750 ಎಂಎಲ್​ ವೈನ್​ಗೆ 1.31 ಲಕ್ಷ ರೂಪಾಯಿ; ಪ್ರಿಯಾಂಕಾಗೆ ಪತಿಯಿಂದ ಸಿಕ್ಕ ಈ ವಿಶೇಷ ಗಿಫ್ಟ್​ ಏಕಿಷ್ಟು ದುಬಾರಿ?

| Updated By: ರಾಜೇಶ್ ದುಗ್ಗುಮನೆ

Updated on: Jul 19, 2021 | 7:40 PM

ಪ್ರಿಯಾಂಕಾ ಚೋಪ್ರಾ ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರ ಕುಟುಂಬದವರು, ಗೆಳೆಯರಿಂದ ಸಾಕಷ್ಟು ಗಿಫ್ಟ್​ ಸಿಕ್ಕಿದೆ.

750 ಎಂಎಲ್​ ವೈನ್​ಗೆ 1.31 ಲಕ್ಷ ರೂಪಾಯಿ; ಪ್ರಿಯಾಂಕಾಗೆ ಪತಿಯಿಂದ ಸಿಕ್ಕ ಈ ವಿಶೇಷ ಗಿಫ್ಟ್​ ಏಕಿಷ್ಟು ದುಬಾರಿ?
750ಎಂಎಲ್​ ವೈನ್​ಗೆ 1.31 ಲಕ್ಷ ರೂಪಾಯಿ; ಪ್ರಿಯಾಂಕಾಗೆ ಪತಿಯಿಂದ ಸಿಕ್ಕ ಈ ವಿಶೇಷ ಗಿಫ್ಟ್​ ಏಕಿಷ್ಟು ದುಬಾರಿ?
Follow us on

ಸೆಲೆಬ್ರಿಟಿಗಳು ಬಳಕೆ ಮಾಡುವ ವಸ್ತುಗಳ ಬೆಲೆ ತುಂಬಾನೇ ದುಬಾರಿಯದ್ದಾಗಿರುತ್ತದೆ ಎನ್ನುವುದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ಈ ಮೊದಲು ಅನೇಕ ಬಾರಿ ಇದು ಸಾಬೀತಾಗಿದೆ. ಅವರು ಹಾಕುವುಡ ಉಡುಗೆ, ವಾಚ್​, ಬ್ಯಾಗ್​ ಬೆಲೆ ಕೇಳಿ ಅನೇಕರು ಅಚ್ಚರಿಪಟ್ಟಿದ್ದಿದೆ. ಇದಕ್ಕೆ ಈಗ ನಟಿ ಪ್ರಿಯಾಂಕಾ ಚೋಪ್ರಾ ಹೊಸ ಸೇರ್ಪಡೆ. ನಿಕ್​ ಜೋನಸ್​ ಗಿಫ್ಟ್​ ಮಾಡಿರೋ ವೈನ್​ ಬೆಲೆ ಕೇಳಿ ಅಭಿಮಾನಿಗಳು ದಂಗಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನದಂದು ಅವರ ಕುಟುಂಬದವರು, ಗೆಳೆಯರಿಂದ ಸಾಕಷ್ಟು ಗಿಫ್ಟ್​ ಸಿಕ್ಕಿದೆ. ಇದರಲ್ಲಿ ಅವರ ಪತಿ ನೀಡಿದ ವೈನ್​ ಬಾಟಲಿ ವಿಶೇಷವಾಗಿತ್ತು. ಪ್ರಿಯಾಂಕಾ ಸದ್ಯ ಲಂಡ್​ನಲ್ಲಿದ್ದು, ನಿಕ್​ ಅಮೆರಿಕದಲ್ಲಿದ್ದಾರೆ. ಆದಾಗ್ಯೂ ಪತ್ನಿಗೆ ಗಿಫ್ಟ್ ಕಳಿಸೋಕೆ ಮರೆತಿಲ್ಲ ನಿಕ್​.

