ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಈ ನಟಿಯರಿಗಾದ ತೊಂದರೆ ಒಂದೆರಡಲ್ಲ

| Updated By: ರಾಜೇಶ್ ದುಗ್ಗುಮನೆ

Updated on: Sep 27, 2024 | 9:13 AM

ನಟಿ ಕಂಗನಾ ರಣಾವತ್ ಅವರ ಆರಂಭದ ದಿನಕ್ಕೂ ಈಗಿನ ಫೋಟೋಗೆ ಹೋಲಿಕೆ ಮಾಡಿದರೆ ಸಾಕಷ್ಟು ಭಿನ್ನತೆ ಇದೆ. ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಶರ್ಮಾ ಅವರು ತುಟಿಯ ಸರ್ಜರಿ ಮಾಡಿಸಿದ್ದಾರಂತೆ.

ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಈ ನಟಿಯರಿಗಾದ ತೊಂದರೆ ಒಂದೆರಡಲ್ಲ
ಪ್ರಿಯಾಂಕಾ
Follow us on

ಸುಂದರವಾಗಿ ಕಾಣಬೇಕು ಎಂದು ಅನೇಕ ಸೆಲೆಬ್ರಿಟಿಗಳು ಪ್ರಯತ್ನ ಮಾಡುತ್ತಾ ಇರುತ್ತಾರೆ. ಇದಕ್ಕಾಗಿ ನಾನಾ ರೀತಿಯ ಪ್ರಯತ್ನ ನಡೆಯುತ್ತದೆ. ಆದರೆ, ಎಲ್ಲವೂ ಯಶಸ್ಸು ಕಂಡು ಬಿಡುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಅನೇಕ ಸೆಲೆಬ್ರಿಟಿಗಳು ಮುಖ, ಮೂಗು ಹೀಗೆ ನಾನಾ ಶಸ್ತ್ರಚಿಕಿತ್ಸೆಗೆ ಒಳಗಾಗಿ ತೊಂದರೆ ಅನುಭವಿಸಿದ್ದು ಇದೆ. ಆ ಸಾಲಿನಲ್ಲಿ ಬಾಲಿವುಡ್​ ನಟಿಯರು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್​ನಲ್ಲಿ ಸೆಟಲ್ ಆಗಿದ್ದಾರೆ. ಅವರು ನೋಸ್ ಸರ್ಜರಿ ಮಾಡಿಸಿಕೊಂಡಿದ್ದರು. ಇದರಿಂದ ಅವರು ಮೂರು ಸಿನಿಮಾ  ಆಫರ್ ಕಳೆದುಕೊಳ್ಳಬೇಕಾಯಿತು.  ‘ನಾನು ಮೂಗಿನ ಸರ್ಜರಿ ಮಾಡಿಸಿದ್ದೆ. ಇದರಿಂದ ಸಮಸ್ಯೆ ಆಯಿತು’ ಎಂದು ಪ್ರಿಯಾಂಕಾ ಹೇಳಿದ್ದರು. ಅವರ ಜೊತೆ ಕೆಲಸ ಮಾಡಿದ ನಿರ್ದೇಶಕ ಅನಿಲ್ ಶರ್ಮಾ ಕೂಡ ಈ ಮಾತನ್ನು ಹೇಳಿದ್ದರು. ‘ನನ್ನ ಮುಖ ಸಂಪೂರ್ಣ ಬದಲಾಯಿತು. ಇದರಿಂದ ನಾನು ಖಿನ್ನತೆಗೆ ಒಳಗಾದೆ’ ಎಂದು ಪ್ರಿಯಾಂಕಾ ಹೇಳಿದ್ದರು.

ಕೊಯೆನಾ ಮಿತ್ರಾ

ಕೊಯಿನಾ ಮಿತ್ರಾ ಕೂಡ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದರು. ‘ಕಾಫಿ ವಿತ್ ಕರಣ್ ಶೋ’ನಲ್ಲಿ ಸೈಫ್ ಅಲಿ ಖಾನ್ ಅವರು ಈ ಬಗ್ಗೆ ಮಾತನಾಡಿದ್ದರು. ಅವರು ಹಿಂದಿಯಲ್ಲಿ ಕೆಲಸ ಸಿನಿಮಾ ಮಾಡಿದ್ದರು. ಈಗ ಅವರು ಚಿತ್ರರಂಗದಿಂದ ದೂರ ಇದ್ದಾರೆ.

ಆಯೆಶಾ ಟಾಕಿಯಾ

ನಟಿ ಆಯೆಶಾ ಟಾಕಿಯಾ ಕೂಡ ನೋಸ್ ಸರ್ಜರಿ ಬಳಿಕ ವಿಮಾನ ನಿಲ್ದಾಣ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಖ ತುಂಬಾನೇ ಭಿನ್ನವಾಗಿತ್ತು. ನಟಿ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನೇಕರು ದೂರಿದ್ದರು.

ಒಳ್ಳೆಯದಾಗಿದ್ದೂ ಇದೆ..

ನಟಿ ಕಂಗನಾ ರಣಾವತ್ ಅವರ ಆರಂಭದ ದಿನಕ್ಕೂ ಈಗಿನ ಫೋಟೋಗೆ ಹೋಲಿಕೆ ಮಾಡಿದರೆ ಸಾಕಷ್ಟು ಭಿನ್ನತೆ ಇದೆ. ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅನುಷ್ಕಾ ಶರ್ಮಾ ಅವರು ತುಟಿಯ ಸರ್ಜರಿ ಮಾಡಿಸಿದ್ದಾರಂತೆ. ಇದರಿಂದ ಅವರ ನಗು ಭಿನ್ನವಾಗಿ ಕಾಣುತ್ತದೆ. ಅವರು ಈ ಮೊದಲಿಗಿಂತ ಸುಂದರವಾಗಿಯೂ ಕಾಣಿಸುತ್ತಾರೆ.

ಇದನ್ನೂ ಓದಿ: ಮುಂಬೈಗೆ ಹೋಗಿ ಜಾನ್ವಿ ಕಪೂರ್​ ಬಗ್ಗೆ ತಕರಾರು ತೆಗೆದ ಜೂನಿಯರ್​ ಎನ್​ಟಿಆರ್​; ಏನದು?

ಇವರಷ್ಟೇ ಅಲ್ಲದೆ, ರಾಖಿ ಸಾವಂತ್, ಜಾನ್ವಿ ಕಪೂರ್, ಜೂಹಿ ಚಾವ್ಲಾ, ಶ್ರೀದೇವಿ ಸೇರಿ ಅನೇಕರು ಈ ರೀತಿಯ ಸರ್ಜರಿ ಮಾಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.