ಜಲಪಾತದಲ್ಲಿ ಸಿಕ್ತು ‘ಫ್ಯಾಮಿಲಿ ಮ್ಯಾನ್ 3’ ನಟನ ಶವ; ಗೆಳೆಯರಿಂದಲೇ ಕೊಲೆ ಆದ ರೋಹಿತ್?
‘ಫ್ಯಾಮಿಲಿ ಮ್ಯಾನ್ 3’ ನಟ ರೋಹಿತ್ ಬಾಸ್ಫೋರ್ ಅವರ ಮೃತದೇಹ ಅಸ್ಸಾಂನಲ್ಲಿ ಪತ್ತೆಯಾಗಿದೆ. ಅವರ ಸಾವು ಆಕಸ್ಮಿಕವೋ ಅಥವಾ ಕೊಲೆಯೋ ಎಂಬುದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೋಹಿತ್ ಅವರ ಮೇಲೆ ಕೆಲವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ.

‘ಫ್ಯಾಮಿಲಿ ಮ್ಯಾನ್ ಸೀಸನ್ 3’ (Family Man Season 3) ವೆಬ್ ಸೀರಿಸ್ನಲ್ಲಿ ನಟಿಸಿದ್ದ ರೋಹಿತ್ ಬಸ್ಫೋರೆ ಅವರು ಹೆಣವಾಗಿ ಪತ್ತೆಯಾಗಿದ್ದಾರೆ. ಅಸ್ಸಾಂನಲ್ಲಿರೋ ಗರ್ಭಾಗಂ ಫಾರೆಸ್ಟ್ನ ಜಲಪಾತದಲ್ಲಿ ಇವರ ಹೆಣ ಸಿಕ್ಕಿದೆ. ಈ ಘಟನೆ ಶಾಕಿಂಗ್ ಎನಿಸಿದೆ. ನಟನ ಸಾವು ಆಕಸ್ಮಿಕವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿದೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಲವರ ಮೇಲೆ ಅನುಮಾನ ಮೂಡಿದೆ. ‘ಫ್ಯಾಮಿಲಿಮ್ಯಾನ್ 3’ ಸೀಸನ್ನ ಶೂಟಿಂಗ್ ನಡೆಯುತ್ತಿರುವಾಗಲೇ ಅವರ ಹತ್ಯೆ ಆಗಿದೆ.
ರೋಹಿತ್ ಅವರು ಮುಂಬೈನಲ್ಲಿ ವಾಸವಿದ್ದರು. ಕೆಲ ತಿಂಗಳ ಹಿಂದೆ ಅವರು ತಮ್ಮ ಹುಟ್ಟೂರಾದ ಗುವಾಹಟಿಗೆ ಮರಳಿದ್ದರು. ಭಾನುವಾರ (ಏಪ್ರಿಲ್ 27) ರೋಹಿತ್ ಅವರು ಗೆಳೆಯರ ಜೊತೆ ಹೊರಕ್ಕೆ ಹೋಗೋದಾಗಿ ಹೇಳಿದ್ದರು. ಆದರೆ, ಸಂಜೆ ಆದರೂ ಅವರು ಮನೆಗೆ ಬರಲಿಲ್ಲ ಮತ್ತು ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಇದು ಸಾಕಷ್ಟು ಅನುಮಾನ ಮೂಡಿಸಿತು. ಆ ಬಳಿಕ ಗೆಳೆಯರು ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಅವರು ನಿಧನ ಹೊಂದಿದ್ದಾಗಿ ಘೋಷಣೆ ಮಾಡಲಾಯಿತು.
ಈಗ ರೋಹಿತ್ ಕುಟುಂಬ ಮಗನ ಮರ್ಡರ್ ಆಗಿದೆ ಎಂಬ ಆರೋಪ ಮಾಡುತ್ತಿದ್ದಾರೆ. ಇತ್ತೀಚೆಗೆ ಪಾರ್ಕಿಂಗ್ ವಿಚಾರಕ್ಕೆ ರಂಜಿತ್, ಅಶೋಕ್, ಧರಮ್ ಜೊತೆ ಕಿತ್ತಾಟ ನಡೆದಿತ್ತು. ಈ ವೇಳೆ ಅವರು ರೋಹಿತ್ಗೆ ಕೊಲೆ ಮಾಡೋ ಬೆದರಿಕೆ ಹಾಕಿದ್ದರು. ಅಲ್ಲದೆ, ರೋಹಿತ್ ಅವರ ಸಂಬಂಧಿ, ಅಮರ್ದೀಪ್ ಕೂಡ ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ. ಈ ಟ್ರಿಪ್ನ ಪ್ಲ್ಯಾನ್ ಮಾಡಿದ್ದೇ ಅವರು ಎನ್ನಲಾಗಿದೆ.
ಇದನ್ನೂ ಓದಿ: ಕೊನೆಗೂ ಹೊರಬಿತ್ತು ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ದಿನಾಂಕ; ಮನೋಜ್ ಜೊತೆ ಮತ್ತೋರ್ವ ಸ್ಟಾರ್ ಹೀರೋ
ಶಾಕಿಂಗ್ ವಿಚಾರ ಎಂದರೆ ನಟನ ದೇಹದ ಮೇಲೆ ಸಾಕಷ್ಟು ಗಾಯಗಳಿವೆ. ಹೀಗಾಗಿ, ಇದು ಆಕಸ್ಮಿಕ ಸಾವು ಎಂದು ಹೇಳಲು ಸಾಧ್ಯವಿಲ್ಲ. ಇದು ಕೊಲೆ ಇದ್ದರೂ ಇರಬಹುದು ಎಂದು ಹೇಳಲಾಗುತ್ತಿದೆ. ‘ಈಗಾಗಲೇ ನಟ ಮರಣೋತ್ತರ ಪರೀಕ್ಷೆ ನಡೆದಿದೆ. ಅವರ ದೇಹದ ಮೇಲೆ ಸಾಕಷ್ಟು ಕಲೆಗಳು ಕಂಡಿವೆ. ಮುಖ, ತಲೆಗೆ ಗಾಯಗಳಾಗಿವೆ. ನಾವು ಪ್ರಕರಣದ ತನಿಖೆ ನಡೆಸುತ್ತೇವೆ’ ಎಂದು ಪೊಲೀಸರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








