150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?

ಪ್ರಶಾಂತ್​ ಸಂಬರಗಿ ಕನ್ನಡ ಬಿಗ್​ ಬಾಸ್ ಸೀಸನ್​ 8 ಮೊದಲ ಇನ್ನಿಂಗ್ಸ್​ನಲ್ಲಿ ತಾವು ಧರಿಸುವ ಬಟ್ಟೆ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇದನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲೂ ಅವರು ಮುಂದುವರಿಸುತ್ತಿದ್ದಾರೆ.

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?
150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?
Edited By:

Updated on: Jun 24, 2021 | 2:55 PM

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಕೇಂದ್ರ ಬಿಂದು ಆಗಿರೋಕೆ ಪ್ರಯತ್ನಪಡುತ್ತಿರುತ್ತಾರೆ. ಇದಕ್ಕೆ ಅವರು ನಾನಾ ರೀತಿಯ ಸರ್ಕಸ್​ ಕೂಡ ಮಾಡಿದ್ದಾರೆ. ಈಗ ಅದು ಎರಡನೇ ಇನ್ನಿಂಗ್ಸ್​ನಲ್ಲೂ ಮುಂದುವರಿಯಲಿದೆ. ಬಿಗ್​ ಬಾಸ್​ ವೇದಿಕೆ ಮೇಲೆಯೇ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಪ್ರಶಾಂತ್​ ಸಂಬರಗಿ ‘ಕನ್ನಡ ಬಿಗ್​ ಬಾಸ್ ಸೀಸನ್​ 8’ರ ಮೊದಲ ಇನ್ನಿಂಗ್ಸ್​ನಲ್ಲಿ ತಾವು ಧರಿಸುವ ಬಟ್ಟೆ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ನಾನಾ ರೀತಿಯ ಬಟ್ಟೆ ಧರಿಸಿ ಮಿಂಚಿದ್ದರು. ಇದನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲೂ ಅವರು ಮುಂದುವರಿಸುತ್ತಿದ್ದಾರೆ.

ಜೂನ್​ 23ರಂದು ಕೊನೆಯ ಸ್ಪರ್ಧಿಯಾಗಿ ಪ್ರಶಾಂತ್​ ಬಿಗ್​ ಬಾಸ್​ ವೇದಿಕೆ ಏರಿದರು. ಈ ವೇಳೆ ಪ್ರಶಾಂತ್​ಗೆ ಸುದೀಪ್​ ಪ್ರಶ್ನೆ ಒಂದನ್ನು ಕೇಳಿದರು. ‘ನನಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕು ಎಂದಿದೆ. ಅದರಲ್ಲಿ ಮುಖ್ಯವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ಈ ಬಾರಿ ಎಷ್ಟು ಬಟ್ಟೆಗಳನ್ನು ತಂದಿದ್ದೀರಾ’ ಎನ್ನುವ ಪ್ರಶ್ನೆ ಸುದೀಪ್​ ಕಡೆಯಿಂದ ಬಂತು. ಇದಕ್ಕೆ ಉತ್ತರಿಸಿದ ಪ್ರಶಾಂತ್​, ‘150 ಬಟ್ಟೆ ತಂದಿದ್ದೇನೆ’ ಎಂದರು. ಈ ವಿಚಾರ ಕೇಳಿದ ಸುದೀಪ್​ ಅಚ್ಚರಿ ಪಟ್ಟರು.

‘ಇನ್ನು ಉಳಿದಿರೋದು ನಾಲ್ಕೇ ವಾರ. ಅಷ್ಟೆಲ್ಲ ಬಟ್ಟೆ ಏಕೆ’ ಎಂದು ಸುದೀಪ್​ ಅಚ್ಚರಿ ಹೊರ ಹಾಕಿದರು. ಇದಕ್ಕೆ ಉತ್ತರಿಸಿದ ಪ್ರಶಾಂತ್​, ‘ನಿತ್ಯ ನಾಲ್ಕೈದು ವಿಧದ ಬಟ್ಟೆ ಹಾಕುತ್ತೇನೆ. ಯಾವಾಗಲೂ ಬಿಳಿ ಬಟ್ಟೆ ಹಾಕಿಕೊಂಡಿರುವುದಕ್ಕಿಂತ ಸ್ವಲ್ಪ ಕಲರ್​ಫುಲ್​ ಕಾಣಬೇಕು ಅನ್ನೋದು ನನ್ನ ಉದ್ದೇಶ’ ಎಂದರು ಪ್ರಶಾಂತ್​.

‘ಒಂದೊಮ್ಮೆ ನೀವು ಫೈನಲ್​ಗೆ ಬಂದರೆ ಅದಕ್ಕೂ ಬಟ್ಟೆ ರೆಡಿ ಇರುತ್ತದೆಯೇ?’ ಎಂದು ಕೇಳಲಾಯಿತು. ಆಗ ಪ್ರಶಾಂತ್​, ‘ಹೌದು, ಅದಕ್ಕೂ ಬಟ್ಟೆ ರೆಡಿ ಇದೆ. ಆದರೆ, ಯಾವುದು ಅಂತ ಡಿಸೈಡ್​ ಮಾಡಿಲ್ಲ. ನಾನು ಫೈನಲ್​ಗೆ ಬರೋದು ಸತ್ಯ’ ಎಂದು ಪ್ರಶಾಂತ್​ ಭವಿಷ್ಯ ನುಡಿದರು.

ಇದನ್ನೂ ಓದಿ:

Bigg Boss Kannada: ಹೊಸ ಬದಲಾವಣೆಯೊಂದಿಗೆ ಬಿಗ್​ ಬಾಸ್​ ಮನೆ ಸೇರಿದ ರಘು ಗೌಡ

Bigg Boss Kannada: ಬಿಗ್​ ಬಾಸ್​ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us