Neha Dhupia: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್ ಕಪಲ್; ನೇಹಾ ಧೂಪಿಯಾ- ಅಗಂದ್ ಬೇಡಿ ಹಂಚಿಕೊಂಡ್ರು ಸಿಹಿ ಸುದ್ದಿ
ನೇಹಾ ಧೂಪಿಯಾ- ಅಗಂದ್ ಬೇಡಿ : ಸ್ಟಾರ್ ಕಪಲ್ ಕುಟುಂಬ ಸಮೇತರಾಗಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನೇಹಾ ಧೂಪಿಯಾ, ಪತಿ ಅಗಂದ್ ಬೇಡಿ ಮತ್ತು ಮೊದಲ ಮಗಳು ಸೇರಿ ಮೂವರೂ ಕೂಡಾ ಕಪ್ಪು ಬಣ್ಣದ ಡ್ರೆಸ್ ತೊಟ್ಟು ನಿಂತಿರುವ ಫೋಟೋ ನೋಡಬಹುದು.
ಬಾಲಿವುಡ್ ಸ್ಟಾರ್ ಕಪಲ್ ನೇಹಾ ಧೂಪಿಯಾ ಮತ್ತು ಅಗಂದ್ ಬೇಡಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ತಮ್ಮ ಅಭಿಮಾನಿ ಬಳಗಕ್ಕೆ ತಿಳಿಸುವ ಸಲುವಾಗಿ ನೇಹಾ ಧೂಪಿಯಾ(Neha Dhupia) ಇನ್ಸ್ಟಾಗ್ರಾಂ(Instagram) ಅಧಿಕೃತ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ಟಾರ್ ಕಪಲ್ ಕುಟುಂಬ ಸಮೇತರಾಗಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನೇಹಾ ಧೂಪಿಯಾ, ಪತಿ ಅಗಂದ್ ಬೇಡಿ(Angad Bedi) ಮತ್ತು ಮೊದಲ ಮಗಳು ಮೆಹೆರ್ ಸೇರಿ ಮೂವರೂ ಕೂಡಾ ಕಪ್ಪು ಬಣ್ಣದ ಡ್ರೆಸ್ ತೊಟ್ಟು ನಿಂತಿರುವ ಫೋಟೋ ನೋಡಬಹುದು.
ಫೋಟೋದಲ್ಲಿ ಗಮನಿಸುವಂತೆ ಎಲ್ಲರ ಮುಖದಲ್ಲೂ ಸಂತೋಷವನ್ನು ಕಾಣಬಹುದು. ನೇಹಾ ಮತ್ತು ಅಗಂದ್ ಬೇಡಿ ಅವರ ಅಭಿಮಾನಿ ಬಳಗ, ಕುಟುಂಬ ಮತ್ತು ಸ್ನೇಹಿತರು ಕಾಮೆಂಟ್ ವಿಭಾಗದಲ್ಲಿ ಶುಭ ಹಾರೈಸಿದ್ದಾರೆ. ‘ಹೊಸ ಹೋಮ್ ಪ್ರೊಡಕ್ಷನ್ ಹತ್ತಿರದಲ್ಲಿದೆ’ ಎಂದು ಅಗಂದ್ ಬೇಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ಜತೆಗೆ ನೇಹಾ ಬೇಬಿ ಬಂಪ್ ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.
2018ರಲ್ಲಿ ನೇಹಾ ಮತ್ತು ಅಗಂದ್ ಬೇಡಿ ವಿವಾಹವಾದರು. ಕೆಲವು ತಿಂಗಳೊಳಗೆ ಮಗಳು (ಮೆಹೆರ್) ಜನಿಸಿದಳು. ಮದುವೆಗೆ ಮುಂಚೆಯೇ ನೇಹಾ ಗರ್ಭಿಣಿಯಾಗಿದ್ದರು ಎಂಬ ವಿಷಯವನ್ನು ಮದುವೆಯ ಬಳಿಕ ಅಗಂದ್ ಬೇಡಿ ಬಹಿರಂಗಪಡಿಸಿದರು. ಇದೀಗ ನೇಹಾ ಅವರಿಗೆ 40 ವರ್ಷ. ತಮ್ಮ 2ನೇ ಮಗುವಿನ ಜನನದ ವಿಷಯವನ್ನು ಬಹಿರಂಗಪಡಿಸಿದ್ದಾರೆ.
View this post on Instagram
View this post on Instagram
ಇದನ್ನೂ ಓದಿ:
ರಾಜ್ ಕೌಶಲ್ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ
ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!
Published On - 5:09 pm, Mon, 19 July 21