‘ದೇವರ’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿದವರು ಹೇಳಿದ್ದೇನು?

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇಂದು ಬಿಡುಗಡೆ ಆಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಅರ್ಲಿ ಮಾರ್ನಿಂಗ್ ಶೋ ಹಾಕಲಾಗಿದ್ದು ಸಿನಿಮಾ ನೋಡಿದ ಹಲವರು ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ದೇವರ’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ ನೋಡಿ.

‘ದೇವರ’ ಸಿನಿಮಾ ಹೇಗಿದೆ? ಮೊದಲ ಶೋ ನೋಡಿದವರು ಹೇಳಿದ್ದೇನು?
Follow us
|

Updated on:Sep 27, 2024 | 10:51 AM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇಂದು (ಸೆಪ್ಟೆಂಬರ್ 27) ಬಿಡುಗಡೆ ಆಗಿದೆ. ಮಧ್ಯ ರಾತ್ರಿಯಿಂದಲೇ ಶೋಗಳು ಪ್ರಾರಂಭವಾಗಿದ್ದು, ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ ಬೆಳಿಗ್ಗೆ ಹತ್ತು ಗಂಟೆ ವೇಳೆ ಒಂದು ಕೆಲವು ಕಡೆ ಎರಡು ಶೋಗಳು ಪ್ರದರ್ಶನಗೊಂಡಾಗಿದೆ. ಸಿನಿಮಾ ನೋಡಿ ಬಂದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ವಾವ್ ಎಂದರೆ ಕೆಲವರು ಫ್ಲಾಪ್ ಎನ್ನುತ್ತಿದ್ದಾರೆ. ಜನರಿಗೆ ‘ದೇವರ’ ಸಿನಿಮಾದಲ್ಲಿ ಏನು ಇಷ್ಟವಾಯ್ತು? ಯಾವುದು ಇಷ್ಟವಾಗಲಿಲ್ಲ? ಇಲ್ಲಿದೆ ನೋಡಿ ಮಾಹಿತಿ.

‘ದೇವರ’ ಇಡೀ ಸಿನಿಮಾ ಅರ್ಧ ಬೇಯಿಸಿದ ಅಡುಗೆಯಂತಿದೆ. ಬೇಸರ ಮೂಡಿಸುವ ನಿರೂಪಣೆ, ಕೇಳಲು ಹಿಂಸೆಯಾಗುವ ರೊಟೀನ್ ಮಾದರಿಯ ಡೈಲಾಗ್​ಗಳು ಇವೆ. ಡೈಲಾಗ್ ವಿಷಯದಲ್ಲಂತೂ ಕೊರಟಾಲ ಶಿವ ಸಂಪೂರ್ಣವಾಗಿ ಸೋತಿದ್ದಾರೆ. ಸಿನಿಮಾದ ಎರಡನೇ ಅರ್ಧಕ್ಕಿಂತಲೂ ಮೊದಲಾರ್ಧ ತುಸು ಪರವಾಗಿಲ್ಲ ಎನ್ನಬಹುದು. ಅವಶ್ಯಕತೆ ಇಲ್ಲದ ಹಲವು ದೃಶ್ಯಗಳು ಸಿನಿಮಾದಲ್ಲಿವೆ. ಕ್ಲೈಮ್ಯಾಕ್ಸ್​ಗೆ ಮುನ್ನ 5-10 ನಿಮಿಷ ಮಾತ್ರವೇ ಸಿನಿಮಾದ ಕತೆ ಇದೆ ಉಳಿದೆದ್ದಲ್ಲವೂ ಅನವಶ್ಯಕ’ ಎಂದಿದ್ದಾರೆ ಒಬ್ಬ ಟ್ವಿಟ್ಟರ್ ಬಳಕೆದಾರ.

‘ದೇವರ’ ಸಿನಿಮಾನಲ್ಲಿ ಕೆಲವು ಒಳ್ಳೆಯ ಮಾಸ್ ಮೂಮೆಂಟ್​ಗಳನ್ನು ಕೊರಟಾಲ ಸೃಷ್ಟಿಸಿದ್ದಾರೆ. ಆ ಮಾಸ್ ಮೂಮೆಂಟ್​ಗಳಿಗೆ ಎನ್​ಟಿಆರ್ ಸಖತ್ ಶಕ್ತಿ ತುಂಬಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಸಖತ್ ಆಗಿದೆ. ದೃಶ್ಯಗಳನ್ನು ಎಲಿವೇಟ್ ಮಾಡಿದೆ. ಕೊರಟಾಲ ಶಿವ ಸಿನಿಮಾದ ಪೂರ್ತಿ ಎನರ್ಜಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಕೆಲವು ಪಾತ್ರಗಳನ್ನು ಇನ್ನೂ ಚೆನ್ನಾಗಿ ಕೆತ್ತಬಹುದಿತ್ತು. ಮುಂದಿನ ಭಾಗಕ್ಕೆ ಪ್ರೇಕ್ಷಕರನ್ನು ಸೆಟ್ ಮಾಡುವ ಕೊನೆಯ ದೃಶ್ಯ ಇನ್ನಷ್ಟು ಪರಿಣಾಮಕಾರಿಯಾಗಿ ಇರಬೇಕಿತ್ತು. ಆದರೂ ಸಹ ಒಳ್ಳೆಯ ಪರ್ಫಾರ್ಮೆನ್ಸ್ ಮತ್ತು ಸಂಗೀತಕ್ಕೆ ಪೂರ್ಣ ಅಂಕ’ ಎಂದಿರುವುದು ಥೈವಿವ್ಯೂ ಹೆಸರಿನ ಟ್ವಿಟ್ಟರ್ ಖಾತೆ.

