Billboard Music Awards 2021: ಬಿಲ್​ಬೋರ್ಡ್​ ಮ್ಯೂಸಿಕ್​ ಅವಾರ್ಡ್​ ಸಮಾರಂಭದಲ್ಲಿ ಗ್ಲಾಮರಸ್​ ಡ್ರೆಸ್​ ಧರಿಸಿ ಮಿಂಚಿದ ಪ್ರಿಯಾಂಕಾ ಚೋಪ್ರಾ

|

Updated on: May 24, 2021 | 1:13 PM

Priyanka Chopra - Nick Jonas: ಇಟಲಿಯ ಪ್ರತಿಷ್ಠಿತ ಫ್ಯಾಷನ್​ ಡಿಸೈನಿಂಗ್​ ಕಂಪನಿ ವಿನ್ಯಾಸಗೊಳಿಸಿದ ಕಾಸ್ಟ್ಯೂಮ್​ ಧರಿಸಿ ಪ್ರಿಯಾಂಕಾ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್​ ನೀಡಿದರು. ಥೈ ಹೈ ಸ್ಲಿಟ್​ ಗೌನ್​ನಲ್ಲಿ ಅವರು ಕಂಗೊಳಿಸಿದರು.

Billboard Music Awards 2021: ಬಿಲ್​ಬೋರ್ಡ್​ ಮ್ಯೂಸಿಕ್​ ಅವಾರ್ಡ್​ ಸಮಾರಂಭದಲ್ಲಿ ಗ್ಲಾಮರಸ್​ ಡ್ರೆಸ್​ ಧರಿಸಿ ಮಿಂಚಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ - ನಿಕ್ ಜೋನಸ್
Follow us on

ಅಮೆರಿಕದ ಗಾಯಕ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ಮಂದಿಗೆ ಹೆಚ್ಚು ಹತ್ತಿರ ಆಗಿದ್ದಾರೆ. ಬಾಲಿವುಡ್​ಗಿಂತಲೂ ಹೆಚ್ಚಾಗಿ ಅವರು ಹಾಲಿವುಡ್​ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿನ ಅನೇಕ ಸಮಾರಂಭಗಳಲ್ಲಿ ಅವರು ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷ ಆಸ್ಕರ್​ ನಾಮಿನೇಷನ್​ ಘೋಷಣೆ ಮಾಡಿದ್ದ ಅವರು, ಈಗ ಬಿಲ್​ಬೋರ್ಡ್​ ಮ್ಯೂಸಿಕ್​ ಅವಾರ್ಡ್​ ಸಮಾರಂಭದಲ್ಲಿ ಮಿಂಚಿದ್ದಾರೆ. ಅವರು ಧರಿಸಿದ್ದ ಕಾಸ್ಟ್ಯೂಮ್​ ಎಲ್ಲರ ಗಮನ ಸೆಳೆಯುತ್ತಿದೆ.

ಲಾಸ್​ ಏಂಜಲೀಸ್​ನ ಮೈಕ್ರೋಸಾಫ್ಟ್​ ಥಿಯೇಟರ್​ನಲ್ಲಿ ಭಾನುವಾರ (ಮೇ 23) ‘ಬಿಲ್​ಬೋರ್ಡ್ ಮ್ಯೂಸಿಕ್​​ ಅವಾರ್ಡ್ಸ್​ 2021’ ಕಾರ್ಯಕ್ರಮ ನೆರವೇರಿತು. ಪತಿ ನಿಕ್​ ಜೋನಸ್​ ಜೊತೆ ಬಂದು ರೆಡ್​ ಕಾರ್ಪೆಟ್​ನಲ್ಲಿ ಪ್ರಿಯಾಂಕಾ ಚೋಪ್ರಾ ಹೆಜ್ಜೆ ಹಾಕಿದರು. ಇಂಥ ಸಮಾರಂಭಗಳಲ್ಲಿ ಭಾಗವಹಿಸುವಾಗ ಫ್ಯಾಷನ್​ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಾರೆ. ಗ್ಲಾಮರಸ್​ ಆದಂತಹ ಕಾಸ್ಟ್ಯೂಮ್​ಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಎಲ್ಲರ ಕಣ್ಣು ಕುಕ್ಕುವಂತಹ ಗ್ಲಾಮರಸ್​ ಉಡುಗೆ ಧರಿಸಿ ಪ್ರಿಯಾಂಕಾ ಚೋಪ್ರಾ ಆಗಮಿಸಿದ್ದರು.

