ಬಿಗ್ ಬಾಸ್ ಮನೆಯಿಂದ ಹೊರ ಬಂದರೂ ನಿಂತಿಲ್ಲ ಟಾಸ್ಕ್; ಪ್ರಿಯಾಂಕಾ ತಿಮ್ಮೇಶ್ ವಿಡಿಯೋ ವೈರಲ್
ಬಿಗ್ ಬಾಸ್ ಮನೆಯಲ್ಲಿ ಬಿಸ್ಕತ್ ಟಾಸ್ಕ್ ಒಂದನ್ನು ನೀಡಲಾಗಿತ್ತು. ಹಣೆಯ ಮೇಲೆ ಬಿಸ್ಕತ್ ಇಟ್ಟುಕೊಂಡು ಅದನ್ನು ಕೈನಲ್ಲಿ ಮುಟ್ಟದೇ ಜಾರಿಸುತ್ತಾ ಬಾಯಿಗೆ ಹಾಕಿಕೊಳ್ಳಬೇಕು. ಈ ಟಾಸ್ಕ್ ಸ್ಪರ್ಧಿಗಳಿಗೆ ಸಾಕಷ್ಟು ಮಜ ನೀಡಿತ್ತು.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ನಿತ್ಯ ಒಂದೊಂದು ಟಾಸ್ಕ್ ನೀಡಲಾಗುತ್ತಿತ್ತು. ಎಲ್ಲಾ ಸ್ಪರ್ಧಿಗಳು ಇದನ್ನು ಖುಷಿಯಿಂದಲೇ ಮಾಡಿದ್ದರು. ಕೆಲವರು ಈ ಟಾಸ್ಕ್ ಯಶಸ್ವಿಗೊಳಿಸಲು ವಿಫಲರಾಗಿದ್ದರು. ಹೀಗಾಗಿ, ಬಿಗ್ ಬಾಸ್ನಿಂದ ಹೊರಬಂದ ನಂತರದಲ್ಲಿ ಕೆಲ ಟಾಸ್ಕ್ಗಳನ್ನು ಮನೆಯಲ್ಲೇ ಪ್ರಯತ್ನಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಮನೆಯಲ್ಲೇ ಬಿಸ್ಕತ್ ಟಾಸ್ಕ್ ಮಾಡುತ್ತಿರುವ ಫನ್ ವಿಡಿಯೋ ಒಂದು ಈಗ ಸಾಕಷ್ಟು ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಬಿಸ್ಕತ್ ಟಾಸ್ಕ್ ಒಂದನ್ನು ನೀಡಲಾಗಿತ್ತು. ಹಣೆಯ ಮೇಲೆ ಬಿಸ್ಕತ್ ಇಟ್ಟುಕೊಂಡು ಅದನ್ನು ಕೈನಲ್ಲಿ ಮುಟ್ಟದೇ ಜಾರಿಸುತ್ತಾ ಬಾಯಿಗೆ ಹಾಕಿಕೊಳ್ಳಬೇಕು. ಈ ಟಾಸ್ಕ್ ಸ್ಪರ್ಧಿಗಳಿಗೆ ಸಾಕಷ್ಟು ಮಜ ನೀಡಿತ್ತು. ಇದು ನೋಡಿದಷ್ಟು ಸುಲಭವಿಲ್ಲ ಎಂಬುದೂ ಸ್ಪಷ್ಟವಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ನಡೆದ ಈ ಟಾಸ್ಕ್ನಲ್ಲಿ ರಘು ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್ ಕಾಂಪಿಟೇಷನ್ಗೆ ಇಳಿದಿದ್ದರು. ಎಲ್ಲರೂ ರಘು ಗೌಡ ಗೆಲ್ಲುತ್ತಾರೆ ಎಂದೇ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಪ್ರಿಯಾಂಕಾ ತಿಮ್ಮೇಶ್ ಅತ್ಯುತ್ತಮವಾಗಿ ಟಾಸ್ಕ್ ಆಡುವ ಮೂಲಕ ಗೆದ್ದರು. ಈ ಮೂಲಕ ಮನೆಯವರ ಮೆಚ್ಚುಗೆಗೆ ಪಾತ್ರರಾದರು.
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮುಗಿದ ನಂತರ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಯಾರೂ ಮುಟ್ಟುವಂತಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ಈ ಟಾಸ್ಕ್ ಮಾಡಬೇಕು ಎಂದರೆ ಅದು ಅಸಾಧ್ಯವೇ ಆಗಿತ್ತು. ಹೀಗಾಗಿ, ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಅಲ್ಲಿ ನೀಡಿದ್ದ ಟಾಸ್ಕ್ಗಳನ್ನು ಪ್ರಯತ್ನ ಮಾಡುತ್ತಿದ್ದಾರೆ.
ಪ್ರಿಯಾಂಕಾ ತಿಮ್ಮೇಶ್ ಕೆಲವರ ಜತೆಗೂಡಿ ಬಿಸ್ಕತ್ ಟಾಸ್ಕ್ ಮಾಡಿದ್ದಾರೆ. ಆದರೆ, ಉಳಿದವರಿಗೆ ಈ ಟಾಸ್ಕ್ ಪೂರ್ಣಗೊಳಿಸೋಕೆ ಸಾಧ್ಯವೇ ಆಗಿಲ್ಲ. ಆದರೆ, ಪ್ರಿಯಾಂಕಾ ತಿಮ್ಮೇಶ್ ಮಾತ್ರ ಸುಲಭವಾಗಿ ಬಿಸ್ಕತ್ ತಿಂದರು. ಈ ಮೂಲಕ ಮನೆಯಿಂದ ಹೊರಬಂದ ಮೇಲೂ ಅವರು ಟಾಸ್ಕ್ ಗೆದ್ದರು.
ಇದನ್ನೂ ಓದಿ: Bigg Boss Kannada 8: ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಬದಲಾದ ವೈಷ್ಣವಿ ಗೌಡ; ಬೇಸರಗೊಂಡ ರಘು