AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ. ಎನ್​ಟಿಆರ್​-ಜಾನ್ವಿ ನಡುವೆ 14 ವರ್ಷ ವಯಸ್ಸಿನ ಅಂತರ; ಟ್ರೋಲ್ ಆಯ್ತು ರೊಮ್ಯಾನ್ಸ್

‘ನಾಟು ನಾಟು’ ಹಾಡಿನಲ್ಲಿ ಜೂನಿಯರ್​ ಎನ್​ಟಿಆರ್​ ಅವರು ಧೂಳೆಬ್ಬಿಸಿದ್ದರು. ಆದರೆ ಈಗ ‘ದೇವರ: ಪಾರ್ಟ್​ 1’ ಸಿನಿಮಾದ ಹೊಸ ಹಾಡು ಟ್ರೋಲ್​ ಆಗುತ್ತಿದೆ. ತಮಗಿಂತ 14 ವರ್ಷ ಕಿರಿಯ ನಟಿ ಜಾನ್ವಿ ಕಪೂರ್​ ಜೊತೆ ಜೂ. ಎನ್​ಟಿಆರ್​ ಅವರು ಡ್ಯಾನ್ಸ್​ ಮಾಡಿರುವುದೇ ಟ್ರೋಲ್​ಗೆ ಕಾರಣ ಆಗಿದೆ.

ಜೂ. ಎನ್​ಟಿಆರ್​-ಜಾನ್ವಿ ನಡುವೆ 14 ವರ್ಷ ವಯಸ್ಸಿನ ಅಂತರ; ಟ್ರೋಲ್ ಆಯ್ತು ರೊಮ್ಯಾನ್ಸ್
ಜೂನಿಯರ್ ಎನ್​ಟಿಆರ್​, ಜಾನ್ವಿ ಕಪೂರ್​
ಮದನ್​ ಕುಮಾರ್​
|

Updated on: Aug 06, 2024 | 10:26 PM

Share

ಬಾಲಿವುಡ್​ನಲ್ಲಿ ಈಗಾಗಲೇ ಹೆಸರು ಮಾಡಿರುವ ನಟಿ ಜಾನ್ವಿ ಕಪೂರ್​ ಅವರು ಈಗ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲೂ ತಮ್ಮ ಛಾಪು ಮೂಡಿಸಲು ಬರುತ್ತಿದ್ದಾರೆ. ಟಾಲಿವುಡ್​ನ ‘ದೇವರ: ಪಾರ್ಟ್​ 1’ ಸಿನಿಮಾಗೆ ಜಾನ್ವಿ ಕಪೂರ್​ ನಾಯಕಿ ಆಗಿದ್ದಾರೆ. ಜೂನಿಯರ್​ ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ಅವರು ಜೋಡಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಇಬ್ಬರ ನಡುವೆ ಇರುವ ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರು ನೆಗೆಟಿವ್​ ಕಮೆಂಟ್​ ಮಾಡುತ್ತಿದ್ದಾರೆ.

‘ದೇವರ: ಪಾರ್ಟ್​ 1’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಜೂನಿಯರ್​ ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ಅವರು ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಅಪ್ಪಟ ಅಭಿಮಾನಿಗಳು ಈ ಹಾಡನ್ನು ಇಷ್ಟಪಡುತ್ತಿದ್ದಾರೆ. ಆದರೆ ನೆಟ್ಟಿಗರು ಯಾಕೋ ಮೆಚ್ಚಿಕೊಂಡಿಲ್ಲ. ಅದಕ್ಕೆ ಮುಖ್ಯ ಕಾರಣ ಆಗಿರುವುದು ನಟ-ನಟಿ ನಡುವೆ ಇರುವ ವಯಸ್ಸಿನ ಅಂತರ.

ಇದನ್ನೂ ಓದಿ: ಜಾನ್ವಿ ಕಪೂರ್ ವೃತ್ತಿ ಜೀವನದಲ್ಲಿ ಮತ್ತೊಂದು ಸೋಲು; ಎಷ್ಟೊಂದು ಹೀನಾಯ ಕಲೆಕ್ಷನ್

ಜೂನಿಯರ್​ ಎನ್​ಟಿಆರ್​ ಅವರಿಗೆ ಈಗ 41 ವರ್ಷ ವಯಸ್ಸು. ಅವರಿಗೆ ಜೋಡಿಯಾಗಿ 27ರ ಪ್ರಾಯದ ಜಾನ್ವಿ ಕಪೂರ್​ ನಟಿಸಿದ್ದಾರೆ. ಇಬ್ಬರ ನಡುವೆ ಬರೋಬ್ಬರಿ 14 ವರ್ಷಗಳ ವಯಸ್ಸಿನ ಅಂತರ ಇದೆ. ಹೊಸ ಹಾಡಿನಲ್ಲಿ ಈ ಜೋಡಿ ರೊಮ್ಯಾಂಟಿಕ್​ ಆಗಿ ಡ್ಯಾನ್ಸ್ ಮಾಡಿದೆ. ವಯಸ್ಸಿನ ಅಂತರದ ಕಾರಣದಿಂದ ಜಾನ್ವಿ ಕಪೂರ್​ ಮತ್ತು ಜೂನಿಯರ್​ ಎನ್​ಟಿಆರ್​ ಕೆಮಿಸ್ಟ್ರಿ ಚೆನ್ನಾಗಿ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಕೆಲವರಿಂದ ವ್ಯಕ್ತವಾಗಿದೆ. ಈ ಬಗ್ಗೆ ಜನರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಇನ್ನು, ಜೂನಿಯರ್​ ಎನ್​ಟಿಆರ್​ ಅವರು ಅತ್ಯುತ್ತಮ ಡ್ಯಾನ್ಸರ್​ ಎಂಬುದರಲ್ಲಿ ಅನುಮಾನವೇ ಇಲ್ಲ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡಿನಲ್ಲಿ ಅವರು ಸೂಪರ್​ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಆದರೆ ಈಗ ‘ದೇವರ: ಪಾರ್ಟ್​ 1’ ಸಿನಿಮಾದ ರೊಮ್ಯಾಂಟಿಕ್​ ಹಾಡಿನಲ್ಲಿ ಅವರ ಡ್ಯಾನ್ಸ್​ ಸ್ಟೆಪ್ಸ್​ ನೋಡಿದ ಜನರಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ. ಇದರಿಂದ ಸಿನಿಮಾಗೆ ಸ್ವಲ್ಪ ನೆಗೆಟಿವ್​ ಆಗುವ ಸೂಚನೆ ಕಾಣಿಸಿದೆ. ಈ ಬಗ್ಗೆ ಚಿತ್ರತಂಡದವರು ಪ್ರತಿಕ್ರಿಯೆ ನೀಡಿಲ್ಲ. ಕೊರಟಾಲ ಶಿವ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಕಾನ್ಪುರದ ಬಳಿ ಹಳಿ ತಪ್ಪಿದ ಸಬರಮತಿ ಎಕ್ಸ್‌ಪ್ರೆಸ್ ರೈಲು
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ರಾಹುಲ್ ಗಾಂಧಿ ಮಗುವಲ್ಲ, ದೇಶದ ಗೌರವಕ್ಕೆ ಧಕ್ಕೆ ತರಬಾರದು; ಕಿರಣ್ ರಿಜಿಜು
ರಾಹುಲ್ ಗಾಂಧಿ ಮಗುವಲ್ಲ, ದೇಶದ ಗೌರವಕ್ಕೆ ಧಕ್ಕೆ ತರಬಾರದು; ಕಿರಣ್ ರಿಜಿಜು
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್