AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈಗೆ ಹೋಗಿ ಜಾನ್ವಿ ಕಪೂರ್​ ಬಗ್ಗೆ ತಕರಾರು ತೆಗೆದ ಜೂನಿಯರ್​ ಎನ್​ಟಿಆರ್​; ಏನದು?

ಜೂನಿಯರ್​ ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ಅವರು ‘ದೇವರ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಇದು ಜಾನ್ವಿ ನಟನೆಯ ಮೊದಲ ತೆಲುಗು ಸಿನಿಮಾ. ವಿವಿಧ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಸೆ.27ಕ್ಕೆ ‘ದೇವರ’ ರಿಲೀಸ್​ ಆಗಲಿದೆ. ಅದರ ಪ್ರಚಾರದ ಸಲುವಾಗಿ ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ನಲ್ಲಿ ಚಿತ್ರತಂಡದವರು ಭಾಗಿಯಾಗಿದ್ದಾರೆ.

ಮುಂಬೈಗೆ ಹೋಗಿ ಜಾನ್ವಿ ಕಪೂರ್​ ಬಗ್ಗೆ ತಕರಾರು ತೆಗೆದ ಜೂನಿಯರ್​ ಎನ್​ಟಿಆರ್​; ಏನದು?
ಜೂನಿಯರ್​ ಎನ್​ಟಿಆರ್​, ಜಾನ್ವಿ ಕಪೂರ್​
ಮದನ್​ ಕುಮಾರ್​
|

Updated on: Sep 25, 2024 | 6:31 PM

Share

ನಟಿ ಜಾನ್ವಿ ಕಪೂರ್​ ಅವರು ಬಾಲಿವುಡ್​ನಲ್ಲಿ ಮಿಂಚುತ್ತಿರುವುದು ಮಾತ್ರವಲ್ಲದೇ, ದಕ್ಷಿಣ ಭಾರತದಲ್ಲೂ ಮಿಂಚಲು ರೆಡಿಯಾಗಿದ್ದಾರೆ. ‘ದೇವರ’ ಸಿನಿಮಾ ಮೂಲಕ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಜೂನಿಯರ್​ ಎನ್​ಟಿಆರ್​ ಜೊತೆ ನಟಿಸುವ ಅವಕಾಶ ಜಾನ್ವಿ ಕಪೂರ್​ಗೆ ಸಿಕ್ಕಿದೆ. ಈ ಸಿನಿಮಾ ಎರಡು ಪಾರ್ಟ್​ನಲ್ಲಿ ಮೂಡಿಬರುತ್ತಿದೆ. ‘ದೇವರ: ಪಾರ್ಟ್​ 1’ ಸಿನಿಮಾ ಸೆಪ್ಟೆಂಬರ್​ 27ರಂದು ಬಿಡುಗಡೆ ಆಗಲಿದೆ. ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. ರಿಲೀಸ್​ಗೆ ಕ್ಷಣಗಣನೆ ಶುರುವಾಗಿರುವ ಈ ಸಮಯದಲ್ಲಿ ಜಾನ್ವಿ ಕಪೂರ್​ ಬಗ್ಗೆ ಜೂನಿಯರ್​ ಎನ್​ಟಿಆರ್​ ಅವರು ತಕರಾರು ತೆಗೆದಿದ್ದಾರೆ.

‘ದೇವರ’ ಸಿನಿಮಾದ ಪ್ರಚಾರದ ಸಲುವಾಗಿ ಸಿನಿಮಾ ತಂಡದವರು ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜೂನಿಯರ್​ ಎನ್​ಟಿಆರ್​, ಜಾನ್ವಿ ಕಪೂರ್​, ಸೈಫ್​ ಅಲಿ ಖಾನ್​ ಅವರು ಸಿನಿಮಾದ ಬಗ್ಗೆ ಮತ್ತು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಜಾನ್ವಿ ಕಪೂರ್​ ಬಗ್ಗೆ ಜೂನಿಯರ್​ ಎನ್​ಟಿಆರ್​ ಅವರು ಒಂದು ದೂರು ಹೇಳಿದರು.

ಜೂ. ಎನ್​ಟಿಆರ್​-ಜಾನ್ವಿ ನಡುವೆ 14 ವರ್ಷ ವಯಸ್ಸಿನ ಅಂತರ; ಟ್ರೋಲ್ ಆಯ್ತು ರೊಮ್ಯಾನ್ಸ್

‘ಜಾನ್ವಿ ಕಪೂರ್​ ಹೈದರಾಬಾದ್​ನಲ್ಲಿ ಶೂಟಿಂಗ್​ ಮಾಡುತ್ತಿದ್ದಾಗ ಅವರಿಗಾಗಿ ನಾನು ಎರಡು ಬಾರಿ ಒಳ್ಳೆಯ ಊಟ ಕಳಿಸಿದ್ದೆ. ಆದರೆ ನಾನು ಈಗ ಮುಂಬೈಗೆ ಬಂದು ಒಂದು ದಿನ ಕಳೆದಿದೆ. ಒಂದು ಕಾಳು ಊಟವನ್ನೂ ನನಗೆ ಅವರು ಕಳಿಸಿಲ್ಲ. ನನಗಾಗಿ ಅವರ ಕೈರುಚಿಯ ಅಡುಗೆ ಕಳಿಸುವುದು ಬಿಡಿ, ರೆಸ್ಟೋರೆಂಟ್​ನಿಂದಲೂ ಊಟ ಆರ್ಡರ್​ ಮಾಡಿಲ್ಲ’ ಎಂದು ಜೂ. ಎನ್​ಟಿಆರ್​ ಅವರು ದೂರಿದ್ದಾರೆ. ಆದರೆ ಅವರು ಈ ರೀತಿ ಹೇಳಿದ್ದು ತಮಾಷೆಗಾಗಿ. ಆದ್ದರಿಂದ ಜಾನ್ವಿ ಕಪೂರ್​ ಅವರು ಜೋರಾಗಿ ನಕ್ಕಿದ್ದಾರೆ.

ಈ ಶನಿವಾರ (ಸೆ.28) ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಹೊಸ ಸಂಚಿಕೆ ಪ್ರಚಾರ ಆಗಲಿದೆ. ನೆಟ್​ಫ್ಲಿಕ್ಸ್​ ಮೂಲಕ ಈ ಕಾರ್ಯಕ್ರಮ ಬಿತ್ತರ ಆಗಲಿದೆ. ‘ದೇವರ’ ಸಿನಿಮಾದ ಬಗ್ಗೆ ಅನೇಕ ವಿಚಾರಗಳನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ. ಅದರ ಪ್ರೋಮೋ ಈಗ ಬಿಡುಗಡೆಯಾಗಿ ವೈರಲ್​ ಆಗಿದೆ. ‘ಯಾವಾಗಲೂ ಶ್ರೀದೇವಿ ಅವರೇ ನನ್ನ ಫೆವರಿಟ್​ ಬಾಲಿವುಡ್​ ನಟಿ’ ಎಂದು ಜೂನಿಯರ್​ ಎನ್​ಟಿಆರ್​ ಹೇಳಿದ್ದಾರೆ. ‘ದಕ್ಷಿಣದ ನನ್ನ ಫೇವರಿಟ್​ ನಟಿ ಕೂಡ ಶ್ರೀದೇವಿ’ ಎಂದು ಸೈಫ್​ ಅಲಿ ಖಾನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More