‘ನನ್ನ ಮಕ್ಕಳು ಐಸಿಸ್ ಸೇರುತ್ತಾರೆ ಎಂದರು’; ಪ್ರಿಯಾಮಣಿ ಭಾವುಕ ನುಡಿ

Priyamani Birthday: ಪ್ರಿಯಾಮಣಿ ಅವರು ತಮ್ಮ ವಿವಾಹ ಮತ್ತು ಲವ್ ಜಿಹಾದ್ ಆರೋಪಗಳ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಅವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ಹರಿದು ಬಂದ ದ್ವೇಷದ ಬಗ್ಗೆ ಅವರು ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ತಮ್ಮ ಮಕ್ಕಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆಯೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ನನ್ನ ಮಕ್ಕಳು ಐಸಿಸ್ ಸೇರುತ್ತಾರೆ ಎಂದರು’; ಪ್ರಿಯಾಮಣಿ ಭಾವುಕ ನುಡಿ
ಪ್ರಿಯಾಮಣಿ
Edited By:

Updated on: Jun 04, 2025 | 7:47 AM

ನಟಿ ಪ್ರಿಯಾಮಣಿ (Priyamani) ಅವರಿಗೆ ಇಂದು (ಜೂನ್ 4) ಜನ್ಮದಿನ. ಈಗ ಅವರಿಗೆ 41ನೇ ವರ್ಷದ ಜನ್ಮದಿನ. ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭಾಶಯವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸುತ್ತಿದ್ದಾರೆ. ಪ್ರಿಯಾಮಣಿ ಅವರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಶ್ರಮ ಹಾಕಿದ್ದಾರೆ. ಈ ಮಧ್ಯೆ ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಯ ಕೇಂದ್ರ ಬಿಂದು ಆಯಿತು. ಏಕೆಂದರೆ ಅವರು ವಿವಾಹ ಆಗಿದ್ದು ಮುಸ್ಲಿಂ ವ್ಯಕ್ತಿಯನ್ನು. ಈ ವಿಚಾರಕ್ಕೆ ಅವರು ಈಗಲೂ ಟೀಕೆ ಎದುರಿಸುತ್ತಾ ಇದ್ದಾರೆ.

2017ರಲ್ಲಿ ಪ್ರಿಯಾಮಣಿ ಅವರು ಮುಸ್ತಫಾ ರಾಜ್ ಅವರನ್ನು ವಿವಾಹ ಆದರು. ಈ ವಿವಾಹ ನಡೆದ ಬಳಿಕ ಅನೇಕರು ಅವರ ಬಗ್ಗೆ ಟೀಕೆ ಮಾಡಿದರು. ಅವರು ಲವ್ ಜಿಹಾದ್​ಗೆ ಒಳಗಾದರು ಎಂದು ಅನೇಕರು ಹೇಳಿದ್ದರು. ಪ್ರಿಯಾಮಣಿಗೆ ಇದು ಸಾಕಷ್ಟು ಬೇಸರ ಮೂಡಿಸಿತು ಮತ್ತು ಇದನ್ನು ಅವರು ಒಪ್ಪಿಲ್ಲ. ಪರಸ್ಪರ ಇಷ್ಟಪಟ್ಟೇ ಪ್ರಿಯಾಮಣಿ ಅವರು ಮುಸ್ತಫಾ ರಾಜ್ ಅವರನ್ನು ಮದುವೆ ಆಗಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.

‘ನಾನು ನನ್ನ ನಿಶ್ಚಿತಾರ್ಥದ ಬಗ್ಗೆ ಹೇಳಿಕೊಂಡೆ. ನನ್ನ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಜನರೊಂದಿಗೆ ಈ ಸಂತೋಷದ ಕ್ಷಣವನ್ನು ಹಂಚಿಕೊಳ್ಳಲು ಬಯಸಿದ್ದೆ. ಆದರೆ, ಅನಗತ್ಯ ದ್ವೇಷ ಹರಿದು ಬರಲು ಪ್ರಾರಂಭಿಸಿತು. ಲವ್ ಜಿಹಾದ್ ಆರೋಪಗಳು ಬಂದವು. ನಾಳೆ ನಮಗೆ ಮಕ್ಕಳಾದಾಗ, ಅವರು ಐಸಿಸ್ ಸೇರುತ್ತಾರೆ ಎಂದು ಹೇಳುವ ಹಂತಕ್ಕೂ ಹೋದರು’ ಎಂದು ಪ್ರಿಯಾ ಮಣಿ ಬೇಸರ ಹೊರಹಾಕಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್​ನ ಇಮಿಟೇಟ್ ಮಾಡಿದ್ದ ಪ್ರಿಯಾಮಣಿ

‘ನಾನು ಮಾಧ್ಯಮ ಮತ್ತು ಸಿನಿಮಾ ಉದ್ಯಮಕ್ಕೆ  ಸೇರಿದವನಾಗಿರುವುದರಿಂದ ನಮ್ಮ ಬಗ್ಗೆ ಜನರು ಏನು ಬೇಕಾದರೂ ಹೇಳಬಹುದು. ಆದರೆ ವ್ಯಕ್ತಿಯ ವೈಯಕ್ತಿಕ ವಿಚಾರಗಳ ಮೇಲೆ ನೀವು ಏಕೆ ದಾಳಿ ಮಾಡಲು ಬಯಸುತ್ತೀರಿ? ಆ ವ್ಯಕ್ತಿ ಯಾರೆಂದು ನಿಮಗೆ ತಿಳಿದಿಲ್ಲ. ನನಗೆ ಬಹಳಷ್ಟು ಸಂದೇಶಗಳು ಬರುತ್ತಿದ್ದರಿಂದ 2-3 ದಿನಗಳವರೆಗೆ ಅದು ನನ್ನ ಮೇಲೆ ಪರಿಣಾಮ ಬೀರಿತು. ಈಗಲೂ ಸಹ, ನಾನು ಮುಸ್ತಫಾ ಜೊತೆ ಏನನ್ನಾದರೂ ಪೋಸ್ಟ್ ಮಾಡಿದರೆ, ಹತ್ತರಲ್ಲಿ ಒಂಬತ್ತು ಕಾಮೆಂಟ್‌ಗಳು ನಮ್ಮ ಧರ್ಮ ಅಥವಾ ಜಾತಿಯ ಬಗ್ಗೆ ಇರುತ್ತವೆ’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:46 am, Wed, 4 June 25