AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘24 ಸಾಂಗ್ಸ್ ರೆಡಿ ಇದೆ, ಆದರೆ..’; ‘ಪ್ರೇಮ ಲೋಕ 2’ ವಿಳಂಬಕ್ಕೆ ಕಾರಣ ತಿಳಿಸಿದ ರವಿಚಂದ್ರನ್

ರವಿಚಂದ್ರನ್ ಅವರ ಬಹುನಿರೀಕ್ಷಿತ 'ಪ್ರೇಮಲೋಕ 2' ಚಿತ್ರದ ಶೂಟಿಂಗ್ ವಿಳಂಬಕ್ಕೆ ಅಸಲಿ ಕಾರಣ ಬಹಿರಂಗವಾಗಿದೆ. 24 ಹಾಡುಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಜನಸಂದಣಿಯ ನಿಯಂತ್ರಣ ಮತ್ತು ಸೂಕ್ತ ಸ್ಥಳ ಸಿಗದಿರುವುದು ಮುಖ್ಯ ಕಾರಣ. ರಸ್ತೆಗಳಲ್ಲಿ ಚಿತ್ರೀಕರಣ ಕಷ್ಟ ಎಂದಿರುವ ಕ್ರೇಜಿ ಸ್ಟಾರ್, ಒಂದು ಊರನ್ನೇ ಕಟ್ಟುವ ಬಗ್ಗೆ ಸುಳಿವು ನೀಡಿದ್ದಾರೆ.

‘24 ಸಾಂಗ್ಸ್ ರೆಡಿ ಇದೆ, ಆದರೆ..’; ‘ಪ್ರೇಮ ಲೋಕ 2’ ವಿಳಂಬಕ್ಕೆ ಕಾರಣ ತಿಳಿಸಿದ ರವಿಚಂದ್ರನ್
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on: Oct 01, 2025 | 12:04 PM

Share

1987ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ‘ಪ್ರೇಮಲೋಕ’ ಚಿತ್ರಕ್ಕೆ ಸೀಕ್ವೆಲ್ (Premaloka 2) ಸಿದ್ಧವಾಗುತ್ತಿದೆ ಎಂದು ರವಿಚಂದ್ರನ್ ಹೇಳಿದ್ದರು. ಆದರೆ, ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಳೆದ ವರ್ಷ ಮೇ ತಿಂಗಳಲ್ಲೇ ಸಿನಿಮಾದ ಶೂಟ್ ಆರಂಭ ಆಗಬೇಕಿತ್ತು. ಆದರೆ, ರವಿಚಂದ್ರನ್ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಈಗ ಸಿನಿಮಾ ವಿಳಂಬಕ್ಕೆ ಅವರು ಕಾರಣ ವಿವರಿಸಿದ್ದಾರೆ.

‘ಪ್ರೇಮಲೋಕ’ ಚಿತ್ರದಲ್ಲಿ ಬರೋಬ್ಬರಿ 11 ಹಾಡುಗಳು ಇದ್ದವು. ಸಾಂಗ್ ಬಗ್ಗೆ ತಿಳಿದ ಬಳಿಕ ಅನೇಕರು ನಿರ್ಮಾಣದಿಂದ ಹಿಂದೆ ಸರಿದಿದ್ದರು. ಆ ಬಳಿಕ ರವಿಚಂದ್ರನ್ ಅವರೇ ಈ ಚಿತ್ರ ನಿರ್ಮಾಣ ಮಾಡಿ ಯಾರೂ ಊಹಿಸದ ರೀತಿಯಲ್ಲಿ ಗೆಲುವು ಕಂಡರು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಬರೋಬ್ಬರಿ 24 ಹಾಡುಗಳು ಇರಲಿವೆ ಎಂದು ಈ ಮೊದಲೇ ತಿಳಿಸಿದ್ದರು. ಈಗ ಸಿನಿಮಾ ಶೂಟಿಂಗ್ ವಿಳಂಬಕ್ಕೆ ಕಾರಣವನ್ನು ಅವರು ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
Image
ಅಡುಗೆ ಮಾಡುತ್ತಾ ರಿಷಬ್, ಮೇಘನಾ, ಸುದೀಪ್ ಹರಟೆ; ಅಪರೂಪದ ವಿಡಿಯೋ ಇಲ್ಲಿದೆ
Image
ಸ್ತನ ಕ್ಯಾನ್ಸರ್​ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ
Image
‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಜಾನ್ವಿ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, ‘ಹಾಡು ಸಿದ್ಧವಾಗಿದೆ, ಲೊಕೇಶನ್ ಸಿದ್ಧವಾಗುತ್ತಿಲ್ಲ. ಸಿನಿಮಾದ ಎಲ್ಲಾ 24 ಹಾಡುಗಳು ರೆಡಿ ಇವೆ. ಇದು ಜನರ ಮಧ್ಯೆ ನಡೆಯುವ ಕಥೆ. ಶೂಟಿಂಗ್​ಗೆ ಜನರು ಕೋ ಆಪರೇಟ್ ಮಾಡಬೇಕು. ರಸ್ತೆಗಳ ಮಧ್ಯೆ ನಡೆಯುವ ಕಥೆ ಆದ್ದರಿಂದ ಈ ಟ್ರಾಫಿಕ್​ನಲ್ಲಿ ಸಿನಿಮಾ ಶೂಟ್ ಮಾಡೋದು ಕಷ್ಟ. ನಾವು ಎರಡು-ಮೂರು ಬಾರಿ ಪ್ರಯತ್ನ ಮಾಡಿದೆವು. ಜನರ ಕಂಟ್ರೋಲ್ ಮಾಡೋಕೆ ಆಗಿಲ್ಲ’ ಎಂದಿದ್ದಾರೆ ರವಿಚಂದ್ರನ್.

View this post on Instagram

A post shared by KFI Updates (@kfi_updates)

‘ನಾವು ಅಂದುಕೊಂಡಂತೆ ಹಾಡುಗಳ ಚಿತ್ರೀಕರಣ ಮಾಡಲಾಗುತ್ತಿಲ್ಲ. ಒಂದು ಊರನ್ನೇ ಕಟ್ಟಬೇಕಾಗಿ ಬರಹುದು. ಅದಕ್ಕೊಂದು ಜಾಗವನ್ನು ನಾವೇ ಸೃಷ್ಟಿ ಮಾಡಬೇಕಿದೆ. ಹೀಗಾಗಿ, ನಾವು ಅಂದುಕೊಂಡದ್ದಕ್ಕಿಂತ ವಿಳಂಬ ಆಗುತ್ತಿದೆ’ ಎಂದರು ಕ್ರೇಜಿ ಸ್ಟಾರ್.

ಇದನ್ನೂ ಓದಿ: ‘ಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫೈನಲ್? ಯಾರಿಗೆ ಸಿಕ್ತು ಗೋಲ್ಡನ್ ಚಾನ್ಸ್?

ಸದ್ಯ ರವಿಚಂದ್ರನ್ ಅವರು ‘ಐ ಆ್ಯಮ್ ಗಾಡ್ ದ ಕ್ರೇಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ‘ಇದು ಪ್ರಯೋಗಾತ್ಮಕ ಸಿನಿಮಾ ಆಗಲಿದೆ. ಎದೆ ತಟ್ಟಿಕೊಂಡು ಹೇಳ್ತಿನಿ, 2026 ನಂದೇ ಆಗಿರುತ್ತದೆ’ ಎಂದು ರವಿಚಂದ್ರನ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