ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ

ಆರನೇ ವಾರ ಪ್ರಶಾಂತ್​ ಸಂಬರಗಿ ಅವರನ್ನು ಕೆಲವರು ಮಾವ ಎಂದು ಕರೆದಿದ್ದರು. ಇದಕ್ಕೆ ಪ್ರಶಾಂತ್​ ಸಿಟ್ಟಾಗಿದ್ದರು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆ ಆಗಿದೆ.

ತಪ್ಪಾಗಿದೆ ಕ್ಷಮಿಸಿ; ಸುದೀಪ್​ ನೇರ ಪ್ರಶ್ನೆಗೆ ಹಣ್ಣುಗಾಯಿ ನೀರುಗಾಯಿ ಆದ ಸಂಬರಗಿ
ಪ್ರಶಾಂತ್​ ಸಂಬರಗಿ
Edited By:

Updated on: Apr 11, 2021 | 7:25 AM

ಬಿಗ್​ ಬಾಸ್​ ಆರನೇ ವಾರ ಸಾಕಷ್ಟು ರಾಜಕೀಯಗಳಿಗೆ ಸಾಕ್ಷಿ ಆಯಿತು. ಮನೆಯಲ್ಲಿ ಗುಂಪಿದೆ ಎಂದು ಹೇಳಿಕೊಂಡು ಅದನ್ನು ಒಡೆಯುತ್ತೇನೆ ಎಂದು ಪ್ರಶಾಂತ್ ಸಂಬರಗಿ ಹೇಳಿದರು. ಈ ಸಂದರ್ಭದಲ್ಲಿ ಮನೆಯವರಿಗೂ ಹಾಗೂ ಪ್ರಶಾಂತ್​ಗೂ ಜಟಾಪಟಿ ಏರ್ಪಟ್ಟಿತ್ತು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆಗೆ ಬಂದಿತ್ತು. ಸುದೀಪ್​ ಕೇಳಿದ ನೇರ ಪ್ರಶ್ನೆಗಳಿಗೆ ಪ್ರಶಾಂತ್​ ಸಂಬರಗಿ ತಬ್ಬಿಬ್ಬಾದರು.

ದೊಡ್ಮನೆಯಲ್ಲಿರುವ ಕೆಲವರು ಮೊದಲಿನಿಂದಲೂ ಪ್ರಶಾಂತ್​ ಸಂಬರಗಿ ಅವರನ್ನು ಮಾವ ಎಂದು ಕರೆಯುತ್ತಿದ್ದಾರೆ. ಆದರೆ ಆರನೇ ವಾರ ಇದೇ ವಿಚಾರಕ್ಕೆ ಪ್ರಶಾಂತ್​ ಸಿಟ್ಟಾಗಿದ್ದರು. ನನ್ನನ್ನು ಹಾಗೆ ಕರೆಯಬೇಡಿ ಎಂದು ಮನೆಯವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಈ ವಿಚಾರ ವೀಕೆಂಡ್​ನಲ್ಲಿ ಚರ್ಚೆ ಆಗಿದೆ. ಮಾವ ಅನ್ನೋದು ಕೆಟ್ಟ ಶಬ್ದವೇ ಎಂದು ಸುದೀಪ್​ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ಪ್ರಶಾಂತ್​, ಖಂಡಿತವಾಗಿಯೂ ಅಲ್ಲ. ಆದರೆ, ಎದುರು ಮಾವ ಎಂದು ಹೇಳಿ ಅವರು ಹಿಂಬದಿಯಿಂದ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಈ ಶಬ್ದಕ್ಕೆ ಡಬಲ್​ ಮೀನಿಂಗ್​ ಇದೆ ಎಂದು ಮನೆಯಲ್ಲಿ ಕೆಲವರು ಹೇಳಿದರು. ಹಾಗೆ ಕರೆಯಬೇಡಿ ಎಂದು ನಾನು ಮನೆಯ ಎಲ್ಲರಿಗೂ ಮನವಿ ಮಾಡಿಕೊಂಡೆ. ಆವತ್ತಿನಿಂದ ನನ್ನದೇ ಹೆಸರಲ್ಲಿ ಕರೆಸಿಕೊಳ್ಳೋ ನಿರ್ಧಾರಕ್ಕೆ ಬಂದೆ​ ಎಂದರು.

ಪ್ರಶಾಂತ್​ ನಿನ್ನ ಬಗ್ಗೆ ಹೊರಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದು ಚಕ್ರವರ್ತಿ ಚಂದ್ರಚೂಡ. ಇದನ್ನು ಬಾಯಿ ಬಿಡಿಸೋಕೆ ಸುದೀಪ್​ ತುಂಬಾನೇ ಪ್ರಯತ್ನಿಸಿದರು. ಆದರೆ, ಪ್ರಶಾಂತ್​ ಎಲ್ಲಿಯೂ ಅದನ್ನು ಹೇಳಿಕೊಂಡಿಲ್ಲ.

ಇನ್ನು, ಬಿಗ್​ ಬಾಸ್​ ಮನೆಯ ಸ್ವಿಮ್ಮಿಂಗ್​ ಫೂಲ್​ನಲ್ಲಿ ಆದ ಜಗಳದ ವಿಚಾರವನ್ನು ಸುದೀಪ್​ ಪ್ರಸ್ತಾಪ ಮಾಡಿದರು. ಹೀಗೆ ಜಗಳವಾಡಿದ್ದು ಉದ್ದೇಶಪೂರ್ವಕವಲ್ಲ ಎಂದು ಪ್ರಶಾಂತ್​ ಹೇಳಿದರು. ಆದರೆ, ಪ್ರಶಾಂತ್​ ಸಿಡಿದೇಳೋಕೆ ಅವರು ಮೊದಲೇ ಸಿದ್ಧತೆ ಮಾಡಿಕೊಂಡಿದ್ದರು ಎಂದು ದಿವ್ಯಾ ಉರುಡುಗ, ಅರವಿಂದ್ ಹೇಳಿದ್ದಾರೆ. ನಂತರ ಪ್ರಶಾಂತ್​ ಎದುರು ಸುದೀಪ್​ ಸಾಲು ಸಾಲು ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ಪ್ರಶಾಂತ್​ ಸಂಬರಗಿ ತಬ್ಬಿಬ್ಬಾಗಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us