳ್ಳಲಿದೆ ಎಂದು ವರದಿ ಆಗಿತ್ತು. ಆದರೆ, ಈಗಷ್ಟೇ ಚಿತ್ರದ ಶೂಟ್ ಆರಂಭ ಆಗಿದೆ. ಅಷ್ಟು ಬೇಗ ಸಿನಿಮಾ ರಿಲೀಸ್ ಮಾಡೋದು ಪ್ರಶಾಂತ್ ನೀಲ್ಗೆ ಅಸಾಧ್ಯ. ಈ ಕಾರಣದಿಂದಲೇ 2026ರ ಜೂನ್ಗೆ ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ.
See you in cinemas on 25 June 2026…. #NTRNeel pic.twitter.com/SkMhyaF71c
— Jr NTR (@tarak9999) April 29, 2025
ಪ್ರಶಾಂತ್ ನೀಲ್ ಅವರ ಈ ಮೊದಲ ಸಿನಿಮಾಗಳು ಅಂದುಕೊಂಡ ದಿನಾಂಕದಂದು ರಿಲೀಸ್ ಆಗದೇ ಇದ್ದ ಹಲವು ಉದಾಹರಣೆ ಇದೆ. ಪ್ರಶಾಂತ್ ನೀಲ್ ಸದ್ಯ ಒಂದು ವರ್ಷಕ್ಕೂ ಅಧಿಕ ಸಮಯ ತೆಗೆದುಕೊಂಡಿದ್ದಾರೆ. ಈ ಚಿತ್ರಕ್ಕೆ ಆ ರೀತಿ ಆಗದಿರಲಿ ಎಂಬುದು ಫ್ಯಾನ್ಸ್ ಕೋರಿಕೆ.
ಇದನ್ನೂ ಓದಿ: ಪ್ರಶಾಂತ್ ನೀಲ್ ಸಿನಿಮಾ ಪ್ರಾರಂಭಿಸಲಿರುವ ಜೂ ಎನ್‌ಟಿಆರ್, ಮುಗಿಯುವುದು ಯಾವಾಗ?
ಈ ಸಿನಿಮಾದ ಟೈಟಲ್ ಏನೆಂಬುದು ಇನ್ನೂ ಬಹಿರಂಗ ಆಗಿಲ್ಲ. ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ನ ಸಿನಿಮಾ ಆದ್ದರಿಂದ #NTRNeel ಎಂದು ಚಿತ್ರಕ್ಕೆ ತಾತ್ಕಾಲಿಕವಾಗಿ ಟೈಟಲ್ ಇಡಲಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿರುವುದರಿಂದ ‘ಡ್ರ್ಯಾಗನ್’ ಎಂಬ ಇಂಗ್ಲಿಷ್ ಟೈಟಲ್ ಇಡಲಾಗಿದೆ ಎನ್ನುವ ಮಾತು ಕೂಡ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.