ಇಟಲಿಯ ಪ್ರತಿಷ್ಠಿತ ಫ್ಯಾಷನ್​ ಡಿಸೈನಿಂಗ್​ ಕಂಪನಿ ವಿನ್ಯಾಸಗೊಳಿಸಿದ ಕಾಸ್ಟ್ಯೂಮ್​ ಧರಿಸಿ ಪ್ರಿಯಾಂಕಾ ಚೋಪ್ರಾ ಮಾಧ್ಯಮಗಳ ಕ್ಯಾಮರಾಗಳಿಗೆ ಪೋಸ್​ ನೀಡಿದರು. ಥೈ ಹೈ ಸ್ಲಿಟ್​ ಗೌನ್​ನಲ್ಲಿ ಅವರು ಕಂಗೊಳಿಸಿದರು. ಅದಕ್ಕೊಪ್ಪುವ ಐಷಾರಾಮಿ ಆಭರಣಗಳನ್ನೂ ಪ್ರಿಯಾಂಕಾ ಧರಿಸಿದ್ದರು. ಈ ಸಂದರ್ಭದ ಫೋಟೋಗಳನ್ನು ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಅವರ ಫ್ಯಾಷನ್​ ಅಭಿರುಚಿಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಅಮೆರಿಕದಲ್ಲಿ ನೆಲೆಸಿದ್ದರೂ ಕೂಡ ಭಾರತದ ಬಗ್ಗೆ ಪ್ರಿಯಾಂಕಾ ಕಾಳಜಿ ಹೊಂದಿದ್ದಾರೆ. ಕೊರೊನಾ ಎರಡನೇ ಅಲೆಯ ಹಾವಳಿಗೆ ಭಾರತದಲ್ಲಿ ಲಕ್ಷಾಂತರ ಜನರ ಸಾವು ಸಂಭವಿಸುತ್ತಿರುವಾಗ ಅವರು ಸುಮ್ಮನೆ ಕೂರಲಿಲ್ಲ. ತಾಯ್ನಾಡಿಗೆ ವ್ಯಾಕ್ಸಿನ್​ ನೀಡುವಂತೆ ಅಮೆರಿಕದ ಅಧ್ಯಕ್ಷಕರಿಗೆ ‘ದೇಸಿ ಗರ್ಲ್​’ ಮನವಿ ಮಾಡಿದ್ದರು. ಅಲ್ಲದೇ, ದೇಣಿಗೆ ಸಂಗ್ರಹಕ್ಕೆ ಕರೆ ನೀಡಿದ್ದರು. ಆ ಮೂಲಕ ಕೊವಿಡ್​ ವಿರುದ್ಧದ ಭಾರತದ ಹೋರಾಟಕ್ಕೆ ಅವರು ಸಾಥ್​ ನೀಡಿದ್ದರು.

ಇದನ್ನೂ ಓದಿ:

ಪ್ರಿಯಾಂಕಾ ಚೋಪ್ರಾ ನನ್ನ ಅವಕಾಶ ಕಿತ್ತುಕೊಂಡರು; ಮೀರಾ ಚೋಪ್ರಾ ಗಂಭೀರ ಆರೋಪ

ಎಲ್ಲೇ ಇದ್ದರೂ ಭಾರತೀಯ ಸಂಸ್ಕೃತಿ ಮರೆಯದ ಪ್ರಿಯಾಂಕಾ ಚೋಪ್ರಾ! ಲಂಡನ್​ನಲ್ಲಿ ದೇಸಿ ಗರ್ಲ್​​ ಹೋಳಿ