ಇದನ್ನೂ ಓದಿ:Devara Movie Review: ದೇವರ: ಅಲೆ ಮೂಡದ ಸಾಗರ

‘ಮೊದಲಾರ್ಧ ಸಾಧಾರಣವಾಗಿದೆ. ದ್ವೀತೀಯಾರ್ಧ ಕೆಟ್ಟದಾಗಿದೆ. ಕೊರಟಾಲ ಶಿವ ಪಾಲಿಗೆ ಇದು ಮತ್ತೊಂದು ‘ಆಚಾರ್ಯ’. ಜೂ ಎನ್​ಟಿಆರ್ ಮತ್ತು ಜಾನ್ಹವಿ ಚೆನ್ನಾಗಿ ಮಾಡಿದ್ದಾರೆ. ನೀರಿನಲ್ಲಿ ನಡೆವ ಆಕ್ಷನ್ ದೃಶ್ಯಗಳು ಹಾಗೂ ಶಾರ್ಕ್ ಜೊತೆಗಿನ ದೃಶ್ಯ ಚೆನ್ನಾಗಿದೆ. ಮೊದಲೇ ಎಚ್ಚರಿಕೆ ಕೊಡುತ್ತಿದ್ದೀನಿ, ಮೊದಲಾರ್ಧ ಸಿನಿಮಾ ನೋಡಿ ಹೊರಬಂದು ಬಿಡಿ ಎರಡನೇ ಅರ್ಧ ನೋಡಲು ಹೋಗಬೇಡಿ ಬೇಸರ ಆಗುತ್ತದೆ’ ಎಂದಿದ್ದಾರೆ ಪ್ರಿನ್ಸ್ ವರ್ಮಾ ಹೆಸರಿನ ಒಬ್ಬ ಅಭಿಮಾನಿ.

‘ಫ್ಲ್ಯಾಷ್​ಬ್ಯಾಕ್​ನಿಂದ ಸಿನಿಮಾ ಆರಂಭ ಆಗುತ್ತದೆ. ಡ್ಯಾನ್ಸ್ ಮೂಲಕ ಇಂಟ್ರೊ ಅದಾದ ಬಳಿಕ ತುಸು ಫ್ಲ್ಯಾಟ್ ಆಗಿ ಕತೆ ಸರಿದು ಹೋಗುತ್ತದೆ. ಚಿತ್ರಕತೆಯಲ್ಲಿ ಧಂ ಇಲ್ಲ. ಕಂಟೇನರ್ ಸೀನ್ ಚೆನ್ನಾಗಿದೆ. ಇಂಟರ್ವೆಲ್​ಗೆ ಮುಂಚಿನ 30 ನಿಮಿಷ ಚೆನ್ನಾಗಿದೆ. ಎರಡನೇ ಅರ್ಧ ಪ್ರಾರಂಭ ಆಗುವುದು 2.0 ಮೂಲಕ. ಜಾನ್ಹವಿ ಗ್ಲಾಮರ್ ಚೆನ್ನಾಗಿದೆ, ಚುಟ್ಟುಮಲ್ಲೆ ಹಾಡು ಚೆನ್ನಾಗಿದೆ. ಅದರ ಹೊರತಾಗಿ ಎಲ್ಲವೂ ಫ್ಲ್ಯಾಟ್ ಆಗಿ ನಡೆಯುತ್ತದೆ. ಹೈ ಸೀನ್​ಗಳು ಕಡಿಮೆ, ಬಹುತೇಕ ಫ್ಲ್ಯಾಟ್ ಆಗಿಯೇ ನಡೆಯುತ್ತದೆ ಕತೆ. ಕ್ಲೈಮ್ಯಾಕ್ಸ್ ಸಹ ಇನ್ನೂ ಚೆನ್ನಾಗಿರಬಹುದಿತ್ತು’ ಎಂದು ಟಾಲಿಮಸ್ತಿ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಗಿದೆ.

ಒಟ್ಟಾರೆ ‘ದೇವರ’ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಗಮನಿಸಿದರೆ ಸಿನಿಮಾವನ್ನು ಚೆನ್ನಾಗಿಲ್ಲ ಎಂದಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಇದರ ನಡುವೆ ಅಲ್ಲು ಅರ್ಜುನ್ ಅಭಿಮಾನಿಗಳು ಕೆಲವರು ‘ದೇವರ’ ಸಿನಿಮಾದ ಬಗ್ಗೆ ತೀರ ಕೆಟ್ಟದಾಗಿ ಬರೆದಿರುವುದೂ ಸಹ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:48 am, Fri, 27 September 24

ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್