Devara Movie Review: ದೇವರ: ಅಲೆ ಮೂಡದ ಸಾಗರ

‘ದೇವರ: ಚಾಪ್ಟರ್ 1’ ಸಿನಿಮಾ ಇಂದು (ಸೆಪ್ಟೆಂಬರ್ 27) ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಜೂನಿಯರ್ ಎನ್​ಟಿಆರ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. 90ರ ದಶಕದಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದ ವಿಮರ್ಶೆ ಇಲ್ಲಿದೆ.

Devara Movie Review: ದೇವರ: ಅಲೆ ಮೂಡದ ಸಾಗರ
ಎನ್​ಟಿಆರ್
Follow us
|

Updated on:Sep 27, 2024 | 9:25 AM

ಸಿನಿಮಾ: ದೇವರ. ನಿರ್ದೇಶನ: ಕೊರಟಾಲ ಶಿವ. ಪಾತ್ರವರ್ಗ: ಜೂನಿಯರ್ ಎನ್​ಟಿಆರ್​, ಜಾನ್ವಿ ಕಪೂರ್, ಸೈಫ್ ಅಲಿ ಖಾನ್. ಮ್ಯೂಸಿಕ್: ಅನಿರುದ್ಧ್ ರವಿಚಂದರ್. ರೇಟಿಂಗ್: 2.5/5

‘ಅರವಿಂದ ಸಮೇತ’ ಬಳಿಕ ಜೂನಿಯರ್ ಎನ್​ಟಿಆರ್ ನಟನೆಯ ‘ಆರ್​ಆರ್​ಆರ್’ ಸಿನಿಮಾ ರಿಲೀಸ್ ಆಯಿತು. ಇದು ಮಲ್ಟಿ ಸ್ಟಾರರ್ ಚಿತ್ರ. ಈಗ ಆರು ವರ್ಷಗಳ ಬಳಿಕ ಜೂನಿಯರ್ ಎನ್​ಟಿಆರ್ ಸೋಲೋ ಹೀರೋ ಆಗಿ  ಪ್ರೇಕ್ಷಕರ ಎದುರು ಬಂದಿದ್ದಾರೆ. ಅವರ ನಟನೆಯ ‘ದೇವರ’ ಚಿತ್ರ ಇಂದು ರಿಲೀಸ್ ಆಗಿದೆ. ಈ ಚಿತ್ರ ಹೇಗಿದೆ? ಸಿನಿಮಾದ ಕಥೆ ಏನು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

‘ದೇವರ’ ಸಮುದ್ರ ತೀರದಲ್ಲಿರುವ ನಾಲ್ಕು ಹಳ್ಳಿಗಳ ಕಥೆ. ಈ ಊರಿನಲ್ಲಿರುವ ಹಿಂದಿನ ತಲೆಮಾರಿನವರೆಲ್ಲ ಸ್ವಾತಂತ್ರ್ಯ ಹೋರಾಟಗಾರರು. ಆ ಊರನ್ನು ಬ್ರಿಟಿಷರಿಂದ ಕಾಪಾಡುವ ಕೆಲಸವನ್ನು ಹಳ್ಳಿಗರು ಮಾಡುತ್ತಿದ್ದರು. ಆಗ ಅವರಿಗೆ ಪ್ರಾಮುಖ್ಯತೆ ಸಿಗುತ್ತಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಈ ಊರಿಗೆ ಸಿಗುವ ಪ್ರಾಮುಖ್ಯತೆ ಕಡಿಮೆ ಆಗುತ್ತಾ ಬಂತು. ಹೀಗಾಗಿ, ಊರಿನ ಮಂದಿ ಹೊಟ್ಟೆಪಾಡಿಗಾಗಿ ಕೆಟ್ಟ ಮಾರ್ಗ ಅನುಸರಿಸೋದು ಅನಿವಾರ್ಯ ಆಯಿತು. ಈ ವೇಳೆ ಒಳ್ಳೆ ಗುಣ ಹಾಗೂ ಕೆಟ್ಟ ಗುಣಗಳ ಮಧ್ಯೆ ಕಾದಾಟ ಆರಂಭ ಆಗುತ್ತದೆ. ಇಷ್ಟೇನಾ? ಇಲ್ಲ. ಇವುಗಳನ್ನು ಹೇಳುವ ಪ್ರಯತ್ನದಲ್ಲಿ ನಿರ್ದೇಶಕ ಕೊರಟಾಲ ಶಿವ ಸಾಕಷ್ಟು ಬಾರಿ ಎಡವಿದ್ದಾರೆ.