ನಿಕ್​ 1982 ಶಟೊ ಮೂಟೌನ್​ ರೋಥ್‌ಚೈಲ್ಡ್ ವೈನ್​ ಬಾಟಲಿಯನ್ನು ಪ್ರಿಯಾಂಕಾಗೆ ನೀಡಿದ್ದಾರೆ. ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಹಾಕಿ ಸಂಭ್ರಮಿಸಿದ್ದಾರೆ. ಒಂದು ಗ್ಲಾಸ್​ಗೆ ವೈನ್​ ಹಾಕಲಾಗಿದೆ. ಟೇಬಲ್​ಅನ್ನು ಹೂವು ಹಾಗೂ ಮೇಣದ ಬತ್ತಿ ಮೂಲಕ ಅಲಂಕರಿಸಲಾಗಿದೆ.

1982 ಶಟೊ ಮೂಟೌನ್​ ರೋಥ್‌ಚೈಲ್ಡ್ ವೈನ್​ ತುಂಬಾನೇ ದುಬಾರಿ ಹಾಗೂ ಅಪರೂಪದ ವೈನ್​. ಫ್ರಾನ್ಸ್​ನಲ್ಲಿ ಇದು ಸಿದ್ಧಗೊಳ್ಳುತ್ತದೆ. 750 ಎಂಎಲ್​ ಬಾಟಲಿಯ ಈ ವೈನ್​ಗೆ 1,31,375 ರೂಪಾಯಿ. ಇದನ್ನು ಆಯ್ದ ಹಣ್ಣುಗಳಿಂದ ಮಾತ್ರ ಸಿದ್ಧಪಡಿಸಲಾಗುತ್ತದೆ. ಇನ್ನು, ಇದನ್ನು ತಯಾರಿಸುವ ವಿಧಾನ ಕೂಡ ಬೇರೆ. ಹೀಗಾಗಿ, ಈ ವೈನ್​ ಬೆಲೆ ಇಷ್ಟೊಂದು ದುಬಾರಿ.

ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್​ನಲ್ಲಿ ಗುರುತಿಸಿಕೊಂಡು ನಂತರ ಹಾಲಿವುಡ್​ಗೆ ಪರಿಚಯಗೊಂಡರು. ಅಮೆರಿಕದ ಪಾಪ್​ ಸಿಂಗರ್​ ನಿಕ್​ ಜೋನಸ್​ ಅವರನ್ನು ವರಿಸಿದ ನಂತರದಲ್ಲಿ ಪ್ರಿಯಾಂಕಾ ಅಮೆರಿಕದಲ್ಲಿಯೇ ಸೆಟಲ್​ ಆಗಿದ್ದಾರೆ. ಇತ್ತೀಚೆಗೆ ಅವರು ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್​ನಲ್ಲಿ ರೆಸ್ಟೋರೆಂಟ್​ ಒಂದನ್ನು ಆರಂಭಿಸಿದ್ದಾರೆ. ಇದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು.

ಅಮೆರಿಕದ ಗಾಯಕ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ. ಭಾರತಕ್ಕಿಂತಲೂ ಅವರು ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ. ಬಾಲಿವುಡ್​ಗಿಂತಲೂ ಹೆಚ್ಚಾಗಿ ಹಾಲಿವುಡ್​ ಮಂದಿಯ ಜೊತೆ ಅವರ ಒಡನಾಟ ಬೆಳೆದಿದೆ.

ಇದನ್ನೂ ಓದಿ: ಪ್ರಿಯಾಂಕಾ ತಿಮ್ಮೇಶ್​ ಎಲಿಮಿನೇಟ್ ಆಗೋಕೆ ಕಾರಣವಾಗಿದ್ದು ಈ ಮೂರು ಸ್ಪರ್ಧಿಗಳು

‘ಪ್ರಿಯಾಂಕಾ ಚೋಪ್ರಾ ದಾಂಪತ್ಯ ಜೀವನ ಹತ್ತು ವರ್ಷಗಳಲ್ಲಿ ಕೊನೆಯಾಗಲಿದೆ’; ಭವಿಷ್ಯ ನುಡಿದ ವಿವಾದಿತ ನಟ

Published On - 7:08 pm, Mon, 19 July 21