ಬಾಲ್ಯದ ಮನೆಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 08, 2022 | 2:45 PM

‘ಯುನಿಸೆಫ್'​​(unicef)ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ (priyanka chopra) ಇತ್ತೀಚೆಗೆ ಉತ್ತರ ಪ್ರದೇಶದ ಪ್ರವಾಸದ ವೇಳೆ ಲಕ್ನೋಗೆ ಭೇಟಿ ನೀಡಿದ್ದಾರೆ. ‘ನಾನು ಬಾಲ್ಯವನ್ನ ಕೆಲವು ವರ್ಷಗಳ ಕಾಲ ಇಲ್ಲಿಯೇ ಕಳೆದಿದ್ದೆ' ಎಂದು ಬರೆಯುವ ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಬಾಲ್ಯದ ಮನೆಗೆ ಭೇಟಿ ನೀಡಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us on

ಪ್ರಿಯಾಂಕಾ ಚೋಪ್ರಾ (priyanka chopra)ಸೋಮವಾರ (ನವೆಂಬರ್ 7) ಲಕ್ನೋಕೆ ತೆರಳಿದ್ದಾರೆ. ಇತ್ತೀಚೆಗೆ ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಿದ್ದ್ದ ನಟಿ, ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ತಾರತಮ್ಯ ಕೊನೆಗೊಳಿಸಲು ಯೂನಿಸೆಫ್​(unicef) ಮಾಡುತ್ತಿರುವ ಕೆಲಸವನ್ನ ವೀಕ್ಷಿಸಿದ್ದಾರೆ. ಉತ್ತರ ಪ್ರದೇಶದ ಕ್ಷೇತ್ರ ಪ್ರವಾಸಕ್ಕೆ ಹೋಗಿದ್ದಾಗ ‘ನಾನು ಕೆಲವು ವರ್ಷಗಳ ಕಾಲ ಇಲ್ಲಿನ ಶಾಲೆಯಲ್ಲಿ ಕಳೆದಿದ್ದೇನೆ ಮತ್ತು ನನಗೆ ಇಲ್ಲಿ ಕುಟುಂಬ ಹಾಗೂ ಸ್ನೇಹಿತರಿದ್ದಾರೆ’ ಎಂದು ಬರೆದುಕೊಳ್ಳುವ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಲಿಂಗ ಅಸಮಾನತೆಯು ಹೆಚ್ಚಾಗಿದ್ದು ವಿಶೇಷವಾಗಿ ಹೆಣ್ಣು ಮಕ್ಕಳು ಸಮಾನ ಅವಕಾಶಗಳಿಲ್ಲದೆ ಅನಾನುಕೂಲಕ್ಕೆ ಒಳಗಾಗುತ್ತಿದ್ದಾರೆ. ನಾನು ನನ್ನ ಬಾಲ್ಯವನ್ನ ಸ್ವಲ್ಪ ಕಾಲ ಇಲ್ಲಿಯೇ ಕಳೆದಿದ್ದರಿಂದ ನಾನು ಇಲ್ಲಿನ ಬದಲಾವಣೆಯನ್ನು ನೋಡಲು ಬಯಸಿದ್ದೇನೆ ಎಂದಿದ್ದಾರೆ. ಹೆಣ್ಣು ಮಕ್ಕಳು ತಮಗಾಗಿ ಅಲ್ಲದೇ ತಮ್ಮ ಸಮುದಾಯಗಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ತಾರತಮ್ಯ ಕೊನೆಗೊಳಿಸಬೇಕು ಎಂದಿದ್ದಾರೆ.

ಇದನ್ನೂ ಓದಿ

ಇದಕ್ಕೂ ಮುನ್ನ ಭಾನುವಾರ(ನವೆಂಬರ್​ 6) ಲಕ್ನೋ ತಲುಪಿದ ಪ್ರಿಯಾಂಕಾ ಚೋಪ್ರಾ ‘ಯುನಿಸೆಫ್’ ಕಚೇರಿಯ ವಿಶಾಲವಾದ ಕಟ್ಟಡದೊಳಗಿನ ಫೋಟೋ ಮತ್ತು ಸೋಮವಾರ ಸಾಂಪ್ರದಾಯಿಕ ಉಡುಪಿನ ಜೊತೆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರು ಮುಂದಿನ ಸಿನಿಮಾ ‘ಜೀ ಲೇ ಜರಾ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಫರ್ಹಾನ್​ ಅಖ್ತರ್​ ನಿರ್ದೇಶನ ಮಾಡುತ್ತಿದ್ದು ಜೋಯಾ ಅಖ್ತರ್​ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕತ್ರಿನಾ ಕೈಫ್​ ಮತ್ತು ಆಲಿಯಾ ಭಟ್​ ನಟಿಸುತ್ತಿದ್ದಾರೆ. ಹಾಗೂ ಹಾಲಿವುಡ್​ನಲ್ಲೂ ಪ್ರಿಯಾಂಕಾ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಮನರಂಜನಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