ಕೊಟೇಶನ್ ಗ್ಯಾಂಗ್: ‘ದಂಡುಪಾಳ್ಯ’ ಬ್ಯಾಚ್ ಆಗಿ ಬದಲಾದ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ

ಸನ್ನಿ ಲಿಯೋನ್ ಹಾಗೂ ಪ್ರಿಯಾಮಣಿ ‘ಕೊಟೇಶನ್ ಗ್ಯಾಂಗ್’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಡಿಫರೆಂಟ್ ಕಾನ್ಸೆಪ್ಟ್​ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಮೂಲಕ ಪ್ರೇಕ್ಷಕರ ಬೆವರಿಳಿಸಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಟ್ರೇಲರ್ ಗಮನ ಸೆಳೆದಿದೆ.

ಕೊಟೇಶನ್ ಗ್ಯಾಂಗ್: ‘ದಂಡುಪಾಳ್ಯ’ ಬ್ಯಾಚ್ ಆಗಿ ಬದಲಾದ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ
ಕೊಟೇಶನ್ ಗ್ಯಾಂಗ್: ‘ದಂಡುಪಾಳ್ಯ’ ಬ್ಯಾಚ್ ಆಗಿ ಬದಲಾದ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ
Edited By:

Updated on: Jun 28, 2024 | 10:21 AM

ಟಾಲಿವುಡ್ ಸ್ಟಾರ್ ಹೀರೋಯಿನ್​ಗಳು ಈಗ ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಅದರಲ್ಲೂ ನಟನೆಗೆ ಹೆಚ್ಚು ಆದ್ಯತೆ ಇರೋ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಮೊದಲು ಕೇಳಿಬರುತ್ತಿರುವ ಹೆಸರು ಪ್ರಿಯಾಮಣಿ. ಮದುವೆಯ ನಂತರ ಸಿನಿಮಾಗಳಿಂದ ದೂರ ಉಳಿದಿದ್ದ ಈ ನಾಯಕಿ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವುದರ ಜೊತೆಗೆ, ಅವರು ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಲು ಹೆಸರುವಾಸಿಯಾಗಿದ್ದಾರೆ. ಈ ಬಾರಿ ಸನ್ನಿ ಲಿಯೋನ್ ಕೂಡ ಪ್ರಿಯಾಮಣಿಗೆ ಜೋಡಿಯಾಗಿದ್ದಾರೆ.

ಇತ್ತೀಚೆಗಷ್ಟೇ ‘ಭಾಮಕಲಾಪಂ’ ಚಿತ್ರದಿಂದ ನಟಿಸಿದ್ದಾರೆ ಪ್ರಿಯಾಮಣಿ. ಇದೀಗ ಮತ್ತೊಂದು ಸಿನಿಮಾದ ಮೂಲಕ ಮನರಂಜನೆ ನೀಡಲು ಸಿದ್ಧವಾಗಿದ್ದಾರೆ. ಸನ್ನಿ ಲಿಯೋನ್ ಹಾಗೂ ಪ್ರಿಯಾಮಣಿ ‘ಕೊಟೇಶನ್ ಗ್ಯಾಂಗ್’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಡಿಫರೆಂಟ್ ಕಾನ್ಸೆಪ್ಟ್​ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಮೂಲಕ ಪ್ರೇಕ್ಷಕರ ಬೆವರಿಳಿಸಲು ರೆಡಿಯಾಗಿದ್ದಾರೆ. ಇದುವರೆಗೂ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್‌ಗಳಿರಲಿಲ್ಲ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಟ್ರೇಲರ್ ಗಮನ ಸೆಳೆದಿದೆ.
YouTube video player

ಟ್ರೇಲರ್​​ನಲ್ಲಿ ಜಾಕಿ ಶ್ರಾಫ್​, ಪ್ರಿಯಾಮಣಿ, ಸನ್ನಿ ಲಿಯೋನ್, ಸಾರಾ ಅರ್ಜುನ್ ಮುಂತಾದ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಮಣಿ ಮತ್ತು ಸನ್ನಿ ಲಿಯೋನ್ ಅವರ ಲುಕ್ ನೋಡಿದ ಮೇಲೆ ಈ ಸಿನಿಮಾದ ನಿರೀಕ್ಷೆ ಹೆಚ್ಚಿದೆ. ಸನ್ನಿ ಲಿಯೋನ್ ಹಾಗೂ ಪ್ರಿಯಾಮಣಿ ಪಕ್ಕಾ ಹಳ್ಳಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇಡೀ ಸಿನಿಮಾ ಗ್ಯಾಂಗ್ ವಾರ್ ‘ದಂಡುಪಾಳ್ಯಂ’ ಸಿನಿಮಾನ ನೆನಪಿಸುತ್ತದೆ. ಸುಫಾರಿ ಹತ್ಯೆ ಮಾಡುವ ತಂಡದಲ್ಲಿ ಸನ್ನಿ ಲಿಯೋನ್ ಮತ್ತು ಪ್ರಿಯಾಮಣಿ ಕೂಡ ಇದ್ದಾರೆ. ಹಣಕ್ಕಾಗಿ ಜನರನ್ನು ಕೊಲ್ಲುತ್ತಾರೆ. ದೊಡ್ಡ ದರೋಡೆಕೋರರ ಜೀವನವು ಅನೇಕ ತಿರುವುಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಪ್ರಿಯಾಮಣಿ ಮೊದಲ ಸಂಭಾವನೆ 500 ರೂಪಾಯಿ; ಈಗ ಪಡೆಯೋ ಹಣ ಎಷ್ಟು?

ಪ್ರಿಯಾಮಣಿ ಮತ್ತು ಸನ್ನಿ ಲಿಯೋನ್ ಅದ್ಭುತವಾಗಿ ನಟಿಸಿದ್ದಾರೆ. ಹಲವು ವರ್ಷಗಳಿಂದ ಬೆಳ್ಳಿತೆರೆಯಲ್ಲಿ ಗ್ಲಾಮರಸ್ ಸುಂದರಿಯರಾಗಿ ಕಾಣಿಸಿಕೊಂಡಿರುವ ಈ ಇಬ್ಬರು ತಮ್ಮ ಭಯಂಕರ ನಟನೆಯಿಂದ ಪ್ರೇಕ್ಷಕರಿಗೆ ನಡುಕ ಹುಟ್ಟಿಸಲು ರೆಡಿಯಾಗಿದ್ದಾರೆ. ಮುಂದಿನ ತಿಂಗಳು ಕನ್ನಡ, ಹಿಂದಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us