ಇಡೀ ಸಿನಿಮಾದ ಕಥೆ ಸಮುದ್ರ ತೀರದಲ್ಲಿ ಸಾಗುತ್ತದೆ. ಸಮುದ್ರ ಎಂದಾಗ ನೆನಪಿಗೆ ಬರೋದು ದೊಡ್ಡ ಅಲೆಗಳು. ಸಮುದ್ರ ತೀರದಲ್ಲಿಯೇನೋ ಅಲೆಗಳು ಕಾಣಿಸುತ್ತವೆ. ಆದರೆ, ಕಥೆಯಲ್ಲಿ, ಸಿನಿಮಾದಲ್ಲಿ ಬರುವ ದೃಶ್ಯಗಳಲ್ಲಿ ಈ ರೀತಿಯಾ ಯಾವುದೇ ಭೋರ್ಗರೆತ ಕಾಣುವುದಿಲ್ಲ. ಇಡೀ ಸಿನಿಮಾದ ಕಥೆ ಅಲೆಯೇ ಮೂಡದೆ ಇರುವ ಸಾಗರದಂತೆ ಕಾಣುತ್ತದೆ. ಆಗಾಗ ಬರೋ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡುತ್ತದೆಯಾದರೂ ನಂತರ ಮತ್ತದೇ ಮೌನ.

ಜೂನಿಯರ್ ಎನ್​ಟಿಆರ್ ಅವರು ಅಪ್ಪ-ಮಗನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಇಡೀ ಸಿನಿಮಾ ಉದ್ದಕ್ಕೂ ಅವರು ಕಾಣಿಸುತ್ತಾರೆ. ಆದರೆ, ಎಲ್ಲಿಯೂ ಅಪ್ಪ-ಮಗ ಒಟ್ಟಾಗಿ ಬರುವುದಿಲ್ಲ. ಜೂನಿಯರ್ ಎನ್​ಟಿಆರ್ ಸಾಹಸ ದೃಶ್ಯಗಳ ಮೂಲಕ, ಭಾವನಾತ್ಮಕ ದೃಶ್ಯಗಳ ಮೂಲಕ ಇಷ್ಟವಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಕನ್ನಡದಲ್ಲಿ ಡಬ್ ಮಾಡಿದ ಪ್ರಯತ್ನ ಮೆಚ್ಚಬೇಕು. ಅವರು ಸ್ಪಷ್ಟ ಕನ್ನಡದ ಮಾತುಗಳು ಕಿವಿಗೆ ಇಂಪು ನೀಡುತ್ತದೆ. ಸೈಫ್ ಅಲಿ ಖಾನ್ ಮಾಡಿರೋ ಭೈರನ ಪಾತ್ರ ಸಿನಿಮಾ ಉದ್ದಕ್ಕೂ ಕಾಣಿಸಿಕೊಳ್ಳುತ್ತದೆಯಾದರೂ ಇನ್ನೂ ಏನೋ ಬೇಕಿತ್ತು ಎಂದನಿಸುತ್ತದೆ. ಆ ಪಾತ್ರವನ್ನೇ ಇನ್ಯಾವುದೋ ಕಲಾವಿದ ಮಾಡಿದ್ದರೂ ಅಂಥ ಬದಲಾವಣೆ ಏನೂ ಆಗುತ್ತಿರಲಿಲ್ಲ. ಜಾನ್ವಿ ಕಪೂರ್ ಅವರು ಕೇವಲ ಗ್ಲಾಮರ್​ಗೆ ಮಾತ್ರ ಸೀಮಿತವಾಗಿದ್ದಾರೆ. ಜೂನಿಯರ್ ಆರ್ಟಿಸ್ಟ್​​ಗಳು ಕಾಣಿಸಿಕೊಂಡಷ್ಟು ಹೊತ್ತೂ ಜಾನ್ವಿ ಕಪೂರ್ ತೆರೆಮೇಲೆ ಬರೋದಿಲ್ಲ ಅನ್ನೋದು ಬೇಸರದ ವಿಚಾರ. ಪ್ರಕಾಶ್ ರೈ ಅವರ ಪಾತ್ರ ಕಥೆ ಹೇಳುವುದಕ್ಕೆ ಮಾತ್ರ ಸೀಮಿತವಾಗಿದೆ.

