AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತರೂ ನಗೋದು ಮರೆಯದ ಪ್ರೀತಿ ಜಿಂಟಾ; ಉಳಿದ ಒಡತಿಯರಂತಲ್ಲ ಇವರು

ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್​ನಲ್ಲಿ ಸೋತರೂ, ಅವರ ಸಕಾರಾತ್ಮಕ ಮನೋಭಾವ ಎಲ್ಲರ ಗಮನ ಸೆಳೆದಿದೆ. ಕಪ್ ಗೆಲ್ಲದಿದ್ದರೂ, ಸೋಲನ್ನು ಸ್ವೀಕರಿಸುವ ಅವರ ರೀತಿ ಹಾಗೂ ಆಟಗಾರರನ್ನು ಹುರಿದುಂಬಿಸಿದ ರೀತಿ ಶ್ಲಾಘನೀಯ. ಇದನ್ನು ಹಲವು ಜನರು ಕಾವ್ಯಾ ಮಾರನ್ ಅವರೊಂದಿಗೆ ಹೋಲಿಸಿ ಇಬ್ಬರೂ ಎಷ್ಟು ಭಿನ್ನ ಎಂದು ಹೇಳಿದ್ದಾರೆ.

ಸೋತರೂ ನಗೋದು ಮರೆಯದ ಪ್ರೀತಿ ಜಿಂಟಾ; ಉಳಿದ ಒಡತಿಯರಂತಲ್ಲ ಇವರು
ಪ್ರೀತಿ
ರಾಜೇಶ್ ದುಗ್ಗುಮನೆ
|

Updated on:Jun 04, 2025 | 8:52 AM

Share

ನಟಿ ಪ್ರೀತಿ ಜಿಂಟಾ (Preity Zinta) ಅವರು ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಹೊಂದಿದ್ದಾರೆ. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅವರ ತಂಡ ಕಪ್ ಗೆದ್ದಿಲ್ಲ. ಆರ್​ಸಿಬಿ ಕೂಡ ಕಪ್ ಗೆದ್ದಿರಲಿಲ್ಲ. ಆದರೆ, ಆರ್​ಸಿಬಿ ಕಾಯುವಿಕೆ ಪೂರ್ಣಗೊಂಡಿದ್ದು, ಕಪ್ ಎತ್ತಾಗಿದೆ. ಆದರೆ, ಪ್ರೀತಿ ಜಿಂಟಾ ಒಡೆತನದ ಪಂಜಾಬ್ ತಂಡ ಮತ್ತೆ ಕಾಯಬೇಕಿದೆ. ರೋಚಕ ಪಂದ್ಯದಲ್ಲಿ ಸೋತ ಬಳಿಕ ಪ್ರೀತಿ ಜಿಂಟಾ ಬೇಸರದಲ್ಲಿ ಇದ್ದರು. ಆದರೆ, ಅವರು ನಗೋದು ಮರೆತಿಲ್ಲ. ಇದು ಅವರ ನಿಜವಾದ ಕ್ರೀಡಾಸ್ಫೂರ್ತಿಯನ್ನು ತೋರಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯಾ ಮಾರನ್ ಅವರ ವಿಷಯವನ್ನು ಎಳೆದು ತಂದಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್​​ಗೆ ಇಳಿದ ಆರ್​ಸಿಬಿ ತಂಡ ಸಾಕಷ್ಟು ಕಷ್ಟದಲ್ಲಿ ಬ್ಯಾಟ್ ಬೀಸಿತು. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನತ್ತಿದ ಪಂಜಾಬ್ ತಂಡ ಉತ್ತಮ ಆರಂಭವನ್ನೇನೋ ಕಂಡಿತು. ಆದರೆ, ಸಾಲು ಸಾಲು ವಿಕೆಟ್​ಗಳು ಬಿದ್ದವು. ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಕೇವಲ 1 ರನ್​ಗೆ ಔಟ್ ಆದರು. ಅಂತಿಮವಾಗಿ ಅವರು 7 ವಿಕೆಟ್ ನಷ್ಟಕ್ಕೆ 184 ರನ್ ಬಾರಿಸಲಷ್ಟೇ ಶಕ್ಯವಾದರು. ಈ ಮೂಲಕ ಆರ್​ಸಿಬಿ ಕಪ್ ಎತ್ತಿದೆ.

ಇದನ್ನೂ ಓದಿ
Image
ದಾಖಲೆ ಭರ್ಜರಿ ದಾಖಲೆ... ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
Image
ಖುಷಿ ತಡೆಯಲಾರದೆ ತಣ್ಣೀರು ಸುರಿದು ನಮಸ್ಕಾರ ಹಾಕಿದ ಅಲ್ಲು ಅರ್ಜುನ್ ಮಗ
Image
RCB ಮ್ಯಾಚ್ ನೋಡುತ್ತಲೇ ಮುಗಿದಯೋಯ್ತು ವೈಷ್ಣವಿ ‘ಸಂಗೀತ್’ ಕಾರ್ಯಕ್ರಮ
Image
ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ; ಎಚ್ಚರಿಕೆಯ ಸಂದೇಶ ರವಾನೆ
View this post on Instagram

A post shared by memeclashh (@memeclashh)

ಕಪ್ ಎತ್ತಬೇಕು ಎಂಬುದು ಆರ್​ಸಿಬಿ ತಂಡದ ದೊಡ್ಡ ಕನಸಾಗಿತ್ತು. ಆ ಕನಸು ಈಗ ಈಡೇರಿದೆ. ಅತ್ತ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಅವರು ಸಾಕಷ್ಟು ಬೇಸರದಲ್ಲಿ ಇದ್ದರು. ಶ್ರೇಯಸ್ ಔಟ್ ಆದ ಬಳಿಕ ಅವರಿಗೆ ಶಾಕ್ ಆಗಿತ್ತು. ಪಂದ್ಯ ಸೋತ ಬಳಿಕ ಗ್ರೌಂಡ್​ನಲ್ಲಿ ಓಡಾಡುತ್ತಿದ್ದ ಪ್ರೀತಿ ಜಿಂಟಾ ಅವರು ನಗೋದನ್ನು ಮರೆಯಲಿಲ್ಲ. ಎಲ್ಲಾ ಆಟಗಾರರನ್ನು ಅವರು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದರು.

ಇದನ್ನೂ ಓದಿ: ಖುಷಿ ತಡೆಯಲಾರದೆ ತಣ್ಣೀರು ಸುರಿದುಕೊಂಡ ನಮಸ್ಕಾರ ಹಾಕಿದ ಅಲ್ಲು ಅರ್ಜುನ್ ಮಗ ಅಯಾನ್

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡೆತನವನ್ನು ಕಾವ್ಯಾ ಮಾರನ್ ಹೊಂದಿದ್ದಾರೆ. ಅವರು ಪ್ರತಿ ಬಾರಿ ಪಂದ್ಯ ಸೋತಾಗಲೂ ಸಾಕಷ್ಟು ಅಪ್ಸೆಟ್ ಆಗುತ್ತಾರೆ. ಆದರೆ, ಪ್ರೀತಿ ಆ ರೀತಿ ಅಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:50 am, Wed, 4 June 25

ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