Bigg Boss Kannada: ಪ್ರಶಾಂತ್​ ಸಂಬರಗಿ ಬರೆದ ಈ ಪುಸ್ತಕ 1 ಲಕ್ಷ ಪ್ರತಿ ಮಾರಾಟ ಆಗಿದೆಯಂತೆ!

| Updated By: ಮದನ್​ ಕುಮಾರ್​

Updated on: Mar 26, 2021 | 7:20 AM

ಅಷ್ಟಕ್ಕೂ ಯಾವುದು ಈ ಪುಸ್ತಕ? ‘ತುಪ್ಪಾ ತಿಂದಿದ್ದೇ ತಪ್ಪಾ?’ ಎನ್ನುವುದೇ ಇದರ ಟೈಟಲ್​! ಈ ಪುಸ್ತಕ ಒಂದು ಲಕ್ಷ ಕಾಪಿ ಮಾರಾಟ ಆಗಿದೆಯಂತೆ.

Bigg Boss Kannada: ಪ್ರಶಾಂತ್​ ಸಂಬರಗಿ ಬರೆದ ಈ ಪುಸ್ತಕ 1 ಲಕ್ಷ ಪ್ರತಿ ಮಾರಾಟ ಆಗಿದೆಯಂತೆ!
ಪ್ರಶಾಂತ್​ ಸಂಬರಗಿ
Follow us on

ಪ್ರಶಾಂತ್​ ಸಂಬರಗಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡವರು. ಅವರು ಮನೆಗೆ ಹೋಗುವುದಕ್ಕೂ ಮೊದಲು ಸಾಕಷ್ಟು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಸಾಕಷ್ಟು ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ, ಬಿಗ್​ ಬಾಸ್​ ಮನೆಗೆ ಸೇರಿದ ನಂತರ ಅವರು ವಿವಾದ ಮಾಡಿಯೇ ಮಾಡುತ್ತಾರೆ ಎನ್ನುವುದು ಅನೇಕರ ನಂಬಿಕೆ ಆಗಿತ್ತು. ಮನೆಯಲ್ಲಿ ಸದಾ ಧ್ವನಿ ಏರಿಸಿಕೊಂಡು ಮಾತನಾಡುವ ಪ್ರಶಾಂತ್​ ಈಗ ತಾವು ಬರೆದ ಪುಸ್ತಕವೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪುಸ್ತಕ ಭಾರಿ ಸೇಲ್​ ಕೂಡ ಆಗಿದೆಯಂತೆ.

ಅಷ್ಟಕ್ಕೂ ಯಾವುದು ಈ ಪುಸ್ತಕ? ತುಪ್ಪಾ ತಿಂದಿದ್ದು ತಪ್ಪಾ? ಎನ್ನುವುದೇ ಇದರ ಟೈಟಲ್​! ಈ ಪುಸ್ತಕ ಒಂದು ಲಕ್ಷ ಕಾಪಿ ಮಾರಾಟ ಆಗಿದೆಯಂತೆ. ಅಂದಹಾಗೆ, ಪ್ರಶಾಂತ್​ ಈ ಬಗ್ಗೆ ತುಂಬಾನೇ ಗಂಭೀರವಾಗಿ ಹೇಳಿಲ್ಲ. ಅವರು ಹೀಗೆ ಹೇಳಿದ್ದು ನಾಟಕೀಯವಾಗಿ.

ದೊಡ್ಮನೆಯ ಅಡುಗೆ ಮನೆಯಲ್ಲಿದ್ದ ತುಪ್ಪವನ್ನು ವಿಶ್ವ ಖಾಲಿ ಮಾಡಿದ್ದರು. ಪ್ರಶಾಂತ್​ ಎರಡು ಚಮಚ ತುಪ್ಪ​ ಮಾತ್ರ ತಿಂದಿದ್ದರೂ. ಆದರೂ, ಬಿಗ್​ ಬಾಸ್​ ಮನೆಯಲ್ಲಿ ತುಪ್ಪ ಖಾಲಿ ಮಾಡಿದ್ದಾರೆ ಎನ್ನುವ ಆರೋಪ ಪ್ರಶಾಂತ್​ ಸಂಬರಗಿ ಅವರ ಮೇಲೆ ಬಂದಿತ್ತು. ಅಲ್ಲದೆ, ಮನೆಯಲ್ಲಿ ಎರಡು ದಿನ ಈ ವಿಚಾರ ಭಾರೀ ಚರ್ಚೆ ಆಗಿದೆ. ಇದಕ್ಕೆ ಪ್ರಶಾಂತ್​ ತುಂಬಾನೇ ಬೇಸರಗೊಂಡಿದ್ದರು. ಅಷ್ಟೇ ಅಲ್ಲ, ತುಪ್ಪಾ ತಿಂದಿದ್ದೇ ತಪ್ಪಾ? ಎನ್ನುವ ಪುಸ್ತಕ ಬರೆಯುವುದಾಗಿ ಹೇಳಿದ್ದರು.

ತುಪ್ಪಾ ತಿಂದಿದ್ದು ತಪ್ಪಾ? ಪುಸ್ತಕ ಒಂದು ಲಕ್ಷ ಪ್ರತಿ ಸೇಲ್​ ಆಗೋಯ್ತು. ನಾನು ಪುಸ್ತಕದಲ್ಲಿ ಎಲ್ಲವನ್ನೂ ವಿವರವಾಗಿ ಬರೆದಿದ್ದೇನೆ. ಎರಡು ಗ್ರಾಂ ತುಪ್ಪ ತಿಂದಿದ್ದಕ್ಕೆ ಎರಡು ದಿನ ಮನೆಯಲ್ಲಿ ಮನಸ್ತಾಪ ಉಂಟಾಯಿತು ಎನ್ನುವುದನ್ನು ಉಲ್ಲೇಖ ಮಾಡಿದ್ದೇನೆ ಎಂದರು. ಇದನ್ನು ಕೇಳಿ ಮನೆಯವರೆಲ್ಲರೂ ನಕ್ಕಿದ್ದಾರೆ. ರಘು ಸೇರಿದಂತೆ ಅನೇಕರಿಗೆ ತುಪ್ಪ ಖಾಲಿ ಮಾಡಿದ್ದು ಪ್ರಶಾಂತ್​ ಅವರೇ ಎನ್ನುವ ಅನುಮಾನ ಈಗಲೂ ಇದೆ.

ಇದನ್ನೂ ಓದಿ: ಕುದುರೆ ಅಂದ್ರೆ ಅಶ್ವ, ಕ್ಯಾಪ್ಟನ್​ ಅಂದ್ರೆ ವಿಶ್ವ; ಕಳಪೆ ಎಂದವರಿಗೆ ಕ್ಯಾಪ್ಟನ್​ ಆಗುವ ಮೂಲಕ ಕೊಟ್ರು ಉತ್ತರ