ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ

ಬಿಗ್​ ಬಾಸ್​ ಸದಸ್ಯರು ಮನೆಯಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವೀಕ್ಷಕರಿಗೆ ಗೊತ್ತಾಗುತ್ತದೆ. ಮನೆಯ ಸದಸ್ಯರು ಏನು ಮಾತನಾಡುತ್ತಾರೆ, ಯಾರ ಜತೆ ಇರುತ್ತಾರೆ ಎಂಬುದರ ಮೇಲೆ ಮನೆಯ ಕ್ಯಾಮೆರಾಗಳು ಕಣ್ಣಿಟ್ಟಿರುತ್ತವೆ.

ಬಿಗ್​ ಬಾಸ್​ ಮನೆಯ ದೊಡ್ಡ ಹಗರಣವನ್ನು ಭೇದಿಸಿದ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ
Edited By:

Updated on: Apr 10, 2021 | 7:22 AM

ಕೆಲ ಪಕ್ಷಗಳು ಅಧಿಕಾರಕ್ಕೆ ಬಂದ ನಂತರದಲ್ಲಿ ಸಾಕಷ್ಟು ಹಗರಣಗಳನ್ನು ಮಾಡುತ್ತವೆ. ಹಲವು ವರ್ಷಗಳ ನಂತರ ಅದು ಹೊರಗೆ ಬರುತ್ತವೆ. ಆದರೆ, ಬಿಗ್​ ಬಾಸ್ ಮನೆಯಲ್ಲಿ ಹಗರಣ ಮಾಡೋದು ಎಂದರೆ? ಅಂಥ ಹಗರಣವೊಂದು ಈ ಬಾರಿ ನಡೆದಿದೆ. ಪ್ರಶಾಂತ್​ ಸಂಬರಗಿ ಇದನ್ನು ಭೇದಿಸಿದ್ದಾರೆ.

ಬಿಗ್​ ಬಾಸ್​ ಸದಸ್ಯರು ಮನೆಯಲ್ಲಿ ಏನೆಲ್ಲ ಮಾಡುತ್ತಾರೆ ಎಂಬುದು ವೀಕ್ಷಕರಿಗೆ ಗೊತ್ತಾಗುತ್ತದೆ. ಮನೆಯ ಸದಸ್ಯರು ಏನು ಮಾತನಾಡುತ್ತಾರೆ, ಯಾರ ಜತೆ ಇರುತ್ತಾರೆ ಎಂಬುದರ ಮೇಲೆ ಮನೆಯ ಕ್ಯಾಮೆರಾಗಳು ಕಣ್ಣಿಟ್ಟಿರುತ್ತವೆ. ಹೀಗಾಗಿ, ಯಾರೂ ಕದ್ದು-ಮುಚ್ಚಿ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಮನೆಯಲ್ಲಿ ಹಗರಣ ನಡೆಯೋದು ಅಂದರೆ?

ಈ ಬಾರಿ ಮನೆಯಲ್ಲಿ ನಡೆದಿರೋದು ಅಡುಗೆ ಮನೆಗೆ ಸಂಬಂಧಿಸಿದ ಹಗರಣ. ಈ ಹಗರಣ ನಡೆದಿರೋದು ಕಾಫಿ ವಿಭಾಗದಲ್ಲಿ. ಮನೆಯಲ್ಲಿ ಸಾಕಷ್ಟು ಮಂದಿ ಕಾಫಿ ಪ್ರಿಯರಿದ್ದಾರೆ. ಪ್ರಶಾಂತ್​, ಅರವಿಂದ್, ನಿಧಿ ಸುಬ್ಬಯ್ಯ ಆಗಾಗ ಕಾಫಿ ಹೀರುತ್ತಲೇ ಇರುತ್ತಾರೆ. ಹೀಗಾಗಿ, ಕಾಫಿ ಪೌಡರ್​ಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ, ಮನೆಯ ಸದಸ್ಯರು ಕಾಫಿ ಪೌಡರ್​ ಬಚ್ಚಿಡುತ್ತಿದ್ದಾರೆ.

ಈ ಬಾರಿ ಕ್ಯಾಪ್ಟನ್​ ಆಗಿರುವ ಪ್ರಶಾಂತ್ ಸಂಬರಗಿ ಗಮನಕ್ಕೆ ಈ ವಿಚಾರ ಬಂದಿದೆ. ಅವರು ಬಚ್ಚಿಟ್ಟಿದ್ದ ಕಾಫಿ ಪುಡಿ ಕೈಗೆತ್ತಿಕೊಂಡು ಇದೊಂದು ದೊಡ್ಡ ಹಗರಣ ಎಂದಿದ್ದಾರೆ. ಕಾಫಿ ಪೌಡರ್​​ಅನ್ನು ಹೇಗೆ ಮುಚ್ಚಿಡುತ್ತಾರೆ? ಊಟ ಮಾತ್ರ ಎಲ್ಲರಿಗೂ ಸಮವಾಗಿ ಸಿಗಬೇಕು ಎಂದು ಹೇಳಿದ್ದಾರೆ.

ಇನ್ನು ಶಮಂತ್​ ಕೂಡ ಬಿಗ್​ ಬಾಸ್​ ಮನೆಯಲ್ಲಿ ಕಾಫಿ ಪೌಡರ್​​ ಬಚ್ಚಿಟ್ಟಿದ್ದರು. ಈ ವಿಚಾರದಲ್ಲಿ ಪ್ರಶಾಂತ್​ ಸೈಲೆಂಟ್​ ಆಗಿದ್ದರು. ಹೀಗೇಕೆ ಮಾತನಾಡುತ್ತಿದ್ದಾರೆ ಎಂದು ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ಸಂಬರಗಿ ವೀಕ್​ನೆಸ್​ ಮನೆಯವರಿಗೆ ಗೊತ್ತಾಗಿಹೋಯ್ತು; ಇನ್ನು ಎಲ್ಲವೂ ಸುಲಭ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us