ಕೊರಟಾಲ ಶಿವ ಅವರು ‘ಆಚಾರ್ಯ’ ಸಿನಿಮಾ ಮೂಲಕ ಛೀಮಾರಿ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಅವರು ಮತ್ತೊಂದು ಒಳ್ಳೆಯ ಅವಕಾಶ ಕೈ ಚೆಲ್ಲಿದ್ದಾರೆ. ಈ ಚಿತ್ರದ ನಿರೂಪಣೆ ಗೊತ್ತು ಗುರಿ ಇಲ್ಲದೆ ಸಾಗುತ್ತದೆ. ಇನ್ನು, ಲಾಜಿಕ್​ಗಳಿಗೆ ಇಲ್ಲಿ ಜಾಗವೇ ಇಲ್ಲ. ಪ್ರತಿ ದೃಶ್ಯ ನೋಡಿದಾಗಲೂ ಇನ್ನೂ ಉತ್ತಮವಾಗಿ ಮಾಡಬಹುದಿತ್ತಲ್ಲ ಎನ್ನುವ ಅಭಿಪ್ರಾಯ ಪ್ರೇಕ್ಷಕನಿಂದ ಬರುತ್ತದೆ.

‘ದೇವರ’ ಸಿನಿಮಾದಲ್ಲಿ ಅನಿರುದ್ಧ್ ರವಿಚಂದರ್ ಅವರ ಮ್ಯೂಸಿಕ್ ಹೆಚ್ಚು ಕೆಲಸ ಮಾಡಿಲ್ಲ. ಅಲ್ಲೊಂದು ಇಲ್ಲೊಂದು ದೃಶ್ಯಗಳಲ್ಲಿ ಅವರು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ‘ಚುಟ್ಟಮಲ್ಲೆ’ ಹಾಡಿನಲ್ಲಿ ಮಾತ್ರ ಅವರು ಮ್ಯಾಜಿಕ್ ಮಾಡುತ್ತಾರೆ.

ಇದನ್ನೂ ಓದಿ: Devara First Half Review: ಹೇಗಿದೆ ‘ದೇವರ’ ಸಿನಿಮಾ ಮೊದಲಾರ್ಧ? ಇಲ್ಲಿದೆ ಡೀಟೇಲ್ಸ್

ಇದು ‘ದೇವರ’ ಚಿತ್ರದ ಮೊದಲ ಭಾಗ ಮಾತ್ರ. ಹೀಗಾಗಿ, ಸಿನಿಮಾದ ಕಥೆ ಅರ್ಧಕ್ಕೆ ನಿಂತಂತೆ ಭಾಸವಾಗುತ್ತದೆ. ಕಥೆ ಆರಂಭ ಆದಾಗ ಮೂಡುವು ಕೆಲವು ದೃಶ್ಯ ಹಾಗೂ ಪ್ರಶ್ನೆಗಳಿಗೆ ಯಾವುದೇ ಅರ್ಥವಿಲ್ಲ. ಬಹುಶಃ ಎರಡನೇ ಭಾಗ ಅನ್ನೋದನ್ನು ಮಾಡಿದರೆ ಇದಕ್ಕೆ ಅರ್ಥ ಸಿಕ್ಕರೂ ಸಿಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:18 am, Fri, 27 September 24

ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ
ಮುನಿರತ್ನರಿಂದ ಅತ್ಯಾಚಾರ ಆರೋಪ;ವಿಕಾಸಸೌಧದಲ್ಲಿ ‘ಕೈ’ ಮುಖಂಡರಿಂದ ಶುದ್ಧೀಕರಣ